ಜ. 12ರಂದು ಯುವ ಸಮ್ಮೇಳನ ಕಾರ್ಯಕ್ರಮ

ಗದಗ 2:   ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ 125ನೇ ವಷರ್ಾಚರಣೆ ಸಂಬಂಧವಾಗಿ ಬರುವ ಜನೆವರಿ 12ರಂದು ಯುವ ಸಮ್ಮೇಳನ ಕಾರ್ಯಕ್ರಮವನ್ನು ನಗರದ ವಿವೇಕಾನಂದ ಸಭಾಂಗಣದಲ್ಲಿ ಮಧ್ಯಾಹ್ನ 3.30  ಗಂಟೆಗೆ ವ್ಯವಸ್ಥಿತವಾಗಿ ಹಾಗೂ ಅರ್ಥಪೂರ್ಣವಾಗಿ   ಅಯೋಜಿಸಲು ಕ್ರಮ ಕೈಗೊಳ್ಳಬೇಕೆಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ  ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು  .ನಿದರ್ೇಶನ ನೀಡಿದರು. 

        ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಈ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.   

       ಸಭೆಯಲ್ಲಿ  ಕಾಲೇಜು ವಿದ್ಯಾಥರ್ಿಗಳು, ಎನ್.ಎಸ್.ಎಸ್. ಹಾಗೂ ಎನ್.ಸಿ.ಸಿ. ವಿದ್ಯಾಥರ್ಿಗಳ ಉಪಸ್ಥಿತಿ, ಉಪನ್ಯಾಸಕರ ನೇಮಕ, ಆಮಂತ್ರಣ ಪತ್ರಿಕೆ,ವೇದಿಕೆ ವ್ಯವಸ್ಥೆ ಕುರಿತು ಚಚರ್ಿಸಲಾಯಿತು.   

       ಗದಗ ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಮಂಜುನಾಥ ಚವ್ಹಾಣ,  ಮಾಜಿ ಶಾಸಕರು ಹಾಗೂ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ 125 ನೇ ವಷರ್ಾಚರಣೆ ಸಮಿತಿಯ ಸದಸ್ಯರಾದ ಡಿ.ಆರ್.ಪಾಟೀಲ,   ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಜಿ.ಎಲ್. ಬಾರಾಟಕ್ಕೆ,  ಪದವಿ ಪೂರ್ವ  ಶಿಕ್ಷಣ ಇಲಾಖೆಯ ಉಪನಿದರ್ೇಶಕ  ಎಸ್.ಎಸ್. ಹಿರೇಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.    

       ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕ  ಬಿ.ಬಿ. ವಿಶ್ವನಾಥ ಸರ್ವರಿಗೂ ಸ್ವಾಗತಿಸಿ ವಂದಿಸಿದರು.