ಜೆ.ಎಸ್‌.ಎಸ್‌. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ

J.S.S. Banashankari College of Arts, Commerce and Shantikumar Gubbi Science College

ಜೆ.ಎಸ್‌.ಎಸ್‌. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ 


ಧಾರವಾಡ     28   :  ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಅಧ್ಯಯನದ ಜೊತೆಗೆ ರಾಷ್ಟ್ರೇ​‍್ರಮ, ರಾಷ್ಟ್ರ ಜಾಗೃತಿ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ ಅವರು ಹೇಳಿದರು.  

ಧಾರವಾಡ ಜಿಲ್ಲೆಯ ಮನಗುಂಡಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಜಿಲ್ಲಾ ಪಂಚಾಯತ ಧಾರವಾಡ, ತಾಲೂಕಾ ಪಂಚಾಯತ ಧಾರವಾಡ ಮತ್ತು ಗ್ರಾಮ ಪಂಚಾಯತ, ಮನಗುಂಡಿ ಇವರ ಸಹಯೋಗದೊಂದಿಗೆ ಜೆ.ಎಸ್‌.ಎಸ್‌. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ. ಮತ್ತು ಎನ್‌.ಎಸ್‌.ಎಸ್‌. ಘಟಕಗಳವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ‘ವಾರ್ಷಿಕ ವಿಶೇಷ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡುತ್ತಾ, ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರ, ಹಾಗಾಗಿ ಮನಗುಂಡಿ ಗ್ರಾಮದಲ್ಲಿರುವ ಪ್ರತಿಯೊಂದು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವುದರ ಮುಖೇನ ಗ್ರಾಮದಲ್ಲಿ ಸ್ಚಚ್ಛತೆಯ ಅರಿವು ಮೂಡಿಸುವಂತೆ ಶಿಬಿರದ ಸ್ವಯಂ ಸೇವಕರಿಗೆ ಕರೆ’ ನೀಡಿದರು. 

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಮನಗುಂಡಿ ಗ್ರಾಮದ ಖ್ಯಾತ ನಿಸರ್ಗ ಚಿಕಿತ್ಸಾ ತಜ್ಞರು ಹಾಗೂ ಪ್ರವಚನ ಪ್ರವೀಣರು ಆದ ಪರಮಪೂಜ್ಯ ಬಸವಾನಂದ ಮಹಾಸ್ವಾಮಿಗಳು ಜನತಾ ಶಿಕ್ಷಣ ಸಮಿತಿಯ ಸಾಧನೆಗಾಗಿ ಸಂತೋಷವನ್ನು ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಿಗೆ ಶಿಕ್ಷಣದ ಹಾದಿಯಲ್ಲಿ ಶಿಸ್ತು ಮತ್ತು ಸಮಯಪಾಲನೆ ಬಹುಮುಖ್ಯ ಹಾಗೂ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಆಶೀರ್ವದಿಸಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಕೆ.ಎಚ್‌. ನಾಗಚಂದ್ರ ಅವರು ವಹಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಗ್ರಾಮವಾಸ್ತವ್ಯ, ಶ್ರಮದಾನದ ಮೂಲಕ ಆತ್ಮವಿಶ್ವಾಸ, ನಾಯಕತ್ವ ಗುಣ ಬೆಳಸಿಕೊಳ್ಳವುದಕ್ಕೆ ವೇದಿಕೆಯಾಗಿದ್ದು, ಸರ್ವತೋಮುಖ ಅಭಿವೃದ್ಧಿಹೊಂದಲು ಪ್ರಮುಖ ಪಾತ್ರ ವಹಿಸುತ್ತಾರೆ’ ಎಂದು ಹೇಳಿದರು. 

ಸಮಾರಂಭದಲ್ಲಿ ಮನಗುಂಡಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ. ಬಸಮ್ಮ ಅಮ್ಮಿನಬಾವಿ, ಎಸ್‌.ಡಿ.ಎಂ.ಸಿ. ಅಧ್ಯಕ್ಷರಾದ ನಿಂಗಪ್ಪ ಹಡಪದ, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ. ವಿಜಯಾ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದ್ದರು. ಡಾ. ಸೂರಜ ಜೈನ, ಮಹಾವೀರ ಉಪಾಧ್ಯೆ, ಎಸ್‌.ಕೆ. ಸಜ್ಜನ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರುಗಳು ಉಪಸ್ಥಿತರಿದ್ದರು. ಎನ್‌.ಎಸ್‌.ಎಸ್‌. ಅಧಿಕಾರಿಯಾದ ಮಂಜುನಾಥ ಜಿ.ಪಿ. ಮಾರ್ಗದರ್ಶಕರಾಗಿ ಉಪಸ್ಥಿತರಿದ್ದರು. 

ಎನ್‌.ಎಸ್‌.ಎಸ್‌. ಅಧಿಕಾರಿಯಾದ ಡಾ.(ಶ್ರೀಮತಿ) ಶಿಲ್ಪಾ ದಾನಪ್ಪನವರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭವಾನಿ ಜೋಶಿ ನಿರೂಪಿಸಿದರು. ಪೂರ್ಣಿಮಾ ಕಣಜಿ ಸ್ವಾಗತಿಸಿದರು. ಕಾರ್ತಿಕ ಶ್ರೀಹರಿ ವಂದಿಸಿದರು.