ಬೆಂಗಳೂರು, ಫೆ.15 : ರಣಜಿ ಟೂರ್ನಿ ಕ್ರಿಕೆಟ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಕರ್ನಾಟಕ ತಂಡ, ಮಹತ್ವದ ಪಂದ್ಯದಲ್ಲಿ ಬರೋಡಾ ವಿರುದ್ಧ ಜಯ ಸಾಧಿಸಿ ಕ್ವಾರ್ಟರ್ ಫೈನಲ್ಸ್ ಹಂತ ಪ್ರವೇಶಿಸಿದೆ. ಎಂಟರ ಘಟ್ಟದ ಹೋರಾಟದಲ್ಲಿ ರಾಜ್ಯ ತಂಡ ಜಮ್ಮು ಕಾಶ್ಮೀರ್ ವಿರುದ್ಧ ಕಾದಾಟ ನಡೆಸಲಿದೆ.
ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪಂದ್ಯಗಳು ಫೆ.20 ರಿಂದ ಆರಂಭವಾಗಲಿದ್ದು, ಫೆ.24 ರಂದು ಮುಕ್ತಾಯವಾಗಲಿದೆ. ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುಜರಾತ್ ಹಾಗೂ ಗೋವಾ ತಂಡಗಳು ಹೋರಾಟ ನಡೆಸಲಿದ್ದು, ಎರಡನೇ ಪಂದ್ಯದಲ್ಲಿ ಬಂಗಾಳ ಹಾಗೂ ಒಡಿಶಾ ತಂಡಗಳು ಕಾದಾಡಲಿವೆ, ನಾಲ್ಕನೇ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಸೌರಾಷ್ಟ್ರ ಹಾಗೂ ಆಂಧ್ರ ತಂಡಗಳು ಸೆಣಸಾಡಲಿವೆ.
ಕರ್ನಾಟಕ ಹಾಗೂ ಜಮ್ಮು ನಡುವಿನ ಪಂದ್ಯಕ್ಕೆ ಜಮ್ಮು ಕಾಶ್ಮೀರ ತಂಡ ಆತೀಥ್ಯ ವಹಿಸಲಿದೆ.