ಜೊಯಿಡಾ: ವಿವಿಧ ಇಲಾಖೆಗಳ ಪ್ರಗತಿ ಪರಿಸಿಲನಾ ಸಭೆ

 ಲೋಕದರ್ಶನ ವರದಿ 

ಜೊಯಿಡಾ 13: ತಾಲೂಕ ಪಂಚಾಯತ ಅಧ್ಯಕ್ಷೆ ನರ್ಮಧಾ ಪಾಟ್ನೆಕರ ಅಧ್ಯಕ್ಷತೆಯಲ್ಲಿ ಇಂದು ತಾಲೂಕ ಪಂಚಾಯತ ಸಭಾ ಭವನದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಸಿಲನಾ ಸಭೆ  ಇಂದು ಶುಕ್ರವಾರ ನಡೆಯಿತು.

                ಕೃಷಿ ಇಲಾಖೆಯ ಬಗ್ಗೆ ಮಾಹಿತಿ ನೀಡುತ್ತ ಕೃಷಿ ಅಧಿಕಾರಿ ಪಿ.ಆಯ್ ಮಾನೆ ಅವರು ತಾಲೂಕಿನಲ್ಲಿ ಒಟ್ಟಾರೆ ಕಳೆದ ವರ್ಷಕ್ಕಿಂತಲೂ ಹೆಚ್ಚು ಮಳೆಯಾಗಿದ್ದರೂ ಸೂಪಾ ಹೋಬಳಿಯಲ್ಲಿ ಮಾತ್ರ ಶೇ 4 ರಷ್ಟು ಕಡಿಮೇ ಮಳೇಯಾಗಿದೆ. ಬತ್ತದ ಬೇಳೆ ಉತ್ತಮ ಸ್ಥಿತಿಯಲ್ಲಿದ್ದು ಈಗ ತೆನೆ ಬೀಡುವ ಹಂತದಲ್ಲಿದೆ. ಈಗ ಬೇಳೆಗೆ ತೇವಾಂಶ ಬೇಕು.

                ಕಳೇದ ವರ್ಷಕ್ಕಿಂತಲೂ ಬತ್ತಕ್ಕೆ ವರ್ಷ ರೋಗಬಾದೆ ಕಡಿಮೇ ಇದೆ. ತೆನೆ ಬಿಡುವ ಹಂತದಲ್ಲಿ ರಸ ಹೀರುವ ಕೀಟದ ಬಾದೆ ಇರುವ ಸಾದ್ಯತೆ ಕಾರಣ ಹತೋಟಿಗಾಗಿ ಔಷದ ಸಿಂಪಡಿಸಬೇಕಾಗಬಹುದು. ನಮ್ಮಲ್ಲಿ ರೈತರಿಗೆ ಸಾಕಷ್ಟು ಔಷದ ಲಬ್ಯತೆ ಇದೆ ಎಂದರು.

                ರವಿ ಆಳ್ಕೆಯವರು ನಂದಿಗದ್ದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಹಿಂದಿನ ವರ್ಷದಲ್ಲಿ ಮೂರು ಅತಿಥಿ ಶಿಕ್ಷಕರನ್ನು ಇಲ್ಲಿ ತೆಗೆದುಕೊಳ್ಳಲಾಗಿತ್ತು ವರ್ಷ ಕೂಡಾ ಕಳೆದ ವರ್ಷದಂತೆ 3 ಅತಿಥಿ ಶಿಕ್ಷಕರನ್ನು ತೆಗೆದುಕೊಂಡಿದ್ದು ಒಬ್ಬರನ್ನು ತೆಗೆದು ಹಾಕುವಂತೆ ಹೇಳಿದ್ದಾರೆ ಯಾಕೆ? ಎಂದು ಶಿಕ್ಷಣ ಇಲಾಖೆಯ ಬಿ . ಪರವಾಗಿ ಬಂದ ಅಬ್ದುಲ್ ರೇಹಮಾನ ಅವರನ್ನು ಪ್ರಶ್ನಿಸಿದಾಗ ಇಲಾಖಾ ನಿಯಮದಂತೆ ಕಾಲಿ ಇರುವ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕಾಗುತ್ತದೆ.

                ತಾಲೂಕಿನಲ್ಲಿ ಪ್ರಾಥಮಿಕ ಶಾಲೆಗಳಿಗೆ ಒಟ್ಟು 131+2 = 133 ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ನೀಡಿದರು.

