ನೂರಾರು ಕನಸುಗಳನ್ನು ಕಾಣುತ್ತ ಹೆಗಲ ಮೇಲೆ ಹೊರಲಾರದ ಪುಸ್ತಕದ ಭಾರವನ್ನು ಹೊತ್ತುಕೊಂಡು ಶಾಲೆ ಕಾಲೇಜಿಗೆ ಹೋಗುತ್ತಾರೆ ಮಕ್ಕಳು. ಮಕ್ಕಳಿಗೆ ಬೇಕಾದದ್ದು ಓದು ಮತ್ತು ಮುಂದಿನ ಗುರಿ ಎರಡು ಮಾತ್ರ. ಆದರೆ ಕಾಲ ಬದಲಾಗಿ ಮಕ್ಕಳು ಇಡೀ ಜಗತ್ತನ್ನು ತಮ್ಮ ಕೈಯೊಳಗೆ ಇಟ್ಟುಕೊಂಡು ಬಿಟ್ಟಿದ್ದಾರೆ. ಕಳೆದ ಎರಡು ವರ್ಷದಿಂದ ಅಂತಲೂ ಕೊರೋನ ಕಾಲವೆಂದು ವಿಚಿತ್ರದ ಕಡೆಗೆ ಜಗತ್ತು ತಿರುಗಿರುವುದಂತೂ ಸತ್ಯ.
ಈಗಿನ ಚಟುವಟಿಕೆಗಳಿಂದ ಮಕ್ಕಳಿಗೆ ಖಿನ್ನತೆ ಹೆಚ್ಚಾಗಿದೆ ಎಂದು ಹೇಳುತ್ತಾರೆ. ಈ ಖಿನ್ನತೆ ಅಂದರೆ ಏನು? ಮನುಷ್ಯ ಒಂದು ವಿಷಯದಲ್ಲಿ ಹೆಚ್ಚು ಆಸಕ್ತನಾಗಿ ಅದು ಅವನ ಕೈಗೆ ಸಿಗದೇ ಹೋದಾಗ ತನ್ನಿಂದ ಸಾಧ್ಯವಾಗಲಿಲ್ಲ ಅಥವಾ ಇಲ್ಲಿಗೆ ತನ್ನ ಜೀವನ ಮುಗಿದೇ ಹೋಯಿತು ಎಂದುಕೊಳ್ಳುವುದು.
ಒಬ್ಬಳು ಹುಡುಗಿ ಈ ಬಾರಿ ಪಿ.ಯು.ಸಿ. ಪರೀಕ್ಷೆ ಮಾಡಿಲ್ಲವೆಂದು ಖಿನ್ನತೆಗೆ ಒಳಗಾಗಿ ನೇಣು ಹಾಕಿಕೊಂಡು ಸತ್ತಳಂತೆ ಎನ್ನುವ ಸುದ್ದಿ ಪತ್ರಿಕೆಯಲ್ಲಿ ಕಾಣಿಸಿತು. ಇನ್ನು ಹದಿನೆಂಟು ತುಂಬಿರದ ಹುಡುಗಿಗೆ ಖಿನ್ನತೆಯಾಗಿದ್ದು ಯಾಕೆ? ಬದುಕೆಂದರೆ ಏನು? ಬದುಕಲ್ಲಿ ಎಂಥೆಲ್ಲ ಕಷ್ಟಗಳು ಎದುರಾಗಬಹುದು ಎಂದು ಒಂದಂಶವನ್ನು ಅಷ್ಟರಲ್ಲಿ ನೋಡಿರುವುದಿಲ್ಲ. ಕೇವಲ ಯಾವುದೋ ಕ್ಷುಲ್ಲಕಕ್ಕೆ ಖಿನ್ನತೆ ಹೊಂದುವುದು ಎಂದರೆ ಅರ್ಥವೇನು. ಈ ಬಗ್ಗೆ ಯೋಚಿಸಿದಾಗ ನಮಗೆಲ್ಲ ಆ ಹದಿನೆಂಟರಲ್ಲಿ ಖಿನ್ನತೆ ಎನ್ನುವ ಪದವನ್ನು ಓದಿದ ನೆನಪು ಇಲ್ಲ. ಮಕ್ಕಳಂತೆ ಆಟವಾಡಿ, ಓದುತ್ತ, ಹಿರಿಯರು ಹೇಳಿದ ಕೆಲಸವನ್ನು ಮಾಡಿಕೊಳ್ಳುತ್ತ ಇದ್ದು ಬಿಡುತ್ತಿದ್ದೇವು. ಕಷ್ಟ ಬಂದಿತೋ ದೊಡ್ಡವರ ಹೆಗಲಿಗೆ ಹೆದರುತ್ತಲೇ ವಗರ್ಾಯಿಸಿಬಿಡುವುದು. ಸುಖವಿತ್ತೋ ಎಲ್ಲರೊಂದಿಗೆ ಹೇಳಿಕೊಂಡು ಖುಷಿ ಪಡುವುದು ಇಷ್ಟು ಮಾತ್ರ ಇತ್ತು.
