ಪಿಬಿ ರಸ್ತೆಯ ಬಿ.ಟಿ.ಪಾಟೀಲ ಮೈದಾನದಲ್ಲಿ ಆರಂಭಗೊಂಡ ಜಂಬೋ ಸರ್ಕಸ್‌ಗೆ ಚಾಲನೆ

ಪಿಬಿ ರಸ್ತೆಯ ಬಿ.ಟಿ.ಪಾಟೀಲ ಮೈದಾನದಲ್ಲಿ ಆರಂಭಗೊಂಡ ಜಂಬೋ ಸರ್ಕಸ್‌ಗೆ ಚಾಲನೆ Jumbo Circus inaugurated at B.T. Patil Maidan on PB Road

ರಾಣೇಬೆನ್ನೂರು, ಏ.27: ಸರ್ಕಸ್ ಸಾಹಸ ಪ್ರದರ್ಶನಗಳು ಹಾಗೂ ಸಂಗೀತ, ಕಲಾತ್ಮಕ ಚಟುವಟಿಗಳಿಂದ ಕೂಡಿದ್ದು ಸಾರ್ವಜನಿಕರ ಆಕರ್ಷಣೆಯಾಗಿದ್ದು ಕಲಾವಿದರಿಗೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ನಗರದ ಪಿಬಿ ರಸ್ತೆಯ ಬಿ.ಟಿ.ಪಾಟೀಲ ಮೈದಾನದಲ್ಲಿ ಆರಂಭಗೊಂಡ ಜಂಬೋ ಸರ್ಕಸ್‌ಗೆ ಚಾಲನೆ ನೀಡಿ ಮಾತನಾಡಿದರು. ನಮ್ಮ ರಾಣೇಬೆನ್ನೂರಿಗೆ 15 ವರ್ಷಗಳ ನಂತರ ಜಂಬೋ ಸರ್ಕಸ್ ಬಂದಿದ್ದು ಸಂತಸದ ಸಂಗತಿಯಾಗಿದ್ದು ಅವರ ಪ್ರದರ್ಶನ ಮನಸ್ಸಿಗೆ ಮುದ ನೀಡುವುದರ ಜೊತೆಗೆ ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ ಆದ್ದರಿಂದ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.   

ಭಾರತ ದೇಶದ ಇತಿಹಾಸದ ಪರಂಪರೆಯು ಕಲೆ, ಸಾಹಿತ್ಯ, ಸಂಗೀತಕ್ಕೆ ವಿಶೇಷ ಸ್ಥಾನಮಾನವಿದೆ. ಪಾಶ್ಚಾತ್ಯರೂ ನಾಚುವಂತ ಪ್ರತಿಭೆಗಳಿದ್ದು ಅವುಗಳನ್ನು ಗುರುತಿಸಿ ಬೆಳೆಸುವ ಕಾರ್ಯವಾಗಬೇಕಾಗಿದೆ.  ಇತ್ತಿಚಿನ ಯಾಂತ್ರಿಕ ಜೀವನದಲ್ಲಿ ಸರ್ಕಸ್, ನಾಟಕ, ಯಕ್ಷಗಾನದಂಥಹ ಕಲೆಗಳು ಕಣ್ಮರೆಯಾಗುತ್ತಿವೆ. ಕಲಾವಿದರ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ, ಪ್ರೋತ್ಸಾಹ ಸಿಗದಿರುವುದೇ ಇಂತಹ ಕಲೆಗಳು ನಶಿಸಿ ಹೋಗುವುದಕ್ಕೆ ಕಾರಣವೂ ಆಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.   ಸರ್ಕಸ್‌ನ ವ್ಯವಸ್ಥಾಪಕ ಸುರೇಶಬಾಬು, ಗುರುರಾಜ ಕಂಬಳಿ, ಸುರೇಶ ಭಾನುವಳ್ಳಿ, ಮಂಜಯ್ಯ ಚಾವಡಿ, ಮಲ್ಲಣ್ಣ ಅಂಗಡಿ ಸೇರಿದಂತೆ ಇತರರಿದ್ದರು.