ಲೋಕದರ್ಶನ ವರದಿ
ಅಥಣಿ 03: ಇತಿಹಾಸಕ್ಕೆ ಸಾಕ್ಷಿಯಾಗಿರುವಂತಹ ಎಲ್ಲ ಕುರುಹುಗಳನ್ನು ಅತ್ಯಂತ ಎಚ್ಚರದಿಂದ ಕಾಪಾಡಿಕೊಂಡು ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕದ್ದರಾಗಿದೆ ಎಂದು ಎಸ್ಎಸ್ಎಂಎಸ್ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥೆ ಹಾಗೂ ಸಮಾಜ ವಿಜ್ಞಾನ ಸಂಘದ ಕಾಯರ್ಾಧ್ಯಕ್ಷೆ ಡಾ. ಎಂ.ಎಂ. ಗೊಂದಿ ಹೇಳಿದರು.
ಕೆಎಲ್ಇ ಸಂಸ್ಥೆಯ ಎಸ್.ಎಸ್.ಎಂ.ಎಸ್. ಮಹಾವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗ ತಾಲೂಕಿನ ದಬದಬಹಟ್ಟಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಿಸ್ತರಣಾ ಚಟುವಟಿಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಾವಯವ ಕೃಷಿಯ ಕುರಿತು ಹಾಗೂ ಪ್ರತಿಯೊಂದು ವಿಷಯದ ಕುರಿತು ಇತಿಹಾಸವನ್ನು ಅಥರ್ೈಯಿಸಲು ಶಾಸನಗಳು, ಸ್ಮಾರಕಗಳು, ಮೈಲುಗಲ್ಲುಗಳು, ದೇವಸ್ಥಾನಗಳು, ಗುಹೆಗಳು ಹಾಗೂ ಇನ್ನಿತರ ಕುರುಹುಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಮುಂದಿನ ಪೀಳಿಗೆಗೆ ನಮ್ಮ ಇತಿಹಾಸದ ಕುರಿತು ಹೇಳಲು ಕೇವಲ ಪುಸ್ತಕೀಯ ಸಾಹಿತ್ಯವಷ್ಟೇ ಸಾಲದು ಅವರಿಗೆ ನೈಜ ಚಿತ್ರಣವನ್ನು ನೀಡುವಂತಹ ಇಂತಹ ಕುರುಹುಗಳನ್ನು ತೋರಿಸಿ ಭವ್ಯ ಇತಿಹಾಸದ ಕಲ್ಪನೆ ನೀಡಿದಲ್ಲಿ ಅವರಲ್ಲಿ ಭದ್ರವಾಗಿ ಇತಿಹಾಸದ ಜ್ಞಾನ ನೆಲೆಯೂರುತ್ತದೆ ಎಂದರು.
ಸಮಾಜಶಾಸ್ತ್ರ ಮುಖ್ಯಸ್ಥರಾದ ಡಾ. ಎಸ್.ವಾಯ್. ಹೊನ್ನುಂಗುರ ಮಾತನಾಡಿ ಒಂದು ರಾಷ್ಟ್ರವು ಸುಸಂಸ್ಕೃತ ಹಾಗೂ ಸದೃಢವಾಗಬೇಕಾದರೆ ವ್ಯಕ್ತಿ, ಸಮಾಜ, ಹಳ್ಳಿಗಳು, ಕೇಂದ್ರ ಬಿಂದುಗಳು, ವ್ಯಕ್ತಿ ಸುಶಿಕ್ಷಿತನಾದಲ್ಲಿ ಸಮಾಜ ಸುಧಾರಿಸುತ್ತದೆ, ಸಮಾಜ ಸುಧಾರಿಸಿದಲ್ಲಿ ಹಳ್ಳಿಗಳು ಅಭಿವೃದ್ಧಿಯಾಗುತ್ತವೆ, ಗ್ರಾಮಗಳ ಉದ್ಧಾರದಿಂದ ದೇಶ ಉನ್ನತಿಯತ್ತ ಸಾಗುತ್ತದೆ ಆದ್ದರಿಂದ ವ್ಯಕ್ತಿಯ ಬೆಳವಣಿಗೆ ದೇಶದ ಅಭಿವೃದ್ಧಿಯ ಮೂಲ ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎ.