ಬೆಳಗಾವಿ, 21: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬೆಳಗಾವಿ ಜಿಲ್ಲಾಪಂಚಾಯತ್ ಬೆಳಗಾವಿ ಹಾಗೂ ಮುತಗಾ ಗ್ರಾಮ ಪಂಚಾಯತ ಬೆಳಾಗಾವಿ ತಾಲೂಕ ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ ಬೆಳಾಗಾವಿ ಇವರ ಸಹಯೋಗದಲ್ಲಿ, ಜಿಲ್ಲೆಯ ಬೆಳಾಗಾವಿ ತಾಲೂಕಿನ ಮುತಗಾ ಗ್ರಾಮಪಂಚಾಯತಿ ಮುತಗಾ ಗ್ರಾಮದಲ್ಲಿ ದಿ, 21ರಂದು ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲ್ಯ ಕುರಿತು ಸ್ವ ಸಹಾಯ ಸಂಘ ದ ಮಹಿಳೆಯರಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ದಲ್ಲಿ ಮುತಗಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವಂತ ಡಿ ಕೆಡೆಮನಿ ಭಾಗವಹಿಸಿ ಮಹಿಳೆಯರಿಗೆ ಕುಡಿಯುವ ನೀರಿನ ಮಹತ್ವ ಜಲ ಮೊಲಗಳ ರಕ್ಷನೆ , ಸ್ವಚ್ಛ ಪರಿಸರ, ಶೌಚಾಲಯಗಳನ್ನು ಕಟ್ಟಿ ಬಳಸುವ ಕುರಿತು ಪ್ಲಾಸ್ಟಿಕ್ ಬಳಿಕೆ ಮಾಡದಿರುವ ಬಗ್ಗೆ ಮಾಹಿತಿಯನ್ನು ನೀಡಿದರು.
ಮಹಿಳೆಯರಿಗೆ ಶುದ್ಧ ಕುಡಿಯುವ ನೀರಿನ ಮಹತ್ವ, ಮನೆಯಮಟ್ಟದಲ್ಲಿ ಕಸ ವಿಂಗಡಣೆ ಕುಡಿಯುವ ನೀರಿನ ಮಹತ್ವ, ಜಲ ಮೂಲಗಳ ರಕ್ಷಣ, ಶೌಚಾಲಯಗಳ ಮಹತ್ವ, ಘನತ್ಯಾಜ್ಯ ವಿಂಗಡಣೆ ಹಾಗು ವಿಲೇವಾರಿ ಕುರಿತು ಮಾಹಿತಿ ನೀಡಿ ಗ್ರಾಮದ ಪ್ರಮುಖ ಬೀದಿ ಗಳಲ್ಲಿ ಘೋಷಣೆ ಕೊಗುತ್ತ ಗ್ರಾಮದ ಜನರಲ್ಲಿ ಮಾಹಿತಿ ನೀಡಲಾಯಿತು ಕುಮಾರಿ ನಯನಾ ಎಚ್ ಏನ್, ಸವಿತಾ ಹುಕ್ಕೇರಿ ಉಪಸ್ಥಿತರಿದ್ದರು ಸಂಘದ ಮಹಿಳೆಯರು ಪ್ರಾಥನೆ ಮಾಡಿದರು, ತನುಜಾ ಪಾಟೀಲ ಸ್ವಗತಿಸಿದರು, ಭಾರತಿ ನಾಯಕ ವಂದಿಸಿದರು ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ ಶಂಕರ ಮಲೇದಾರ ಹಾಜರಿದ್ದರು.