ಜನರ ನೋವು, ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿಯಾಗಿದೆ: ಸತಿಶ್ ಜಾರಕಿಹೊಳಿ
It is our responsibility to respond to people's pain and problems: Satish Jarkiholi
ಲೋಕದರ್ಶನ ವರದಿ
ಹಾರೂಗೇರಿ 16 : ಯಾರೇ ಬಂದರೂ ತಾರತಮ್ಯವಿಲ್ಲದೇ ಅವರ ಕೆಲಸ ಮಾಡಿಕೊಡುವುದು ನಮ್ಮ ಕರ್ತವ್ಯ. ಜನರ ನೋವು, ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತಿಶ್ ಜಾರಕಿಹೊಳಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಶನಿವಾರ ಸಾರ್ವಜನಿಕರ ಕುಂದು-ಕೊರತೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಲೋಕಸಭೆ ಚುನಾವಣೆಯಲ್ಲಿ ಜನ ನಮಗೆ 20 ಸಾವಿರಕ್ಕೂ ಹೆಚ್ಚು ಲೀಡ್ ಕೊಟ್ಟಿದ್ದಾರೆ. ಅಹವಾಲು ಸಲ್ಲಿಸಿದ ಎಲ್ಲರ ಮನವಿಗಳನ್ನು ಪರೀಶೀಲಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ.
ಕುಡಚಿ ಕ್ಷೇತ್ರದಲ್ಲಿ ನಮ್ಮ ಶಾಸಕರಿದ್ದಾರೆ. ಬದಲಾವಣೆಯಿಲ್ಲ, ರೀಪೇರಿ ಮಾಡಬೇಕಿದೆ ಅಷ್ಟೇ. ಹಿಜಾಬು, ದ್ವೇಷ ಭಾಷಣ ನಿಷೇಧ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿವೆ. ಯಾರನ್ನೂ ಓಲೈಕೆ ಮಾಡುತ್ತಿಲ್ಲ. ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಜ್ಞಾನೇಶ್ವರ ಧರ್ಮಟ್ಟಿ ಹಾರೂಗೇರಿ ಪುರಸಭೆ ವ್ಯಾಪ್ತಿಯ ಎಸ್ಸಿ ಕಾಲೋನಿಗಳಿಗೆ ಸ್ಮಶಾನ ಅಭಿವೃದ್ಧಿ, ಚರಂಡಿ, ರಸ್ತೆ ನಿರ್ಮಾಣ, ಕುಡಿಯುವ ನೀರು ಹಾಗೂ ಮೂಲಭೂತ ಸೌಲಭ್ಯಗಳಿಗಾಗಿ 7.5 ಕೋಟಿ ರೂ. ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.
ಅಥಣಿ, ಕುಡಚಿ, ರಾಯಬಾಗ ಮತಕ್ಷೇತ್ರಗಳ ನೂರಾರು ಜನ ತಮ್ಮ ಮನವಿಗಳನ್ನು ಸಲ್ಲಿಸಿದರು. ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ಡಿ.ಎಸ್.ನಾಯಿಕ, ದಸ್ತಗೀರ ಕಾಗವಾಡೆ, ರಾಮಣ್ಣ ಗಸ್ತಿ, ಡಾ.ಸಿ.ಬಿ.ಕುಲಿಗೋಡ, ರಾಯಬಾಗದ ಅಪ್ಪಾಸಾಬ ಕುಲಿಗೂಡೆ, ಅಶೋಕ ಕೊಪ್ಪದ, ಗೀರೀಶ ದರೂರ, ರೇವಣ್ಣ ಸರವ, ಅಶೋಕ ಅರಕೇರಿ, ಸಂಜು ಬಾನೆ, ಯಲ್ಲಪ್ಪ ಶಿಂಗೆ, ಮಹಾನಿಂಗ ಸಾಯನ್ನವರ, ಬಿ.ಬಿ.ಮುಗಳಿಹಾಳ, ಅಜೀತ ಕೊತ್ತಲಗಿ, ಮುಖ್ಯಾಧಿಕಾರಿ ಬಸವರಾಜ ಮನಗೂಳಿ, ಅಪ್ಪಾಸಾಬ ಸರಿಕರ ಹಾಗೂ ತಾಪಂ, ಲೋಕೋಪಯೋಗಿ, ನೀರಾವರಿ, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 