ಎ. 12ರಂದು ಜಂಬಗಿ ಗ್ರಾಮದಲ್ಲಿ ಜಂಗಿಕುಸ್ತಿ ಆಯೋಜನೆ

Jangi wrestling organized in Jambagi village on 12th A.

ಲೋಕದರ್ಶನ ವರದಿ 

ಎ. 12ರಂದು ಜಂಬಗಿ ಗ್ರಾಮದಲ್ಲಿ ಜಂಗಿಕುಸ್ತಿ ಆಯೋಜನೆ 

ಸಂಬರಗಿ 21: ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿ ಇರುವ ಜಂಬಗಿ ಗ್ರಾಮದ ಹನುಮಾನ ದೇವಸ್ಥನ ಆವರಣದ ಕುಸ್ತಿ ಮೈದಾನದಲ್ಲಿ ಎಪ್ರೀಲ್ 12ರಂದು ರಾಷ್ಟ್ರಮಟ್ಟದ ಜಂಗಿಕುಸ್ತಿ ಆಯೋಜಿಸಲಾಗಿದೆ ಎಂದು ಆಂಜನೇಯಾ ಟ್ರ್ಯಾವಲ್ಸ್‌ ಹಾಗೂ ಹನುಮಾನ ದೇವಸ್ಥನ ಕಮೀಟಿ ಅಧ್ಯಕ್ಷರಾದ ಮಾಣಿಕ ಸೂರ್ಯವಂಶಿ ಹೇಳಿದರು.  

ಜಂಬಗಿ ಗ್ರಾಮದಲ್ಲಿ ಶುಕ್ರವಾರ ತಮ್ಮ ಕಾರ್ಯಲಯದಲ್ಲಿ ಸುದ್ಧಿಗಾರರೊಂದಿಗೆ ಮತನಾಡಿ ಅವರು ಎಪ್ರೀಲ್ 12ರಂದು ಕುಂಭಮೇಳದೊಂದಿಗೆ ಹನುಮಾನ ದೇವರ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಏರಿ​‍್ಡಸಲಾಗಿದೆ. ಇದೇ ದಿನ ಬೆಳಗ್ಗೆ 10 ಗಂಟೆಗೆ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಜನರಲ್ ನಾಲೆಡ್ಜ್‌ ಪರಿಕ್ಷೇಯನ್ನು ಏರಿ​‍್ಡಸಲಾಗಿದೆ. ಅದರಲ್ಲಿ ಪ್ರಥಮ ಬಹುಮಾನ 25 ಸಾವಿರ ರೂಪಾಯಿ, ದ್ವೀತಿಯ ಬಹುಮಾನ 15 ಸಾವಿರ ರೂಪಾಯಿ ಮತ್ತು ತೃತಿಯ ಬಹುಮಾನ 10 ಸಾವಿರ ರೂಪಾಯಿಗಳನ್ನು ನೀಡಲಾಗುವುದು. 

ಕುಸ್ತಿ ಪಂದ್ಯಾವಳಿಯಲ್ಲಿ 51 ರೂಪಾಯಿದಿಂದ 1 ಲಕ್ಷದ ವರೆಗೆ ವಿಜೇತ ಕುಸ್ತಿ ಪಟುಗಳಿಗೆ ಬಹುಮಾನ ನೀಡಲಾಗುವುದು. ಹನುಮಾನ ಜಯಂತಿಯ ದಿನ ಬರುವ ಭಕ್ತಾದಿಗಳಿಗೆ ಅಥಣಿ ಹಾಗೂ ಕವಟೆಮಹಾಂಕಾಳ ಘಟಕದಿಂದ ಬಸ ಸೌಲಭ್ಯ ಕಲ್ಪಿಸಲಾಗಿದೆ. ದೇವರಿಗೆ ಬರುವ ಭಕ್ತಾದಿಗಳಿಗೆ ಬೆಳಗ್ಗಿನಿಂದ ಸಾಯಂಕಾಲದವರೆಗೆ ಮಹಾ ಪ್ರಸಾದ ನೀಡಲಾಗುವುದು. ಸುತ್ತ ಮುತ್ತಲಿನ ಗ್ರಾಮಗಳ ಜನರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದ್ದಾರೆ.