ರಾಂಚಿ, ನ.11 : ಜಾರ್ಖಂಡ್ ವಿಧಾನಸಭೆಗೆ ಎರಡನೇ ಹಂತದ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಈ ಮೂಲಕ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಎರಡನೇ ಹಂತದಲ್ಲಿ 20 ಕ್ಷೇತ್ರಗಳಿಗೆ ಡಿಸೆಂಬರ್ 7ರಂದು ಮತದಾನ ನಡೆಯಲಿದೆ. ರಾಂಚಿ, ಸಿಮ್ದೆಗ, ಕುಂತಿ, ಗುಮ್ಲಾ ಪೂರ್ವ, ಸಿಂಗ್ಭುಮ್ ಪಶ್ಚಿಮ, ಸಿಂಗ್ಭುಮ, ಸರಯಿಕೆಲ-ಖಾರಸವನ್ ಕ್ಷೇತ್ರಗಳಲ್ಲಿ ಈ 20 ಕ್ಷೇತ್ರಗಳು ಹರಡಿಕೊಂಡಿವೆ. ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ನವೆಂಬರ್ 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 21 ಕೊನೆಯ ದಿನವಾಗಿದೆ. ಈ ಹಂತದಲ್ಲಿ 47.52 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಡಿಸೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.