ಪರಿಶ್ರಮ ಮತ್ತು ಶ್ರಮವೇ ಯಶಸ್ಸಿನ ಗುಟ್ಟು : ದುಂಡಿಗೌಡ್ರ

ಪರಿಶ್ರಮ ಮತ್ತು ಶ್ರಮವೇ ಯಶಸ್ಸಿನ ಗುಟ್ಟು : ದುಂಡಿಗೌಡ್ರ Hard work and dedication are the secret to success: Dundigowdra

 ಶಿಗ್ಗಾವಿ 7 : ಕಡು ಬಡತನದಲ್ಲಿ ತಂದೆ ತಾಯಿಗಳು ದುಡಿದು ಬಂದು ಮನೆ ನಡೆಸುವ ಪರಿಯನ್ನೂ ಮನಗಂಡು ನಾವಾದರು ಉತ್ತಮವಾಗಿ ಓದಬೇಕು ನಮ್ಮ ಪಾಲಕರಿಗೆ,ಕಲಿಸಿದ ಗುರುಗಳಿಗೆ ಹೆಚ್ಚಿನ ಗೌರವವನ್ನು ನೀಡಬೇಕೆಂದು ತಾವು ಮಾಡಿದ ಸಾಧನೆ ಪ್ರೇರಣಾದಾಯಕ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.  ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಭಾರತ ಸೇವಾ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ದ್ವಿತೀಯ ಪಿ.ಯು.ಸಿಯಲ್ಲಿ ಹೆಚ್ಚಿಗೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರುಬಡತನವು ಜೀವನದಲ್ಲಿ ದೊಡ್ಡ ಅಡೆತಡೆಯಾದರೂ, ಅದನ್ನು ಜಯಿಸುವ ಶಕ್ತಿ ಮನಸ್ಸಿನಲ್ಲಿದೆ. ಮನಸಿದ್ದರೆ ಮಾರ್ಗ ಎಂಬಂತೆ ಅನೇಕ ಮಹಾನ್ ವ್ಯಕ್ತಿಗಳು ಬಡತನದಲ್ಲಿಯೇ ತಮ್ಮ ಶಿಕ್ಷಣವನ್ನು ಮುಂದುವರಿಸಿ, ನಂತರ ಮಹತ್ತರ ಸಾಧನೆಗಳನ್ನು ಮಾಡಿದ್ದಾರೆ.

ಉದಾಹರಣೆಗೆ, ಡಾ. ಬಿ.ಆರ್‌.ಅಂಬೇಡ್ಕರ್,ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕಡು ಬಡತನದಲ್ಲಿದ್ದರೂ ಕನಸುಗಳನ್ನು ಬಿಟ್ಟುಕೊಡದೆ ಕಷ್ಟಪಟ್ಟು ಓದಿ ಸಾಧನೆ ಮಾಡಿದ್ದಾರೆ ಎಂದರು. ದಿವ್ಯಸಾನಿಧ್ಯವನ್ನು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸವಣೂರ ತಾಲೂಕಿನ ದಂಡಾಧಿಕಾರಿ ರವಿ ಕೊರವರ,ಯಲ್ಲಪ್ಪ ಗೋಣೆಣ್ಣವರ ಭಾಗವಹಿಸಿದ್ದರು.     ಕಲಾ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದ ಕುದ್ಸಿಯಾ ಪಟೇಲ್, ಮಂಜುನಾಥ ರಾಜಕುಮಾರ, ವಾಣಿಜ್ಯ ವಿಭಾಗದ ವಿಜಯ ಲಮಾಣಿ, ವಿಜ್ಞಾನ ವಿಭಾಗದ ಶೈನಾಜ ಖಾಜೀಖಾನ, ಅಶ್ವಿನಿ ನಾಗನೂರ ಸನ್ಮಾನ ಸ್ವೀಕರಿಸಿದರು.  ಈ ಸಂದರ್ಭದಲ್ಲಿ ರಮೇಶ ಸಾತಣ್ಣವರ,ರವಿ ಮಡಿವಾಳರ, ದೈಹಿಕ ಶಿಕ್ಷಕರುಗಳಾದ ಬಸವರಾಜ ಹೊಸಪೇಟೆ,ಭರತ ಕಳ್ಳಿಮನಿ, ಸಾಧಿಕ,ಮಂಜುನಾಥ ನವೀನ ಸಾಸನೂರ,ವಿಶ್ವನಾಥ ಗಾಣಿಗೇರ, ಚಂದ್ರು ಜಕ್ಕಣ್ಣವರ, ಮಾಲತೇಶ ನಾಗರಾಜ ನಡಗೇರಿ ಉಪಸ್ಥಿತರಿದ್ದರು.