ಕೊಪ್ಪಳ 25: ಉತ್ತಮ ಆರೋಗ್ಯವಂತ ಸಮಾಜ ನಿಮರ್ಾಣಕ್ಕಾಗಿ ಸ್ವಚ್ಛತೆಯನ್ನು ಕಾಪಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಬಿ. ದಾನರೆಡ್ಡಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ಜಿಲ್ಲೆಯಲ್ಲಿ ಜು. 30 ರವರೆಗೆ ನೆಡಯುವ ''ಸ್ವಚ್ಛತಾ ಸಪ್ತಾಹ'' ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಲಾದ ಜಾಗೃತಿ ಕಾರ್ಯಕ್ರಮಕ್ಕೆ ತಮಟೆ ಬಾರಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಹತ್ಮಾ ಗಾಂಧೀಜಿಯವರ ಕನಸಿನ ಭಾರತ ಕೇವಲ ಸ್ವಾತಂತ್ರ್ಯ ಮಾತ್ರವಲ್ಲದೇ, ಸ್ವಚ್ಛತೆ ಮತ್ತು ಅಬಿವೃದ್ಧಿ ಹೊಂದಿರುವ ಭಾರತವಾಗಬೇಕು. ದೇಶವನ್ನು ಆಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ಇಟ್ಟುಕೊಂಡು ಭಾರತ ಮಾತೇ ಕಾಪಾಡುವುದು ನಮ್ಮಲ್ಲೆರ ಆದ್ಯ ಕರ್ತವ್ಯ. ಸಕರ್ಾರಿ ಕಛೇರಿಗಳು, ಸಕರ್ಾರಿ ಆಸ್ಪತ್ರೆಗಳು, ಬಸ್ಸ ನಿಲ್ದಾಣಗಳು ರೈಲುನಿಲ್ದಾಣ ಇವು ಸಾರ್ವಜನಿಕ ಆಸ್ತಿಗಳಾಗಿದ್ದು, ಎಲ್ಲೆಂದರಲ್ಲಿ ಉಗಳುವುದು, ಕಸಕಡ್ಡಿ ಹಾಕುವುದು, ಇತ್ಯಾದಿ ಕೆಟ್ಟ ಕೆಲಸಗಳನ್ನು ಯಾರು ಮಾಡಬಾರದು. ಎಷ್ಟು ಸ್ವಚ್ಛತೆ ಕಾಪಾಡುತ್ತೆವೆಯೋ ಅಷ್ಟು ನಮ್ಮ ಆರೋಗ್ಯಕ್ಕೆ ಒಳ್ಳೆಯದು, ನಮ್ಮ ಮನೆ, ವಾರ್ಡ, ಗ್ರಾಮ, ನಮ್ಮ ಜಿಲ್ಲೆ ಇವುಗಳನ್ನು ಸ್ವಚ್ಛತೆಯಿಂದ ಇಟ್ಟುಕೊಂಡಾಗ ಮಾತ್ರ ಆರೋಗ್ಯ ವಂತ ಸಮಾಜ ನಿಮರ್ಾಣ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರ ಆರೋಗ್ಯ ಅವರ ಅವರ ಕೈಯಲ್ಲಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆ ನಮ್ಮಲ್ಲೆರ ಹೊಣೆ ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಬಿ ದಾನರೆಡ್ಡಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆ ತಜ್ಞ ವೈದ್ಯ ಡಾ. ಲಕ್ಷ್ಮೀ ನಾರಾಯಾಣ ರಾವ್, ಡಾ. ಮಹೇಂದ್ರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ, ಆರ್.ಸಿ ಚೌಹ್ವಾಣ, ನೇತ್ರಾಧಿಕಾರಿ ಸುಧಾಕರ, ಡಿಕ್ಯೂಎಮ್ ನಟರಾಜ ಹಾಗೂ ಆರೋಗ್ಯ ಇಲಾಖೆಯ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಚಿಕ್ಕ ನರಗುಂದದ ಕನಕದಾಸ ಕಲಾತಂಡದಿಂದ ಡೊಳ್ಳಕುಣಿತ ಮತ್ತು ಬೀದಿನಾಟಕಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.