ಈಗ ಅಂತಹ ಮನಸ್ಥಿತಿಯೇ ಮಕ್ಕಳಲ್ಲಿಲ್ಲ. ಕಾಲೇಜಿಗೆ ಹೋಗುವ ಹುಡುಗಿಯೊಬ್ಬಳಿಗೆ ಒಮ್ಮೆ ರಸ್ತೆಯಲ್ಲಿ ಯಾರೋ ಒಬ್ಬ ಪೋಲಿ ಹುಡುಗ ಚುಡಾಯಿಸಿದ. ಮೊದಲನೇ ದಿನ ಆಕೆ ಅವನತ್ತ ಲಕ್ಷ್ಯ ಕೊಡಲಿಲ್ಲ. ಆ ಹುಡುಗ ಮಾರನೇ ದಿನವೂ ಬಂದ. ಆಗ ಆಕೆಯೇ ಹೀಗೆಲ್ಲ ಬರಬೇಡ ಮನೆಯಲ್ಲಿ ತಿಳಿಸುತ್ತೇನೆ ಅಂದಳು. ಆದರೆ ಆ ಹುಡುಗ ಸುಮ್ಮನಾಗಲಿಲ್ಲ. ಒಂದಷ್ಟು ಆಕೆಗೆ ಚುಡಾಯಿಸಿದ. ತನ್ನನ್ನು ಪ್ರೀತಿಸು ಇಲ್ಲವಾದರೆ ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ ಎನ್ನುವ ಬೆದರಿಕೆ ಒಡ್ಡಿದ. ಆಕೆ ಹೆದರಿದಳು. ಮನೆಯಲ್ಲಿ ಹೇಳಿದರೆ ತನ್ನ ಮೇಲೆ ತಪ್ಪು ತಿಳಿದುಕೊಳ್ಳಬಹುದು ಎನ್ನುವ ಅಂಜಿಕೆ. ಅಂದರೆ ಮನೆಯವರು ತನ್ನ ಪರವಾಗಿ ನಿಲ್ಲಬಹುದು ಎನ್ನುವ ವಿಶ್ವಾಸವಿಲ್ಲ. ಹಾಗಾಗಿ ಮುಂದಿನ ದಾರಿ ಏನು. ತೋಚುತ್ತಿಲ್ಲ. ನಾಲ್ಕಾರು ದಿನ ಯೋಚಿಸಿ, ಅತ್ತು, ತನ್ನೊಳಗೆ ಇಟ್ಟುಕೊಂಡು ಸುಸ್ತಾಗುತ್ತಾಳೆ. ಅದುವೇ ಖಿನ್ನತೆ. ಉಳಿದ ದಾರಿ ಸಾವು. ಆ ಸಾವನ್ನು ವಿಷ ತೆಗೆದುಕೊಂಡೋ, ನೇಣು ಹಾಕಿಕೊಂಡೋ ಸ್ವಾಗತಿಸಿ ಬಿಡುತ್ತಾಳೆ. ಹೀಗೆ ಅನೇಕ ಕಾರಣಗಳು ಹದಿಹರೆಯದವರು ಆತ್ಮಹತ್ಯೆ ಮಾಡಿಕೊಳ್ಳಲು ಸಿಗುತ್ತವೆ. ಮಾಕ್ಸರ್್ ಕಡಿಮೆ ಬಿತ್ತು ಎಂದು ನೇಣು ಹಾಕಿಕೊಳ್ಳುವುದು. ಪ್ರೀತಿಸಿದ ಹುಡುಗಿ ಒಪ್ಪಲಿಲ್ಲವೆಂದು ಸಾಯುವುದು, ಗೆಳೆಯರ ಮಧ್ಯ ಮಯರ್ಾದಿ ಹೋಯಿತೆಂದು ಬಾವಿಗೆ ಹಾರುವುದು ಇಂಥಹ ದುರಂತ ಯೋಚನೆಗಳೇ ಮಕ್ಕಳಲ್ಲಿ ಬರುತ್ತಿದೆ ಎಂದರೆ ಅದು ಖಿನ್ನತೆಯೇ? ಎನ್ನುವದು ಯೋಚಿಸಬೇಕು.
