ಜೈನ ಸಮುದಾಯದಿಂದ ಶಾಸಕ ಲಕ್ಷ್ಮಣ ಸವದಿಗೆ ಸತ್ಕಾರ
ಸಂಬರಗಿ 19: ಜೈನ ಧರ್ಮೀಯ ವಿದ್ಯಾರ್ಥಿಗಳಿಗೆ ಆಹಾರ ಪದ್ಧತಿಯಿಂದಾಗುವ ಅಂತರವನ್ನು ತಪ್ಪಿಸಲು ಜೈನ್ ಧರ್ಮದ ವಿದ್ಯಾರ್ಥಿಗಳಿಗೆ ಪ್ರತೇಕವಾದ ಸರರ್ಕಾರಿ ವಸತಿ ನಿಲಯವನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರವನ್ನು ಕೋರಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಮದಬಾಂವಿ ಹಾಗು ತೆವರಟ್ಟಿ ಗ್ರಾಮದ ಜೈನ ಸಮುದಾಯದಿಂದ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದರು. ಅಂಹಿಸಾ ಪರಮೋ ಧರ್ಮ ಎಂದು ಹೇಳಿ ಅಂಹಿಸಾ ಮಾರ್ಗವನ್ನು ಜಗಕ್ಕೆ ಸಾರಿದ ಜೈನ ಧರ್ಮದ ಅಥಣಿ ತಾಲೂಕಿನ ಜೈನ ಮುನಿಗಳು ಕಾಂಗ್ರೆಸ್ ಐ ಪಕ್ಷಕ್ಕೆ ಹಸ್ತದ ಚಿನ್ನೆಯನ್ನು ನೀಡಿ ಕಾಂಗ್ರೆಸ್ ಪಕ್ಷ ಹಲವು ದಶಕಗಳ ದೇಶವನ್ನು ಆಳುವಂತಾಯಿತು ಎಂದರು.
ಶಾಂತಿಗೆ ಹೆಸರಾದವರು ಜೈನ ಧರ್ಮಿಯರು, ಒಬ್ಬ ಜನ ಪ್ರತಿನಿಧಿಯಾಗಿ ಸದಾ ನನ್ನ ಬೆಂಬಲಕ್ಕೆ ನಿಂತ ಜೈನ ಸಮುದಾಯಕ್ಕೆ ಒಂದು ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಹಾಗೂ ಜೈನ ವಿದ್ಯಾರ್ಥಿಗಳಿಗೆ ಪ್ರತೇಕ ವಸತಿ ನಿಲಯ ಸ್ಥಾಪಿಸುವಂತೆ ಈಗಾಗಲೆ ಮುಖ್ಯ ಮಂತ್ರಿ ಸಿದ್ದರಾಯ್ಯನವರು ಹಾಗೂ ಅಲ್ಪಸಂಖ್ಯಾತ ಇಲಾಖೆ ಸಚಿವ ಸಚಿವ ಜಮೀರರೊಂದಿಗೆ ಮಾತನಾಡಿದ್ದು ಅಲ್ಲದೆ ಅಧಿವೇಶನದಲ್ಲು ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ, ಬರುವ ಶೈಕ್ಷಣಿಕ ವರ್ಷದಿಂದ ಜಿಲ್ಲಾ ಮಟ್ಟದಲ್ಲಿ ಬೆಳಗಾವಿಯಲ್ಲಿ ಜೈನ್ ಧರ್ಮಿಯ ವಿದ್ಯಾರ್ಥಿಗಳಿಗೆ ಪ್ರತೇಕ ಹಾಸ್ಟೇಲನ್ನು ಪ್ರಾರಂಭಿಸಲಾಗುವುದು ಆಮೇಲೆ ಪ್ರತಿ ತಾಲೂಕಿಗೆ ಒಂದು ವಸತಿ ನಿಲಯವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಜೈನ ಧರ್ಮಿಯರು ಸಸ್ಯಹಾರಿ ಹಾಗೂ ಧಾರ್ಮಿಕ ಪರಂಪರೆಯನ್ನು ಹೊಂದಿದವಂತವರಾಗಿದ್ದು, ಜೈನ ಸಮುದಾಯದ ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ಬೆಳಗಾವಿಯಲ್ಲಿ ವಸತಿ ನಿಲಯ ಪ್ರಾರಂಭವಾಗಿ ಆಮೇಲೆ ತಾಲೂಕಿಗೆ ಒಂದರಂತೆ ವಸತಿ ನಿಲಯ ಪ್ರಾರಂಭವಾಗುತ್ತವೆ, ಅಲ್ಲದೆ ಜೈನ ಧರ್ಮಿಯರಿಗೆ ಪ್ರತ್ಯೇಕ ನಿಗಮ ಮಂಡಳಿಯ ಸ್ಥಾಪನೆಗೆ ಸರ್ಕಾರವು ಕೂಡಾ ಆಸಕ್ತಿಯನ್ನು ತೋರಿದೆ ಎಂದು ಭರವಸೆಯನ್ನು ನೀಡಿದರು.
ಮಾಜಿ ಜಿ ಪ ಸಸ್ಯರಾದ ವಿನಾಯಕ ಬಾಗಡಿ, ಪಿಕೆಪಿಎಸ ಅದ್ಯಕ್ಷರಾದ ನಿಜಗುನಿ ಮಗದುಮ್ಮ, ಡಾ ಸತಿಶ ಚೌಗಲಾ, ಶಾಂತಿನಾತ ನಂದಗಾವಿ, ಸುಭಾಷ ಮಾಲಗಾವಿ, ಬಾಹುಬಲಿ ನಂದಗಾಂವೆ, ಶ್ರೀಪಾಲ ಚೌಗಲಾ, ಭರತೇಶ ಚಿಪ್ಪರಗೋ ಮಹೇಶ ಕೆಸತ್ತಿ, ಮಕು ಪುಜಾರಿ, ಮಹಾವೀರ ಕೆಸ್ತಿ ಸೇರಿದಂತೆ ಹಲವರು ಇದ್ದರು.