ತೆಹ್ರಾನ್,
ಏ 19,ಇರಾನ್ ವೃತ್ತಿಪರ ಫುಟ್ಬಾಲ್ ಲೀಗ್ ಪುನರಾರಂಭವಾಗುವ ಕುರಿತು ಮುಂದಿನ ತಿಂಗಳು
ನಿರ್ಧಾರ ಕೈಗೊಳ್ಳಲಾಗುವುದು ಎಂದು ಇರಾನ್ ಕ್ರೀಡಾ ಮೆಡಿಷನ್ ಫೆಡರೇಷನ್ ನ ವಕ್ತಾರ
ಪ್ರಕಟಿಸಿದ್ದಾರೆ.ನೋವೆಲ್ ಕೊರೊನಾ ವೈರಸ್ ನಿಂದ ಯಾವುದೇ ಅಪಾಯವಿಲ್ಲ ಎಂದು
ಅಧಿಕಾರಿಗಳು ಸುರಕ್ಷತೆಯ ನೀಡಿದ ಬಳಿಕ ಪಂದ್ಯಗಳು ಪುನರಾರಂಭವಾಗಲಿವೆ ಎಂದು ರೆಜಾ ಸೀದಿ
ಹೇಳಿದ್ದಾರೆ.''ಕ್ರೀಡಾಪಟುಗಳ ಆರೋಗ್ಯವೇ ನಮಗೆ ಮುಖ್ಯ. ಮೇ 20ರವರೆಗೆ ಎಲ್ಲ
ಕ್ರೀಡಾ ಚಟುವಟಿಕೆಗಳು ಅಮಾನತುಗೊಂಡಿವೆ. ಹೀಗಾಗಿ ಇರಾನ್ ವೃತ್ತಿಪರ ಫುಟ್ಬಾಲ್ ಲೀಗ್
ಪುನರಾರಂಭವಾಗುವ ಕುರಿತು ಮೇ 4ರಂದು ನಿರ್ಧಾರ ಕೈಗೊಳ್ಳಲಾಗುವುದು, '' ಎಂದ ರೆಜಾ
ಹೇಳಿರುವ ಕುರಿತು ತೆಹ್ರಾನ್ ಟೈಮ್ಸ್ ಡೈಲಿ ಶನಿವಾರ ಉಲ್ಲೇಖಿಸಿದೆ. ಏಕಾಏಕಿ
ಕೊರೊನಾ ಹಬ್ಬಿರುವ ಹಿನ್ನೆಲೆಯಲ್ಲಿ ಇರಾನ್, ಕಳೆದ ಫೆಬ್ರವರಿಯಲ್ಲಿ ಮುಂದಿನ
ಆದೇಶದವರೆಗೂ ಎಲ್ಲ ಕ್ರೀಡಾಕೂಟಗಳನ್ನು ಅಮಾನತುಗೊಳಿಸಿದೆ ಎಂದು ಕ್ಸಿನ್ಹುವಾ ವರದಿ
ಮಾಡಿದೆ. ಇರಾನ್ ನಲ್ಲಿ ಶನಿವಾರದವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 5,031ಕ್ಕೆ ಏರಿದ್ದು, 80, 868 ಮಂದಿಗೆ ಸೋಂಕು ದೃಢಪಟ್ಟಿದೆ.