ಮಕ್ಕಳಿಗೆ ಈಗ ಬೇಕಾದಷ್ಟು ರೀತಿಯಲ್ಲಿ ತಿಳುವಳಿಕೆ ನೀಡುತ್ತಿದ್ದರೂ ಸಹ ತಮ್ಮ ಸಾವನ್ನು ಹುಡುಕಿಕೊಳ್ಳುತ್ತಿದ್ದಾರೆ ಎಂದರೆ ನಾವು ಬೆಳೆಸುವ ರೀತಿ ತಪ್ಪಾಗುತ್ತಿದೆಯೇ ಎನ್ನುವ ಸಂಶಯ ಪಾಲಕರಲ್ಲಿ ಮೂಡುತ್ತಿದೆ. ಮಕ್ಕಳನ್ನು ಸ್ವಯೋಚನೆಗೆ ಹಚ್ಚುವುದೇ ಇಲ್ಲ. ಮಕ್ಕಳು ನಮ್ಮಂತೆ ಕಷ್ಟಪಡಬಾರದು ಎಂದು ಎಲ್ಲ ಸವಲತ್ತುಗಳನ್ನು ಕೊಟ್ಟಿದ್ದೇವೆ. ನಡೆದುಕೊಂಡು ಹೋದರೆ ಬಿದ್ದು ಬಿಡಬಹುದು, ಮಕ್ಕಳಿಗೆ ಹಸಿವೆ ಆಗಲೇ ಬಾರದು, ಮಕ್ಕಳು ಆಟವಾಡಲು ಹೋದರೆ ಬಿದ್ದು ಮೊಣಕಾಲು ಗಾಯವಾಗುವುದು, ಒಟ್ಟಿನಲ್ಲಿ ನಮ್ಮ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಎನ್ನುವದು ಬರಲೇ ಬಾರದು. ಶಿಕ್ಷಕರು ನಮ್ಮ ಮಗುವಿಗೆ ವಿದ್ಯಾಭ್ಯಾಸ ಕಲಿಯಲಿ ಎಂದು ಒಂದು ಮಾತು ಬೈದರೆ ನಮ್ಮ ಮಗುವನ್ನು ವಹಿಸಿಕೊಂಡು ಶಿಕ್ಷಕರನ್ನೇ ದೂಷಿಸುತ್ತೇವೆ. ಆ ಮಕ್ಕಳಿಗೂ ಗೊತ್ತು ತಾನು ತಪ್ಪು ಮಾಡಿದ್ದರೂ ಶಿಕ್ಷಕರು ತನಗೆ ಬೈದರೆ ಸಪೋಟರ್್ ಮಾಡಲು ಜನವಿದ್ದಾರೆ. ಹಾಗಾಗಿ ಸ್ನೇಹಿತರೆದುರು ಅವಮಾನವಾಯಿತೆಂದೋ, ಮಯರ್ಾದಿ ಹೋಯಿತೆಂದೋ ಅನ್ನಿಸುವುದೇ ಇಲ್ಲ. ಚಿಕ್ಕವರಿದ್ದಾಗ ಚಿಕ್ಕಚಿಕ್ಕ ಪೆಟ್ಟು ಆಗದಂತೆ ನೋಡಿಕೊಂಡು ಬಿಡುತ್ತೇವೆ. ದೊಡ್ಡವರಾಗುತ್ತಲೇ ಇನ್ನು ಬುದ್ಧಿಯೂ ಬೆಳೆದಿರುವುದಿಲ್ಲ. ಹಾಗಾಗಿ ಚಿಕ್ಕಚಿಕ್ಕ ವಿಷಯಗಳೆ ದೊಡ್ಡ ಕಷ್ಟವಾಗಿ ತೋರುತ್ತದೆ. ಒಂದು ಕಡೆ ಮುದ್ದಿನಿಂದ ಬೆಳೆದಿರುತ್ತಾರೆ. ಮತ್ತೊಂದು ಕಡೆ ಬಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಾಮಥ್ರ್ಯವನ್ನು ಬೆಳೆಸಿಕೊಂಡಿರುವುದಿಲ್ಲ. ಹಾಗಾಗಿ ಮನಸ್ಸಿಗೆ ಒತ್ತಡ ಆರಂಭವಾಗುತ್ತದೆ. ಆ ಒತ್ತಡವೇ ಸಾವಿನ ದವಡೆಗೆ ತಂದು ನಿಲ್ಲಿಸುತ್ತಿರುವುದು.
