ಅತಿಕ್ರಮಣದಾರರ ಅಜರ್ಿಗಳನ್ನು ವಿನಾಕಾರಣ ತಿರಸ್ಕರಿಸಲಾಗುತ್ತದೆ: ಖಾನ್


ಲೋಕದರ್ಶನ ವರದಿ

ಸಿದ್ದಾಪುರ 3:  ತಾಲೂಕು ಪಂಚಾಯತ ಸಭಾ ಭವನದಲ್ಲಿ ತಾ.ಪಂ ಅಧ್ಯಕ್ಷ ಸುಧೀರ ಗೌಡ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

 ಸಮಾಜಕಲ್ಯಾಣ ಇಲಾಖೇಯ ಎಸ.ಪಿ ನರೋನಾ ಮಾಹಿತಿ ನೀಡುವಾಗ ತಾ.ಪಂ ಸದಸ್ಯ ನಾಸೀರ ವಲ್ಲಿ ಖಾನ ಮಾತನಾಡಿ ಅತಿಕ್ರಮಣದಾರರ ಅಜರ್ಿಗಳನ್ನು ವಿನಾಕಾರಣ ನೀಡಿ ತಿರಸ್ಕರಿಸಲಾಗುತ್ತದೆ, ಈಗಾಗಲೇ ಎಷ್ಟು ಅಜರ್ಿಗಳು ಪುರಸ್ಕೃತಗೊಂಡಿವೆ. ಇಲ್ಲ ಸಲ್ಲದ ದಾಖಲೆ ಕೇಳಿದ್ರೆ ಪೂರೈಸುವುದು ಹೇಗೆ? ಅವರು ನೀಡಿರುವ ದಾಖಲೆಗಳಲ್ಲಿ ಎಷ್ಟು ದಾಖಲೆಗಳನ್ನು ಒದಗಿಸಬೇಕು? ಹೀಗಾದ್ರೆ ನೀವೇಷ್ಟು ಅಜರ್ಿಗಳನ್ನು ಪುರಸ್ಕರಿಸುತ್ತಿರಿ? ಎಂದು ಪ್ರಶ್ನಿಸಿದರು.

10544 ಅಜರ್ಿ ಸಲ್ಲಿಕೆಯಾಗಿದ್ದು, 9234 ಅಜರ್ಿಗಳು ಸರಿಯಾದ ದಾಖಲೆಗಳಿಲ್ಲದೆ ತಿರಸ್ಕೃತವಾಗಿವೆ. ಮೂರು ತಲೆಮಾರಿನ ಮಾಹಿತಿ ನೀಡುವಂತೆ ತಿಳಿಸುತ್ತಿದ್ದಾರೆ ಎಂದರು.

   ತಾಲೂಕು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲು ದಾಖಲೆಗಳನ್ನು ನೀಡಲು ಲಂಚ ಕೇಳುತ್ತಾರೆ ಎಂಬ ಸುದ್ದಿ ಇದೆ ಎಂದು ಸಿರಳಗಿ ಗ್ರಾ.ಪಂ ಅಧ್ಯಕ್ಷ ವೀರಭದ್ರ ಪಾಟೀಲ್ ಸಭೆಯ ಗಮನಕ್ಕೆ ತಂದರು. ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಉತ್ತರಿಸಿ ಆ ರೀತಿ ಪ್ರಕರಣಗಳು ಗಮನಕ್ಕೆ ಬಂದಿಲ್ಲಾ, ಪರಿಶೀಲಿಸುವುದಾಗಿ ತಿಳಿಸಿದರು.

    ತಾಲೂಕು ಪಂಚಾಯತದಲ್ಲಿ ಅಧ್ಯಕ್ಷ ಉಪಾದ್ಯಕ್ಷರುಗಳಿಗೆ ಮಾತ್ರ ಪ್ರತ್ಯೇಕ ಕೊಠಡಿಗಳಿವೆ. ಸದಸ್ಯರುಗಳಿಗೆ ಕೋಠಡಿಗಳಿಲ್ಲ ನಮಗೂ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡುವಂತೆ ಸದಸ್ಯ ರಘುಪತಿ ಭಟ್ ಸಭೆಯಲ್ಲಿ ಆಗ್ರಹಿಸಿದರು.

