ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ರಿಗೆ ಪತ್ರಕರ್ತರಿಂದ ಅಭಿನಂದನೆ

Journalists congratulate Minister Lakshmi Hebbalkar

ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ರಿಗೆ ಪತ್ರಕರ್ತರಿಂದ ಅಭಿನಂದನೆ

ಬೆಳಗಾವಿ 23: ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿಗೆ ಭಾಜನರಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬೆಳಗಾವಿ ಎಲೆಕ್ಟ್ರಾನಿಕ್ ಮೀಡಿಯಾ ಸಂಘದ ವತಿಯಿಂದ ಭಾನುವಾರ ಅಭಿನಂದನೆ ಸಲ್ಲಿಸಲಾಯಿತು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ಸಂಘದ ಅಧ್ಯಕ್ಷ ಮಂಜುನಾಥ ಪಾಟೀಲ್, ಉಪಾಧ್ಯಕ್ಷ ಚಂದ್ರು ಶ್ರೀರಾಮುಡು, ಕಾರ್ಯಕಾರಿಣಿ ಸದಸ್ಯರಾದ ಶ್ರೀಧರ ಕೋಟಾರಗಸ್ತಿ, ಸಂತೋಷ ಶ್ರೀರಾಮುಡು, ಅನಿಲ್ ಕಾಜಗಾರ, ಮೈಲಾರಿ ಪಟಾತ್, ಮಹಾಂತೇಶ ಕುರಬೆಟ್, ಪ್ರಹ್ಲಾದ ಪೂಜೇರಿ,  ಗುರುಪ್ರಸಾದ್, ಕೃಷ್ಣಾ ಸೇರಿದಂತೆ ವಿಡಿಯೋ ಜರ್ನಲಿಸ್ಟಗಳು ಉಪಸ್ಥಿತರಿದ್ದರು.