ಶ್ರೀಲಂಕಾ ಪ್ರವಾಸ-ಐಪಿಎಲ್‌ನಿಂದಲೂ ಜೊಫ್ರಾ ಆರ್ಚರ್ ಔಟ್

ಲಂಡನ್, ಫೆ 6 :    ಇಂಗ್ಲೆೆಂಡ್ ತಂಡ ಕಳೆದ 2019 ಜುಲೈ 14 ರಂದು ಚೊಚ್ಚಲ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವ ವೇಗಿ ಜೊಫ್ರಾ ಆರ್ಚರ್ ಅವರು ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿ ಹಾಗೂ 2020ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹೊರಗುಳಿಯುತ್ತಿದ್ದಾರೆ.

ಜೊಫ್ರಾ ಆರ್ಚರ್ ಅವರು ಬಲ ಮೊಣಕೈಗೆ ಸ್ಟ್ರೆಸ್  ಫ್ರಾಕ್ಚರ್ ಆಗಿರುವ ಹಿನ್ನೆೆಯಲ್ಲಿ ಅವರು ಟೆಸ್ಟ್‌ ಹಾಗೂ ಐಪಿಎಲ್‌ಗೆ ಅಲಭ್ಯರಾಗಿದ್ದಾರೆ.

‘ಬುಧವಾರ ಆರ್ಚರ್ ಅವರನ್ನು ಸ್ಕ್ಯಾನಿಂಗ್ ಗೆ ಒಳಪಡಿಸಲಾಗಿತ್ತು. ಅವರಿಗೆ ಬಲ ಮೊಣಕೈ ಸ್ಟ್ರೆಸ್  ಫ್ರಾಕ್ಚರ್ ಆಗಿರುವುದು ಸ್ಕ್ಯಾನಿಂಗ್ ವರದಿ ಧೃಡಪಡಿಸದೆ,’’ ಎಂದು ಇಂಗ್ಲೆೆಂಡ್ ಹಾಗೂ ವೇಲ್ಸ್‌  ಕ್ರಿಕೆಟ್ ಅಕಾಡೆಮಿ ಸ್ಪಷ್ಟಪಡಿಸಿದೆ.

ಜೊಫ್ರಾ ಆರ್ಚರ್ ಅವರು ಇಸಿಬಿ ವೈದ್ಯಕೀಯ ತಂಡದೊಂದಿಗೆ ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದಾರೆ. ಜೂನ್‌ನಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ನಡೆಯಲಿರುವ  ಮೂರು ಪಂದ್ಯಗಳ ಟೆಸ್ಟ್‌ ಸರಣಿಗೆ ಅವರು ಲಭ್ಯರಾಗಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ 3-1 ಅಂತರದಲ್ಲಿ ಇಂಗ್ಲೆೆಂಡ್ ಜಯ ಸಾಧಿಸಿದ ಬಳಿಕ ಜೊಫ್ರಾ ಆರ್ಚರ್ ಅವರು ಇಂಗ್ಲೆೆಂಡ್‌ಗೆ ಮರಳಿದ್ದರು. ಮಾರ್ಚ್ 19 ರಿಂದ ಇಂಗ್ಲೆೆಂಡ್ ತಂಡ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಶ್ರೀಲಂಕಾ ವಿರುದ್ಧ  ಆಡಲಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ ಪಂದ್ಯವಾಡಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ ರಾಜಸ್ಥಾನ ರಾಯಲ್ಸ್‌ ಪರ ಆಡುವ ಜೊಫ್ರಾ ಆರ್ಚರ್ ಅವರು ಮುಂದಿನ ಆವೃತ್ತಿಯಿಂದ ಸಂಪೂರ್ಣ  ಹೊರಗುಳಿಯಲಿದ್ದಾರೆ.