ಜಮ್ಮು ಕಾಶ್ಮೀರ : ಜೈಷ್ - ಎ - ಮೊಹಮದ್ ಉಗ್ರರ ಬಂಧನ

 ಶ್ರೀನಗರ, ನ 19 :     ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಾಲ್ವರು ಜೈಷ್ - ಎ - ಮೊಹಮದ್ ಉಗ್ರರರನ್ನು ಬಂಧಿಸಿದ್ದಾರೆ.    ಅರಿಹಾಳ್ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ಸ್ಫೋಟಿಸಿದ ಪರಿಣಾಮ ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದು ಅನೇಕರಿಗೆ ಗಾಯಗಳಾಗಿವೆ. ಈ ಘಟನೆ ಸೇರಿದಂತೆ ಅನೇಕ ಭಯೋತ್ಪಾಕರ ಚಟುವಟಿಕೆಗಳಲ್ಲಿ ಉಗ್ರರು ತೊಡಗಿದ್ದರು ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.    ಈ ಮಧ್ಯೆ ಜಾರಿ ನಿರ್ದೇಶನಾಲಯ ಇಬ್ಬರು ಹಿಜ್ ಬುಲ್ ಮುಜಾಹಿದ್ದೀನ್ ಭಯೋತ್ಪಾದಕರಿಗೆ ಸೇರಿದ ಸ್ಥಿರಾಸ್ತಿಯನ್ನು ವಶಪಡಿಸಿಕೊಂಡಿದೆ.     ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿನ ಈ ಸ್ಥಿರಾಸ್ತಿಗಳು ಗುಲಾಂ ನಬಿ ಖಾನ್ ಅಲಿಯಾಸ್ ಅಮಿರ್ ಖಾನ್ ಮತ್ತು ಭರ್ಕತುಲ್ಲಾ ಹೆಸರಿನಲ್ಲಿವೆ ಎಂದು ತಿಳಿದು ಬಂದಿದೆ.