ಜಗತ್ತಿನಲ್ಲಿ ಆತ್ಮಹತ್ಯೆಯ ಪ್ರಕರಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದ ಐವತ್ತು ವರ್ಷದಿಂದ ವಿಶ್ವದಾದ್ಯಂತ ಶೇಕಡ ಅರವತೈದಕ್ಕಿಂತ ಹೆಚ್ಚಾಗಿದೆ. ಪ್ರತೀ ನಲವತ್ತು ಸೆಕೆಂಡಿಗೆ ಒಬ್ಬ ವ್ಯಕ್ತಿ ಆತ್ಮ ಹತ್ಯೆ ಮಾಡಿಕೊಳ್ಳುತ್ತಾನೆ ಎಂದು ಇತ್ತಿಚಿನ ಸಮೀಕ್ಷೆಯೊಂದು ಹೇಳುತ್ತದೆ. ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿಯುವ ಸಂಖ್ಯೆ ಮಾತ್ರ ತೀರ ಕಡಿಮೆ ಕೇವಲ ಹತ್ತರಿಂದ ಇಪ್ಪತ್ತು ಪಸರ್ೆಂಟ್ ಮಾತ್ರ. ಅಂದರೆ ಆತ್ಮಹತ್ಯೆಯ ಕರಾಳತೆ ಅದೆಷ್ಟು ಆಳವಿದೆ ಎಂದು ಗೊತ್ತಾಗುತ್ತದೆ.
ಆತ್ಮಹತ್ಯೆಯನ್ನು ತಡೆಯಬಹುದೇ? ಖಂಡಿತ ತಡೆಯಬಹುದು. ಮಕ್ಕಳಿಗೆ ಕಷ್ಟವೇ ಬರಬಾರದು ಎನ್ನುವ ಯೋಚನೆ ಮಾಡುವುದಕ್ಕಿಂತ ಬಂದ ಕಷ್ಟವನ್ನು ಎದುರಿಸುವುದು ಹೇಗೆ ಎನ್ನುವುದನ್ನು ಆಯಾ ಸಮಯಕ್ಕೆ ತಿಳಿಸಿಕೊಡಬೇಕು. ಮಕ್ಕಳನ್ನು ಪ್ರೀತಿಸುವುದರ ಜೊತೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮಕ್ಕಳು ಹೇಳುವ ವಿಷಯಗಳನ್ನು ನಮಗೆ ಬೇಕಾಗಿರಲಿ ಬೇಡವಾಗಿರಲಿ ಕೇಳಿಸಿಕೊಳ್ಳುವುದು ಮೊದಲು ಪಾಲಕರು ಪಾಲಿಸಬೇಕು. ಇಡೀ ದಿನ ಏನೆಲ್ಲ ನಡೆಯಿತು ಎನ್ನುವುದನ್ನು ಮಕ್ಕಳು ಒಂದು ಹತ್ತು ನಿಮಿಷದಲ್ಲಿ ದಿನಕ್ಕೊಮ್ಮೆ ಹೇಳಿದಾಗ ಅವರಲ್ಲಿಯ ಸಮಸ್ಯೆಯೂ ಅಲ್ಲಿ ಹೊರ ಬಿದ್ದು ಬಿಡುತ್ತದೆ. ಆಗ ನಾವು ಪರಿಹಾರ ಸೂಚಿಸುವುದು ಸುಲಭವಾಗುತ್ತದೆ. ಜೊತೆಗೆ ಪಾಲಕರಿಗೆ ತನ್ನೆಲ್ಲ ವಿಚಾರ ಗೊತ್ತು ಎನ್ನುವ ಧೈರ್ಯವೇ ಮನಸ್ಥೈರ್ಯವನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ ಮಾರ್ಗದರ್ಶನವು ಎಷ್ಟು ಮುಖ್ಯವೋ ಅವರೊಳಗೆ ಆತ್ಮಸ್ಥರ್ಯ ಹುಟ್ಟಿ ಹಾಕುವುದು ಬಹಳ ಮುಖ್ಯ. ಇವೆರಡು ಕಾಲಕಾಲಕ್ಕೆ ಪೋಷಕರು ನಿರ್ವಹಿಸಿಕೊಂಡರೆ ತಮ್ಮ ಮಕ್ಕಳು ಆತ್ಮಹತ್ಯೆಯಾಗುವಂಥಹ ಆ ಕ್ಷಣವನ್ನು ತಪ್ಪಿಸಿಕೊಂಡಳ್ಳಬಹುದು. ಅತ್ಯಮೂಲ್ಯ ಜೀವನವ್ನು ಕಟ್ಟಿಕೊಡಬಹುದು.