    ತಾಲೂಕಿನ ಕೋಲಸಿಸರ್ಿ ಪ್ರೌಢಶಾಲೆಯ ಮುಖ್ಯ ಅಡಿಗೆಯವರ ಮೇಲೆ ಕಲ್ಲು ಬಿದ್ದು ಗಾಯಗೊಂಡಿರುವ ಪ್ರಕರಣವನ್ನು ತಾ.ಪಂ ಸದಸ್ಯ ನಾಸೀರ ವಲ್ಲಿ ಖಾನ ಸಬೇಯ ಗಮನಕ್ಕೆ ತಂದರು. ಮುಖ್ಯೋಧ್ಯಾಪಕರು ಏಂಟು ದಿನವಾದ್ರು ಇಲಾಖೆ ಗಮನಕ್ಕೆ ತಾರದಿರುವ ಬಗ್ಗೆ ಆಕ್ಷೇಪವೆತ್ತಿದ್ದರು. ಬಿಸಿಯೂಟ ನಿದರ್ೇಶಕ ಚೈತನ್ಯಕುಮಾರ ಮಾಹಿತಿ ನೀಡಿ ಅವರಿಗೆಇಲಾಖೆಯಿಂದ ವೈದ್ಯಕೀಯ ವೆಚ್ಚ ಬರಿಸಲಾಗುವುದು ಎಂದರು.

    ನೆಜ್ಜೂರಿಗೆ ಸರಿಯಾಗಿ ಬಸ್ ಬರುತ್ತಿಲ್ಲ. ತಾ.ಪಂ ಸಾಮಾನ್ಯ ಸಭೆಗಳಿದ್ದ ಮೂನರ್ಾಲ್ಕು ದಿನಗಳು ಮಾತ್ರ ಬಸ್ ಬರುತದೆ ಇಲ್ಲದಿದ್ದರೆ ತಿಂಗಳಿಗೆ ಮಾರು ದಿನ ಮಾತ್ರ ಬಸ್ ಬರುತ್ತವೆ ಎಂದು ತಾ.ಪಂ ಸದಸ್ಯ ನಾಸೀರ ವಲ್ಲಿ ಖಾನ ಗಮನ ಸೆಳೆದರು. ಅದಕ್ಕೆ ಉತ್ತರಿಸಿದ ಕಂಟ್ರೋಲರ್ ಆರ್ ಟಿ ನಾಯ್ಕ ಉತ್ತರಿಸಿ ಈಗ ಪ್ರವಾಸ ಸಮಯವಾಗಿದ್ದರಿಂದ ಬಸ್ ವ್ಯತ್ಯವಾಗುತ್ತಿವೆ ಮುಂದೆ ಸರಿಪಡಿಸುತ್ತೇವೆ ಎಂದರು. ನಿಮಗೆ ನೆಜ್ಜೂರಿಗೆ ಬರುವ ಇರುವುದೊಂದೆ ಬಸ್ ಪ್ರವಾಸಕ್ಕೆ ಬೇಕಾ?ೆ ಎಂದು ಪ್ರಶ್ನಿಸಿದರು. ಸ್ಥಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮಧ್ಯ ಪ್ರವೇಶಿಸಿ ಇರುವ ಒಂದೊಂದು ಬಸ್ಸಾದರು ಸರಿಯಾಗಿ ಬಿಡಿ. ಶಾಲಾ ಕಾಲೇಜು ಮಕ್ಕಳಿಗೆ ಸರಿಯಾಗಿ ಬಸ್ ಕೊಡಿ. ನಿಡಗೋಡ, 16ನೇ ಮೈಲಿಕಲ್ಲಿನಲ್ಲಿ ಶಾಲಾ,ಕಾಲೇಜು ಸಮಯಕ್ಕೆ ಬಸ್ ನಿಲ್ಲಿಸಲು ಚಾಲಕರಿಗೆ ಸೂಚಿಸಿ ಎಂದರು.

   ಉಳಿದಂತೆ ಆರೋಗ್ಯ ಇಲಾಖೆಯ ಡಾ. ಲಕ್ಷ್ಮೀಕಾಂತ, ಪಶುಸಂಗೋಪನೆಯ ಡಾ. ನಂದಕುಮಾರ ಪೈ, ಹೆಸ್ಕಾಂ ನ ಜಿ.ಟಿ ಹೆಗಡೆ, ಕೃಷಿ ಇಲಾಖೆಯ ಪ್ರಶಾಂತ,ತೋಟಗಾರಿಕೆ ಇಲಾಖೆಯ ಮಾಹಾಬಲೇಶ್ವರ ಹೆಗಡೆ,ಪಿಡ್ಲುಡಿ,ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.ತಾ.ಪಂ ಪ್ರಭಾರಿ ಕಾರ್ಯ ನಿರ್ವಹಣಾಧಿಕಾರಿ ದಿನೇಶ ಈಡಿ, ಸದಸ್ಯರುಗಳಾದ ವಿವೇಕ ಭಟ್, ಪದ್ಮಾವತಿ ಮಡಿವಾಳ, ಭಾಗ್ಯಶ್ರೀ ನಾಯ್ಕ, ಗಿರಿಜ ಗೌಡ, ಕುಸುಮಾ ಹರಿಜನ ಉಪಸ್ಥಿತರಿದ್ದರು.