ಗದಗ: ರಾಜ್ಯ ಸರಕಾರವು ಆಡಳಿತವನ್ನು ಗಣಕೀಕರಣಗೊಳಿಸುತ್ತಿದ್ದು, ಕಾಗದ ರಹಿತ ಆಡಳಿತಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಗ್ರೂಪ್ ಎ ವೃಂದದ ಅಧಿಕಾರಿಗಳ ಕಾರ್ಯನಿರ್ವಹಣೆಯ ವರದಿಯನ್ನು "eprs " ವೆಬ್ ಅಪ್ಲಿಕೇಷನ್ ಮುಖಾಂತರ ಸಲ್ಲಿಸುವ ಕುರಿತು ತರಬೇತಿ ನೀಡಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಗದಗ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ 122ರಲ್ಲಿ ತರಬೇತಿ ಕಾಯರ್ಾಗಾರದಲ್ಲಿ ಜಿಲ್ಲಾಡಳಿತ, ಗದಗ ಜಿಲ್ಲಾ ಪಂಚಾಯತ ಹಾಗೂ ಗದಗ ಜಿಲ್ಲಾ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ.ಡಿ.ಓ. (ಬಡವಡೆ ಅಧಿಕಾರಿಗಳು), ವ್ಯವಸ್ಥಾಪಕ ಹಾಗೂ ಗ್ರೂಪ್ ಸಿ ವೃಂದದ ಅಧಿಕಾರಿ/ಸಿಬ್ಬಂದಿಗಳಿಗೆ "e office ವಿಷಯದ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ವಿವಿಧ ಕಾರ್ಯಾಲಯಗಳಲ್ಲಿನ ಆಡಳಿತದಲ್ಲಿ ಸುಧಾರಣೆ ತರಲು ಈಗಿನ ಕಾಲಮಾನಕ್ಕೆ ತಕ್ಕಂತೆ ಆಧುನೀಕರಣಗೊಳಿಸುವ ಅನಿವಾರ್ಯತೆ ಇದ್ದುದರಿಂದ ರಾಜ್ಯ ಸರಕಾರವು "ಇ-ಆಫೀಸ್ ವೆಬ್ ಅಪ್ಲಿಕೇಷನ್ ಪರಿಚಯಿಸಿದ್ದು, ದಿ. 01/01/2020 ರಿಂದ ರಾಜ್ಯದ ಎಲ್ಲಾ ಸರಕಾರಿ ಕಚೇರಿಗಳೂ ಸಹ ಕಾಗದರಹಿತ ಆಡಳಿತಕ್ಕೆ ನವೀಕರಣಗೊಳ್ಳಬೇಕಿದೆ. ಕಾರಣ ಇ-ಆಫೀಸ್ ವಿಷಯದ ಬಗ್ಗೆ ಪ್ರತಿ ಅಧಿಕಾರಿ/ನೌಕರರು ತರಬೇತಿಯನ್ನು ಪಡೆದುಕೊಂಡು ಸಾರ್ವಜನಿಕ ಕಚೇರಿಗಳನ್ನು ಕಾಗದ ರಹಿತ, ಪಾರದರ್ಶಕ, ಸಾರ್ವಜನಿಕ ಸ್ನೇಹಿ ಕಚೇರಿಗಳನ್ನಾಗಿ ಪರಿವತರ್ಿಸಲು ಸಹಕಾರ ನೀಡಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ರಭಾರಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಮಾತನಾಡಿ, ಸದ್ಯದಲ್ಲಿ ಮೊದಲ ಹಂತವಾಗಿ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಕಾರ್ಯಾಲಯಗಳಲ್ಲಿನ ಅಧಿಕಾರಿ/ನೌಕರರುಗಳಿಗೆ 04 ಬ್ಯಾಚ್ಗಳಲ್ಲಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ನಂತರ ಹಂತ ಹಂತವಾಗಿ ತಾಲೂಕು ಮಟ್ಟದ ತರಬೇತಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಗೆ ಸಂಬಂಧಿಸಿದ ಇ.ಎಂ.ಡಿ. ಮಾಹಿತಿಯನ್ನು ತಯಾರಿಸಿ ಸಲ್ಲಿಸಲು ತಿಳಿಸಿದರು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಎ.ಎ. ಕಂಬಾಳಿಮಠ. ಇವರು ಮಾತನಾಡಿ, ಗದಗ ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿ 03 ವರ್ಷಗಳ ಹಿಂದೆಯೇ ಇ-ಆಫೀಸ್ ವೆಬ್ ಅಪ್ಲಿಕೇಷನ್ನ್ನು ಉಪಯೋಗಿಸಲಾಗುತ್ತಿದ್ದು, ಕಡತಗಳನ್ನು ಇ-ಆಫೀಸ್ ಮೂಲಕವೇ ನಿರ್ವಹಿಸಲಾಗುತ್ತಿದೆ. ಸಧ್ಯ ಗದಗ ಜಿಲ್ಲಾ ಪಂಚಾಯತ, ಗದಗ ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ತರಬೇತಿ ಸಂಸ್ಥೆಗಳಲ್ಲಿ ಸಂಪೂರ್ಣವಾಗಿ ಇ-ಆಫೀಸ್ ಮೂಲಕವೇ ಕಡತಗಳ ನಿರ್ವಹಣೆಯಾಗುತ್ತಿದ್ದು, ಸರಕಾರದ ಆಶಯದಂತೆ ಎಲ್ಲಾ ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಹಾಗೂ ತಾಲೂಕು ಮಟ್ಟದ ಕಚೇರಿಗಳಲ್ಲಿ ಸಹ ಇ-ಆಫೀಸ್ ಜಾರಿಯಾಗಬೇಕಾಗಿರುವುದು ಇಂದಿನ ದಿನಮಾನದ ಅವಶ್ಯಕತೆ ಹಾಗೂ ಅನಿವಾರ್ಯತೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಪ್ರಶಾಂತ ಚಿಕ್ಕನಾಳ, ಇ-ಡಿಸ್ಟ್ರಿಕ್ಟ್ ಕನ್ಸಲ್ಟೆಂಟ್ ಚಂದ್ರಶೇಖರ ಅಗ್ಗಿಮಠ, ಆಧಾರ ಜಿಲ್ಲಾ ಸಮಾಲೋಚಕರು ಹಾಗೂ ಅನೂಪ ಇಂಚಲ, ಜಿಲ್ಲಾ ಸಮಾಲೋಚಕರು ಹಾಗೂ ಸಕಾಲ ತರಬೇತಿ ಕಾಯರ್ಾಗಾರವನ್ನು ನಡೆಸಿಕೊಟ್ಟರು. ಈ ಕಾಯರ್ಾಗಾರದಲ್ಲಿ ಗದಗ ಜಿಲ್ಲೆಯ ಒಟ್ಟು 14 ಇಲಾಖೆಗಳ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರುಗಳು ಭಾಗವಹಿಸಿದ್ದರು. ಉಪ ಪ್ರಾಚಾರ್ಯರಾದ ಎನ್.ಎಸ್. ಸೋನೆ ಇವರು ಸ್ವಾಗತಿಸಿ ವಂದಿಸಿದರು.