ಎಸ್. ರಾಜಮಾನೆ ಮಾತನಾಡಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನದಲ್ಲಿಯ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಅರಿವು ಇರಬೇಕು, ಇದು ಕೇವಲ ರಾಜಕೀಯ ಕಾರಣಗಳಿಂದಷ್ಟೇ ಅಲ್ಲ, ತಾನು ವಾಸಿಸುತ್ತಿರುವ ದೇಶದ ನಾಗರಿಕತ್ವ ಹಾಗೂ ಅದರ ಹಕ್ಕುಗಳನ್ನು ತಿಳಿದುಕೊಳ್ಳುವ ಮತ್ತು ನ್ಯಾಯಾಂಗ, ಶಾಸಕಾಂಗಳ ಬಗೆಗೆ ತಿಳುವಳಿಕೆ ಬರಬೇಕಾದಲ್ಲಿ ಇದು ಅತ್ಯಗತ್ಯ ಎಂದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎನ್.ಟಿ. ದಿನಕರ ಮಾತನಾಡಿ ಕೃಷಿ ಪ್ರಧಾನ ದೇಶದಲ್ಲಿ ಕೃಷಿಕರೇ ದೇಶದ ಬೆನ್ನಲಬು, ಕೃಷಿಯೇ ಆಥರ್ಿಕತೆಯ ಮೂಲ, ರೈತರು ಕೃಷಿಯಲ್ಲಿ ಸುಧಾರಣಾ ಪದ್ಧತಿಯನ್ನು ಅಳವಡಿಸಿಕೊಂಡು ದೇಶದ ಆಥರ್ಿಕತೆ ಇನ್ನೂ ಹೆಚ್ಚು ಸಧೃಢವಾಗುವಂತೆ ಮಾಡಬೇಕು, ತಂತ್ರಜ್ಞಾನದ ಮೂಲಕವೂ ಸಹ ದೇಶ ಆಥರ್ಿಕ ಸುಧಾರಣೆಯನ್ನು ಕಾಣುತ್ತದೆ, ಕೃಷಿ ಹಾಗೂ ತಂತ್ರಜ್ಞಾನ ದೇಶದ ಆಥರ್ಿಕ ಮಟ್ಟದ ಮೂಲಗಳು ಎಂದರು.
ಪ್ರತಿಯೊಬ್ಬರ ಆರೋಗ್ಯವು ಸದೃಢವಾಗಿರಲು, ದಿನನಿತ್ಯ ಚಟುವಟಿಕೆಗಳಲ್ಲಿ ಕಾಯ್ದುಕೊಳ್ಳುವ 'ಚಿತ್ವವು' ಪ್ರಮುಖ ಪಾತ್ರವಹಿಸುತ್ತದೆ ಎಂದು ಡಾ. ಜಗದೀಶ ಮಿರಜಕರ ಕಿವಿಮಾತು ಹೇಳಿದರು.
ದಬದಬಹಟ್ಟಿ ಶಾಲೆಯ ಮುಖ್ಯೋಪಾಧ್ಯಯ ಎಸ್.ಎಸ್. ಹೂಟಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎಫ್. ಇಂಚಲ ಮಾತನಾಡಿ, ಮಹಾತ್ಮಾ ಗಾಂಧೀಜಿಯವರು ಕಂಡ ಕನಸು ನನಸಾಗಿ ಹಳ್ಳಿಗಳೆಲ್ಲ ಸುಧಾರಿಸಿ ಗ್ರಾಮರಾಜ್ಯವಾಗಲು ಯುವಕರು ತನುಮನಧನದಿಂದ ಪ್ರಯತ್ನ ಪಟ್ಟಾಗ ಸಾಧ್ಯವಾಗುತ್ತದೆಂದು ತಿಳಿಸಿದರು. ಸವೀತಾ ಪಾಟೀಲ ಪ್ರಾಥರ್ಿಸಿದರು, ಲಕ್ಷ್ಮೀ ಕುರುಬರ ಹಾಗೂ ಶ್ರೀದೇವಿ ಖಿದ್ರಾಪೂರ ನಿರೂಪಿಸಿದರು. ಪ್ರೊ. ಕೆ.ಎಸ್. ಚಂಡಿ ವಂದಿಸಿದರು.
ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಸುನಂದಾ ಅವತಾಡೆ, ಕೇದಾರಿ ಸಾಳುಂಕೆ ನಿದರ್ೆಶಕರು ಪಿ.ಕೆ.ಪಿ.ಎಸ್. ಬ್ಯಾಂಕ, ಸಿದ್ಧುಬಾ ಸಿಂಘೆ, ಗ್ರಾಮ ಪಂಚಾಯತ ಸದಸ್ಯರು ಭುಜಬಲಿ ಬಿರಾದಾರ, ಬಾಳಾಸಾಬ ಲಾಂಡಗೆ, ಸಾವಪ್ಪ ಅವತಾಡೆ, ಪ್ರೊ. ಸಿದ್ದು ಬಿರಾದಾರ, ಡಾ. ಮಲ್ಲಿಕಾಜರ್ುನ, ಮೋಹನ ಯುವ ಮುಖಂಡರು ಹಾಗೂ ಮಹಾವಿದ್ಯಾಲಯದ ವಿದ್ಯಾಥರ್ಿ/ನಿಯರು ಉಪಸ್ಥಿತರಿದ್ದರು.