ಜೆಸಿಐ ಅಧ್ಯಕ್ಷ ವಿನಾಯಕರಿಂದ ಕುಡಿಯುವ ನೀರು ಪೂರೈಕೆಗೆ ಚಾಲನೆ
ಹೂವಿನ ಹಡಗಲಿ 03: ಪ್ರಸಕ್ತ ವರ್ಷ ಬಿಸಿಲು ಹೆಚ್ಚಾಗಲಿದೆ ಜನ ಸಾಮಾನ್ಯರ ಬಿಸಿಲ ಬೇಗೆ ತಣಿಸಲು ಜೆಸಿಐ ಹೂವಿನ ಹಡಗಲಿ ರಾಯಲ್ ವಿನೂತನ ರೀತಿಯಲ್ಲಿ ಸೇವೆ ಆರಂಭಿಸಿದೆ ಎಂದು ಜೆಸಿಐ ಅಧ್ಯಕ್ಷ ಕೋಡಿಹಳ್ಳಿ ವಿನಾಯಕ ಹೇಳಿದರು.
ಪಟ್ಟಣದ ಎ ಪಿ ಎಂ ಸಿ ಸಮೀಪದ ಲಕ್ಷ್ಮಿ ಫೀಲ್ಸ ಪೆಟ್ರೋಲ್ ಬಂಕ್ ನಲ್ಲಿ ಬುಧವಾರ "ನೀರಿನ ಅರವಟ್ಟಿಗೆ"ಶುದ್ಧ ಕುಡಿಯುವ ನೀರು ಪೂರೈಕೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಜೆಸಿಐ ರಾಯಲ್ ಹಾಗೂ ಜೆ ಎಸ್ ಸಿ ಅಲ್ಯೂಮಿನಿ ಕ್ಲಬ್ ವತಿಯಿಂದ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಪಟ್ಟಣದ ವಿವಿಧ ಕಡೆ ನೀರಿನ ಅರವಟ್ಟಿಗೆ ಸ್ಥಾಪಿಸಲು ಉದ್ದೇಶಿಸಿದೆ ಎಂದರು.ಲಕ್ಷ್ಮಿ ಫೀಲ್ಸ ಪೆಟ್ರೋಲ್ ಬಂಕ್ ಮಾಲೀಕರು ಮಾಜಿ ಜೆ ಸಿ ಐ ಅಧ್ಯಕ್ಷ ಮಹಾಬಲೇಶ್ವರ ದಿವಾಕರ, ನಿಕಟ ಪೂರ್ವ ಅಧ್ಯಕ್ಷ ಡಾ ಜೆ ಡಿ ಉಮೇಶ್,ಜೆ ಸಿ ಐ ಸಂಸ್ಥೆಯ ಪದಾಧಿಕಾರಿಗಳಾದ ಡುಂಗರ್ ಚೆಂದ್ ಮೆಹತಾ,ದ್ವಾರಕೀಶ್ ರೆಡ್ಡಿ ವಾರದ ನಿಯಾಜ್, ನಂದೀಶ್ ನವಲಿ, ಮಹಾಂತೇಶ್ ಐ ಎಸ್ ಸಂತೋಷ್ ಇತರರು ಉಪಸ್ಥಿತರಿದ್ದರು.