ಜಾರ್ಖಂಡ್ ಸಂಸ್ಥಾಪನಾ ದಿನ, ರಾಷ್ಟ್ರಪತಿ ,ಪ್ರಧಾನಿ ಶುಭ ಹಾರೈಕೆ

ನವದೆಹಲಿ, ನವೆಂಬರ್ 15 :        ಜಾರ್ಖಂಡ್  ರಾಜ್ಯ ಸಂಸ್ಥಾಪನಾ ದಿನದ ಅಂಗವಾಗಿ ರಾಷ್ಠ್ರಪತಿ  ರಾಂನಾಥ್ ಕೋವಿಂದ್, ಉಪರಾಷ್ಟ್ರಪತಿ  ವೆಂಕಯ್ಯನಾಯ್ಡು  ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರುಗಳು ರಾಜ್ಯದಜನತೆಗೆ ಶುಭ ಕೋರಿದ್ದಾರೆ.  ಸಂಸ್ಥಪನಾ ದಿನದ ಅಂಗವಾಗಿ ಜಾರ್ಖಂಡ್ ಜನರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು  ಕೋವಿಂದ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಜಾರ್ಖಂಡ್ ಶ್ರೀಮಂತ, ನೈಸರ್ಗಿಕ ಸಂಪನ್ಮೂಲ  ಮತ್ತು ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ರಾಜ್ಯವಾಗಿದೆ, ಬಿರ್ಸಾ ಮುಂಡಾ ಅವರ ನಾಯಕತ್ವದಲ್ಲಿ   ಜಾರ್ಖಂಡ್ ಇನ್ನು ಎತ್ತರದ  ಪ್ರಗತಿ ಸಾಧಿಸಲಿ ಎಂದೂ ಅವರು ಹಾರೈಸಿದ್ದಾರೆ  ಈ ಸಂದರ್ಭದಲ್ಲಿ ಜಾರ್ಖಂಡ್  ರಾಜ್ಯದ ಜನರಿಗೆ ಉಪರಾಷ್ಟ್ರಪತಿ ವೆಂಕತ್ಯನಾಯ್ಡು ನಾಯ್ಡು ಸಹ ಅಭಿನಂಧಿಸಿದ್ದಾರೆ.  ನಕ್ಸಲ್ ಪೀಡಿತ ರಾಜ್ಯದಲ್ಲಿ 81 ಸದಸ್ಯರ ವಿಧಾನಸಭೆಗೆ ಚುನಾವಣೆ ಇದೇ   30 ರಿಂದ ಡಿಸೆಂಬರ್ 20 ರವರೆಗೆ ಐದು ಹಂತಗಳಲ್ಲಿ ನಡೆಯಲಿದ್ದು, ಡಿಸೆಂಬರ್ 23 ರಂದು ಎಣಿಕೆ ನಡೆಯಲಿದೆ. ಮಾದರಿ ನೀತಿ ಸಂಹಿತೆ ಈಗ ರಾಜ್ಯದಲ್ಲಿ ಜಾರಿಯಲ್ಲಿದೆ . ರಾಜ್ಯ ವಿಧಾನಸಭೆಯ  ಅವಧಿ ಜನವರಿ 5, 2020 ಕ್ಕೆ ಮುಕ್ತಾಯಗೊಳ್ಳಲಿದೆ.