ಯುಪಿಯಲ್ಲಿ ಪ್ರತಿಭಟನಾಕಾರರು ಮಾಡಿದ್ದು ಸರಿಯೇ ? ಮೋದಿ ತಿರುಗೇಟು

modi

ಲಕ್ನೋ ,  ಡಿ 25  ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಉತ್ತರಪ್ರದೇಶದಲ್ಲಿ ನಡೆದ ಹಿಂಸಾಚಾರವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಖಂಡಿಸಿದ್ದಾರೆ. ಕಾಯಿದೆ ವಿರೋಧಿಸುವ ನೆಪದಲ್ಲಿ  ಪ್ರತಿಭಟನಾಕಾರರು ಸಾರ್ವಜನಿಕ ಕ  ಆಸ್ತಿಪಾಸ್ತಿಗೆ ಹಾನಿ ಮಾಡಿದ್ದು  ಸರಿಯೇ? ಎಂದು ಆತ್ಮಾವಲೋಕನ  ಮಾಡುವ ಅವಶ್ಯಕತೆಯಿದೆ ಎಂದೂ  ಕೇಳಿದ್ದಾರೆ. ಲಕ್ನೋದ ಅಟಲ್ ಬಿಹಾರಿ ವೈದ್ಯಕೀಯ ವಿಶ್ವವಿದ್ಯಾಲಯದ ಶಂಕುಸ್ಥಾಪನೆ  ಸಮಾರಂಭದಲ್ಲಿ ಪ್ರಧಾನಿ ಮೋದಿ ಈ ಪ್ರಶ್ನೆ ಹಾಕಿದ್ದಾರೆ.  ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಮಾಡಿ,  ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರು  ತಾವು ಮಾಡಿದ್ದು ಸರಿಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಆಗ್ರಹ ಪಡಿಸಿದರು. 'ಉತ್ತಮ ರಸ್ತೆಗಳು, ಸಾರಿಗೆ ಮತ್ತು ಒಳಚರಂಡಿ ನಮ್ಮ ಹಕ್ಕು ಗುಣಮಟ್ಟದ ಶಿಕ್ಷಣ  ನಮ್ಮ ಹಕ್ಕು ಆದರೆ ಶಿಕ್ಷಣ ಸಂಸ್ಥೆಗಳ ಮೌಲ್ಯ  ಮತ್ತು ಶಿಕ್ಷಕರನ್ನು ಅದೆ ರೀತಿ   ಪೊಲೀಸರ ಕೆಲಸವನ್ನು ಗೌರವಿಸುವುದು ನಾಗರಿಕರ ಕರ್ತವ್ಯ'ಎಂದು ಅವರು ತಿರುಗೇಟು ನೀಡಿದರು.'ಸಂವಿದಾನದ 370 ನೆ  ವಿಧಿ ಮತ್ತು ರಾಮಮಂದಿರದ  ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ನಿರಾಶ್ರಿತರಿಗೆ ಪೌರತ್ವ ನೀಡುವ ಮಾರ್ಗವನ್ನು ತೆರವುಗೊಳಿಸಲಾಗಿದೆ. ನೂರ ಮೂವತ್ತು ಕೋಟಿ ಭಾರತೀಯರು ಇಂತಹ ಸವಾಲುಗಳಿಗೆ ಆತ್ಮವಿಶ್ವಾಸದಿಂದ ಪರಿಹಾರ ಕಂಡುಕೊಂಡಿದ್ದಾರೆ 'ಎಂದು ಅವರು ಹೇಳಿದರು.ಇದೆ  11 ರಂದು ಸಂಸತ್ತು ಅಂಗೀಕರಿಸಿದ ಕಾನೂನನ್ನು ವಿರೋಧಿಸಿ ಉತ್ತರಪ್ರದೇಶದಾದ್ಯಂತ ಹದಿನೆಂಟು ಜನರು ಸಾವನ್ನಪ್ಪಿದ್ದಾರೆ. ಪ್ರತಿಭಟನಾ ವೇಳೆ ಪ್ರತಿಭಟನಾಕಾರರು ರಾಜ್ಯದ ಏಳು ಜಿಲ್ಲೆಗಳಲ್ಲಿ ಸುಮಾರು 100 ಕೋಟಿ ರೂಪಾಯಿಗಳ ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.ಇದು ಸರಿಯೆ? ಆತ್ಮವಲೋಕನ ಮಾಡಿಕೊಳ್ಳಲಿ ಎಂದು ಪ್ರತಿಭಟನಾನಿರತರಿಗೆ ನಯವಾಗಿಯೇ ಮೋದಿ  ಚಾಟಿಬೀಸಿದರು.