ದಿ. 23 ರಂದು ಬೃಹತ್ ಉದ್ಯೋಗಮೇಳ-2025

Job fair-2025 on 23rd

ಧಾರವಾಡ 21: ನಗರದ ವಿದ್ಯಾಗಿರಿಯ ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಜೆ.ಎಸ್‌.ಎಸ್ ಬನಶಂಕರಿ ಪದವಿ ಕಾಲೇಜಿನಲ್ಲಿ ಬೆಂಗಳೂರಿನ ಡೆವೆಲಪ್ ಕಂಪನಿಯ ಸಹಯೋಗದಲ್ಲಿ ಡೆವೆಲಪ್ ಉದ್ಯಮ ಬೃಹತ್ ಉದ್ಯೋಗಮೇಳ-2025 ನ್ನು ದಿ. 23 ರಂದು ಹಮ್ಮಿಕೊಳ್ಳಲಾಗಿದೆ.  

ಈ ಉದ್ಯೋಗಮೇಳದಲ್ಲಿ 55 ಕ್ಕೂ ಹೆಚ್ಚು ಕಂಪನಿಗಳು ವಿವಿಧ ಹುದ್ದೆಗಳಿಗೆ ಸಂದರ್ಶನ ನಡೆಸುವವು. 5000 ಕ್ಕಿಂತ ಹೆಚ್ಚು ಉದ್ಯೋಗಾವಕಾಶಗಳಿದ್ದು, ಎಸ್‌.ಎಸ್‌.ಎಲ್‌.ಸಿ, ಪಿ.ಯು.ಸಿ,        ಐ.ಟಿ.ಐ, ಡಿಪ್ಲೋಮಾ, ಯಾವುದೇ ಪದವಿ, ತಾಂತ್ರಿಕ ಪದವಿ ಹಾಗೂ ಯಾವುದೇ ಸ್ನಾತಕೊತ್ತರ ಪದವಿ ಪಾಸಾದ ಹಾಗೂ ಕೊನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗಹಿಸಬಹುದು ಆಸಕ್ತರು https://forms.gle/9GK8nJNbHsZAz2wX8 ಮೂಲಕ ಅಥವಾ ನೇರವಾಗಿ ಭೇಟಿ ನೀಡಿಯೂ ಸಹ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.