ಜೆ.ಕೆ.ಸಿಮೆಂಟ್ ಕಂಪನಿಗೆ ಪ್ರಶಸ್ತಿ ಗರಿ

ಲೋಕದರ್ಶನವರದಿ

ಮುಧೋಳ: ತಾಲ್ಲೂಕಿನ ಮುದ್ದಾಪುರ ಗ್ರಾಮ ವ್ಯಾಪ್ತಿಯ ಜೆ.ಕೆ.ಸಿಮೆಂಟ್ ಕಂಪೆನಿ ವರ್ಷದ ಸುರಕ್ಷತಾ ಪ್ರಶಸ್ತಿಗೆ ಭಾಜನವಾಗಿದೆ. ಬೆಂಗಳೂರಿನ ರೆಡಿಸನ್ ಹೋಟೆಲ್ ದಲ್ಲಿ ರಾಷ್ಟ್ರೀಯ ಸುರಕ್ಷತಾ ಮಂಡಳಿ ಕಾರ್ಯಕ್ರಮದಲ್ಲಿ ಪ್ರಶಂಸಾ ಸುರಕ್ಷಾ ಪುರಸ್ಕಾರ ನೀಡಲಾಯಿತು. 

     ಸಂಸ್ಥೆಯ ಉತ್ಪಾದನಾ ಚಟುವಟಿಕೆಗಳಲ್ಲಿ ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಪ್ರಮಗಳನ್ನು ಕೈಗೊಂಡ ಹಿನ್ನಲೆಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

 ಜೆ.ಕೆ.ಸಂಸ್ಥೆಯ ಮುಖ್ಯಸ್ಥ ಆರ್.ಬಿ.ಎಂ ತ್ರೀಪಾಠಿ ಅವರಿಗೆ ಸೋಮವಾರ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು.

         ಕಾರ್ಯಕ್ರಮದಲ್ಲಿ ಸ್ವಾಸ್ಥ್ಯ ಇಲಾಖೆಯ ನಿದರ್ೇಶಕ ಡಿ.ಸಿ.ಜಗದೀಶ, ರಾಷ್ಟ್ರೀಯ ಸುರಕ್ಷತಾ ಮಂಡಳಿ ಅಧ್ಯಕ್ಷ ಗುಂಡಪ್ಪ, ಉಪಾಧ್ಯಕ್ಷ ಜಿ.ರಾಮಮೂತರ್ಿ, ಗೌರವ ಕಾರ್ಯದಶರ್ಿ ಪಿ.ಸಿ.ವೆಂಕಟೇಶ್ವರಲು, ಜೆಕೆ ಸಿಮೆಂಟ್ ಸಂಸ್ಥೆಯ ಸುರಕ್ಷತಾ ಮುಖ್ಯಸ್ಥ ಎಚ್.ಡಿ.ಮಮಜುನಾಥರಾಜೇ ಅರಸು ಇದ್ದರು.