ಜಗಜ್ಯೋತಿ ಬಸವೇಶ್ವರ ನಾಟಕ ಉದ್ಘಾಟನೆ

ಬೈಲಹೊಂಗಲ, 1: ಬಸವಾದಿ ಪ್ರಥಮರ ಸತ್ಯ ಜೀವನದ ಕತೆಯನ್ನು ನಾಟಕದ ಮೂಲಕ ತಿಳಿದುಕೊಂಡು ನಿತ್ಯ ಜೀವನದಲ್ಲಿ ಉತ್ತಮ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಬೈಲಹೊಂಗಲದ ಮೂರುಶಾಖಾಮಠದ ಪ್ರಭು ನೀಲಕಂಠ ಸ್ವಾಮೀಜಿ ಹೇಳಿದರು.

    ಅವರು ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ಬಸವೇಶ್ವರ ಹಾಗೂ ಗ್ರಾಮದೇವತೆ ಜಾತ್ರೆಯ ನಿಮಿತ್ಯ ಗೆಳೆಯರ ಬಳಗ ಆಯೋಜಿಸಿದ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕವನ್ನು ಉದ್ಘಾಟಿಸಿ ಮಾತನಾಡಿ, ನಾಟಕಗಳು, ಸೀನೆಮಾಗಳು ದೂರದರ್ಶನದ ದಾರಾವಾಹಿಗಳಿಂದ ನಶಿಸುತ್ತಿವೆ. ಇಂಥ ಕಲೆಯನ್ನು ಪ್ರೋತ್ಸಾಹಿಸುವ ಅವಶ್ಯಕತೆಯಿದೆ ಎಂದರು.

     ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಿ.ಎಂ.ಕುರಬರ, ಬಿ.ಬಿ.ದೊಡವೀರಪ್ಪವರ, ಬಿ.ಬಿ.ಸಂಗನಗೌಡರ, ಎಂ.ವಾಯ್.ಮಲ್ಲೂರ, ವಿ.ಜಿ.ಪಾಟೀಲ, ಸಿ.ವಿ.ಮಲ್ಲೂರ, ಆಯ್.ಜಿ.ಪರ್ವತಗೌಡರ,ವೀರು ದೊಡವೀರಪ್ಪನ್ನವರ, ವಿಕಾಶ ಮಲ್ಲೂರ, ಎಸ್.ಜಿ.ಕೆಂಚನಗೌಡರ, ಬಸವರಾಜ ದೊಡವೀರಪನ್ನವರ, ಅನೀಲ ಸಂಗನಗೌಡರ,ಇನ್ನಿತರರು ಪಾಲ್ಗೊಂಡಿದ್ದರು.