23ರಂದು ಉದ್ಯೋಗ ಮೇಳ: ಲಾಭ ಪಡೆದುಕೊಳ್ಳಲು ನಾವಲಗಿ ಕರೆ
ಕಾಗವಾಡ 20: ಬೆಳಗಾವಿಯ ಕೌಶಲ್ಯ ಅಭಿವೃದ್ಧಿ ಉದ್ದಿಮೆ ಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಇನ್ನುಳಿದ ಸಂಘ ಸಂಸ್ಥೆಗಳ ಸಹಕಾರದಿಂದ ರವಿವಾರ ದಿ. 23 ರಂದು ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಉದ್ಯೋಗ ಆಕಾಂಕ್ಷಿಗಳು ಇದರ ಲಾಭ ಪಡೆದುಕೊಳ್ಳಬೇಕೆಂದು ಬೆಳಗಾವಿ ಉದ್ಯೋಗ ವಿನಿಮಯ ಕಚೇರಿಯ ಜಿಲ್ಲಾ ಸಂಯೋಜಕ ಸಂತೋಷ ನಾವಲಗಿ ಕರೆ ನೀಡಿದರು.
ಅವರು, ಗುರುವಾರ ದಿ. 20 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಉದ್ಯೋಗ ಮೇಳ ಯಶಸ್ವಿಯಾಗಿಸಲು ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಮತ್ತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ಬೆಳಗಾವಿ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಬೆಳಗಾವಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಬೆಳಗಾವಿ, ಮಲ್ಲಿಕಾರ್ಜುನ ವಿದ್ಯಾಪೀಠ ಬೆಳಗಾವಿ, ಶಿವಾನಂದ ಮಹಾವಿದ್ಯಾಲಯ ಕಾಗವಾಡ ಇವರ ಸಹಯೋಗದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ವಿದ್ಯಾಪೀಠದ ಅಧ್ಯಕ್ಷ ಗುರಗೌಡ ಪಾಟೀಲ ಮಾತನಾಡಿ, ಗಡಿಭಾಗದಲ್ಲಿ ಪ್ರಥಮವಾಗಿ ಆಯೋಜಿಸುವ ಉದ್ಯೋಗ ಮೇಳದಲ್ಲ ಎಕಸ್, ನವ ಭಾರತ ಆಗ್ರೋ ಇಂಡಸ್ಟ್ರೀಸ್, ಮೇಡ್ ಪ್ಲಸ, ಪೇಟಿಎಂ ನಂತಹ ಅನೇಕ ಹೆಸರಾಂತ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲಗೊಳ್ಳಲಿವೆ. ಎಸ್ ಎಸ್ ಎಲ್ ಸಿ ದಿಂದ ಪದವಿ ವರೆಗೆ ಓದಿರುವ ಮತ್ತು ಐಟಿಐ, ಡಿಪ್ಲೋಮಾ, ಬಿಇ,ಎಂಬಿಎ, ಎಂಕಾಂ, ಎಂಎ ಪದವೀಧರರು ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು
ಪ್ರಾ. ಡಾ. ಎಸ್ ಎ. ಕರ್ಕಿ ಮಾತನಾಡಿ, ಶಿವಾನಂದ ಮಹಾವಿದ್ಯಾಲಯದಲ್ಲಿ ಬಿಎ ಮತ್ತು ಬಿಕಾಂ ವರೆಗೆ ಓದಿರುವ ಅನೇಕ ಯುವಕರು ಅಲ್ಲದೆ ತಾಲೂಕಿನ ಬೇರೆ ಬೇರೆ ಮಹಾವಿದ್ಯಾಲಯಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಗುರುಗೌಡ ಪಾಟೀಲ ,ಬಿ ಎ ಪಾಟೀಲ, ಜೆ ಕೆ ಪಾಟೀಲ, ಡಾ.ಎ. ಎಂ. ಜಕ್ಕನವರ, ಅಶೋಕ ಪಾಟೀಲ ಸೇರಿದಂತೆ ಅನೇಕರು ಇದ್ದರು.