                ಬಗ್ಗೆ ಜಿ.ಪಂ ಸದಸ್ಯ ರಮೇಶ ನಾಯ್ಕ ಆಕ್ಷೇಪ ವ್ಯಕ್ತಪಡಿಸಿ ಕಳೆದ ವರ್ಷ ಅತಿಥಿ ಶಿಕ್ಷಕರನ್ನು ತೆಗೆದುಕೊಂಡ ಸ್ಥಳದಲ್ಲಿ ವರ್ಷ ಕೂಡ ತೆಗೆದುಕೊಳ್ಳಲಾಗಿದೆ. ಯಾಕೆ ಅತಿಥಿ ಶಿಕ್ಷಕರನ್ನು ತೆಗೆದುಹಾಕುತ್ತಿದ್ದಿರಾ? ಕಳೇದ ಸಭೇಯಲ್ಲಿ ಎಲ್ಲಾ ಶಿಕ್ಷಕರು ಬತರ್ಿಯಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಿರಿ ಈಗ ಬೇರೊಂದು ಕಾರಣ ಹೆಳುತ್ತಿರಿ ಎಂದಾಗ ಬಿಇಒ ಅವರು ಬೇಂಗಳೂರಿಗೆ ಮಿಟಿಂಗ್ ಎಂದು ಹೋಗಿದ್ದಾರೆ ಅವರು ಬಂದ ಮೇಲೆ ಇದನ್ನು ಸರಿ ಪಡಿಸುವುದಾಗಿ ಮಾಹಿತಿ ನಿಡಿದರು.

                ತೋಟಗಾರಿಕಾ ಇಲಾಖೆಯ ಮಾಹಿತಿ ನೀಡುತ್ತ ಅಬ್ದುಲ್ ದಳವಾಯಿಯವರು ತಾಲೂಕಿನಲ್ಲಿ ಒಟ್ಟು 530 ಹೇಕ್ಟೆರ್ ನಲ್ಲಿ  ತೋಟಗಾರಿಕಾ ಬೇಳೆ ಹಾನಿಯಾಗಿದೆ. ಇದು ನಂದಿಗದ್ದಾ, ಪ್ರಧಾನಿ, ನಾಗೋಡಾ ಮತ್ತು ಉಳವಿ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಹೆಚ್ಚಿಗೆ ಇವೆ.

                ಬಗ್ಗೆ ಪರಿಸಿಲಿಸಿ ಪರಿಹಾರ ನೀಡಿಕೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

                ತಾಲೂಕಿನ ಡಿಗ್ರಿ ಕಾಲೇಜಿನ  ಬಗ್ಗೆ ಮಾಹಿತಿ ನೀಡಿದ ಪ್ರಾಶುಪಾಲರಾದ ಅಂಗಡಿಯವರು ಡಿಗ್ರಿ  ಕಾಲೇಜಿಗೆ ಕಂಪೌಂಡ ಮತ್ತು ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಸೆ ಬಗ್ಗೆ ತಿಳಿಸಿ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.

                ತಾಲೂಕಾ ವೈಧ್ಯಾಧಿಕಾರಿ ಸುಜಾತಾ ಉಕ್ಕಲಿಯವರು ತಾಲೂಕಿನಲ್ಲಿ ಕುಡಿಯುವ ನೀರನ್ನು ಪರಿಸಿಲಿಸಲಾಗುತ್ತಿದೆ. ಕುಂಬಾರವಾಡಾದ ಭಾವಿ,ರಾಮನಗರ ಮತ್ತು ಜೊಯಿಡಾ ಕುಡಿಯುವ ನೀರು ಒಟ್ಟು ಮೂರು ಕಡೆ ನೀರಿನಲ್ಲಿ ತೊಂದರೆ ಕಾಣಿಸಿದೆ. ಇದನ್ನು ಕುಡಿಯಲು ಯೋಗ್ಯವಾಗುವಂತೆ ಔಷದ ಹಾಕಿ ಶುದ್ದ ಮಾಡಲಾಗುವುದು ಎಂದರು.

                ಕುಡಿಯುವ ನೀರು, ವಿದ್ಯುತ್,ಜಿ.ಪಂ,ಲೋಕೊಪಯೋಗಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಪ್ರಗತಿ ಪರಿಸಿಲನೆ ನಡೆಯಿತು.

                ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷ ವಿಜಯ ಪಂಡೀತ,ಜಿ.ಪಂ ಸದಸ್ಯರಾದ ರಮೇಶ ನಾಯ್ಕ, ಸಂಜಯ ಹಣಬರ, ತಾ.ಪಂ ಸದಸ್ಯರಾದ ಶರಧಶ್ಚಂದ್ರ ಗುರ್ಜರ,ಅಚರ್ಿತಾ ಮೀರಾಶಿ,ತಹಸಿಲ್ದಾರ ಸಂಜಯ ಕಾಂಬಳೆ,ತಾ.ಪಂ ಕಾ ನಿ ಪ್ರಕಾಶ ಹಾಲಮ್ಮನವರ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು

ಉಪಸ್ಥಿತರಿದ್ದರು.