ಲೋಕದರ್ಶನ ವರದಿ
ಬೈಲಹೊಂಗಲ 21: ಪಟ್ಟಣದ ಶ್ರೀಗುರು ಮಡಿವಾಳೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಠದಲ್ಲಿ ಪುರವಂತರ ಸೇವೆ ಜರುಗಿತು.
ಶ್ರೀಮಠದ ಮುಂಭಾಗದ ಆವರಣದಲ್ಲಿ ಪುರವಂತರು ವಡಪುಗಳನ್ನು ಹೇಳುತ್ತಾ ದೇವರ ಸ್ಮರಣೆ ಮಾಡಿದರು. ಕೈಯಲ್ಲಿ ಖಡ್ಗ ಹಿಡಿದು ಖಡೇ ಖಡೇ ರುದ್ರ ಎಂದು ವೀರಗಾಸಿ ವೇಷಧರಿಸಿದ ಪುರವಂತರು ಶಸ್ತ್ರ ಚುಚ್ಚಿಕೊಳ್ಳುವ ದೃಶ್ಯ ಭಕ್ತರನ್ನು ರೊಮಾಂಚನಗೊಳಿಸಿತು. ಮಡಿವಾಳೇಶ್ವರ ಸ್ವಾಮೀಜಿ, ಸಿದ್ದರಾಮ ಶಾಸ್ತ್ರೀ ಹಿರೇಮಠ, ಅರ್ಚಕ ಗದಗಯ್ಯ ರುದ್ರಾಕ್ಷೀಮಠ, ಬಸವಪ್ರಭು ಬೆಳಗಾವಿ, ಮಹಾಂತೇಶ ಅಕ್ಕಿ, ಈರಪ್ಪ ಹಣಸಿ, ಪುರವಂತರಾದ ಬಸನಗೌಡ ಪಾಟೀಲ, ಅಜರ್ುನ ಕಮ್ಮಾರ, ಕಾಳಪ್ಪ ಪತ್ತಾರ, ರಾಜು ಪತ್ತಾರ, ನಿಂಗಪ್ಪ ಹಂಪನ್ನವರ, ಶ್ರೀಶೈಲ ಮಠಪತಿ, ಮಡ್ಡೆಪ್ಪ ಶಿರೋಳ, ಶಂಕರ ಹಲಕಿ ಸದ್ಭಕ್ತರು ಇದ್ದರು.