ವಿಜಯಪುರ: 17- ಸಮಾಜದಲ್ಲಿ ಹೆಣ್ಣನ್ನು ಕೀಳಾಗಿ ಕಾಣುವುದು, ತುಳಿತಕ್ಕೆ ಗುರಿಯಾಗುವುದು, ಹೆಣ್ಣು ಮಕ್ಕಳಿಗೆ ಹೆಣ್ಣಿನಿಂದಲೇ ಶೋಷಣೆಯಾಗುತ್ತಿರುವಾಗ ಇವುಗಳನ್ನು ಸವಾಲಾಗಿ ಸ್ವೀಕರಿಸಿ ಮೆಟ್ಟಿ ನಿಲ್ಲುವ ಶಕ್ತಿ ಹೆಣ್ಣು ಮಕ್ಕಳಲ್ಲಿರಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನೀಲಮ್ಮ ಮೇಟಿ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ (ಬೇಟಿ ಬಚಾವೋ ಬೇಟಿ ಪಡಾವೋ) ಕಾರ್ಯಕ್ರಮದಡಿಯಲ್ಲಿ ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಹೆಣ್ಣು-ಗಂಡು ಎಂಬ ತಾರತಮ್ಯ ಹೋಗಲಾಡಿಸಬೇಕು. ಹೆಣ್ಣು ಅಬಲೆ ಅಲ್ಲ, ಅವಳೊಬ್ಬಳು ಸಬಲೆ ಹೆಣ್ಣು ದಿಟ್ಟತನ, ತಾಳ್ಮೆ, ಸಹನೆ ಸಂದರ್ಭತಕ್ಕಂತೆ ಚಾಣಾಕ್ಷತೆಯನ್ನು ಹೊಂದಿರಬೇಕು ಅಂದಾಗ ಇಡೀ ಜಗತ್ತನ್ನು ಗೆಲ್ಲಬಹುದಾಗಿದೆ. ಪ್ರತಿಯೊಂದು ಕುಟುಂಬ ಹಾಗೂ ಕುಟುಂಬ ಪುರುಷರ ಬೆಂಬಲ ಇದ್ದಾಗ ಮಾತ್ರ ಅವಳು ಬೆಳೆಯಲು ಸಹಕಾರಿಯಾಗಬಲ್ಲದು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷರ ಸಮಾನವಾಗಿ ಹೆಣ್ಣು ಕಾರ್ಯನಿರ್ವಹಿಸುತ್ತಿದ್ದಾಳೆ. ಹೆಣ್ಣಿನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಹೆಮ್ಮರವಾಗಿ ಬೆಳೆಯಲು ಸಕರ್ಾರ, ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳು ಸೇರಿದಂತೆ ಕುಟುಂಬದ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಪ್ರಭಾಕರ್ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಮಕ್ಕಳ ರಕ್ಷಣೆ ಕುರಿತು ಈಗಾಗಲೇ ಜುವಿನೈಲ್ ಜಸ್ಟಿಸ್, ಚೈಲ್ಡ್ ಮ್ಯಾರೇಜ್ ಕಾಯ್ದೆ ಹಾಗೂ ಪೋಸ್ಕೋ ಕಾಯ್ದೆ ಕಾರ್ಯನಿರ್ವಹಿಸುತ್ತಿದೆ. ಈ ಕಾಯ್ದೆಗಳನ್ನು ಕೇವಲ ಜಾರಿ ಮಾಡದೇ ಸಂಬಂಧಿಸಿದವರು ಅನುಷ್ಠಾನಗೊಳಿಸಬೇಕು. ಸಂಬಂಧಿಸಿದ ಅಧಿಕಾರಿಗಳು ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳದೇ ಮಕ್ಕಳ ಕಾಯ್ದೆ ಕುರಿತು ಮುತುವಜರ್ಿ ವಹಿಸಿ ಕಾರ್ಯನಿರ್ವಹಿಸಿದಾಗ ಮಾತ್ರ ಇಂತಹ ಕಾನೂನುಗಳ ಜಾರಿ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಮಕ್ಕಳ ದೂರುಗಳಿಗೆ ತಕ್ಷಣವೇ ಸ್ಪಂದಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಅವಕಾಶಗಳಿವೆ. ಮಕ್ಕಳ ಕಾಯ್ದೆಗಳ ಕುರಿತು ಸಂಬಂಧಿಸಿದವರು ಅರಿವು ಹೊಂದಬೇಕು. ಬಾಲ್ಯ ವಿವಾಹ ಕುರಿತು ದೂರುಗಳು ದಾಖಲಾದಲ್ಲಿ ಪೋಲಿಸ್ ಇಲಾಖೆ ಕರ್ತವ್ಯ ಹೆಚ್ಚಾಗಿದೆ. ಹಿರಿಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ತಕ್ಷಣ ಸ್ವತ: ತಾವೇ ದೂರು ದಾಖಲಿಸಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ಒದಗಿಸಬೇಕು ಎಂದು ಹೇಳಿದರು.
ಪೋಸ್ಕೋ ಕಾಯ್ದೆ ಕೂಡ ಅತ್ಯಂತ ಕಠಿಣವಾದ ಕಾಯ್ದೆಯಾಗಿದೆ. ಈ ಕಾನೂನಿನಡಿ ಯಾವುದೇ ಸಂತ್ರಸ್ತ ಮಕ್ಕಳ ಹೆಸರು, ಭಾವಚಿತ್ರ ತೋರಿಸುವುದು ಕೂಡ ಅಪರಾಧವಾಗಿದೆ. ಈ ಕುರಿತು ಮಾಧ್ಯಮದವರ ಜವಾಬ್ದಾರಿಯಾಗಿದೆ. ಎಲ್ಲ ಇಲಾಖೆಗಳು, ಸಂಘ-ಸಂಸ್ಥೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಸೂಕ್ತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿದರ್ೇಶ ಮಹೇಶ ಕೆಲವಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಇದೇ ನವೆಂಬರ್ 15 ರಿಂದ 22 ರವರೆಗೆ ಜಿಲ್ಲೆಯಾದ್ಯಂತ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಕುರಿತು ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಸಪ್ತಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಲಿಂಗಾನುಪಾತ ಸಮನಾಗಿ ಹೊಂದಾಣಿಕೆ ಮಾಡಲು ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಲು ಕ್ರಮ ವಹಿಸಲಾಗುತ್ತಿದೆ. ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಮತ್ತು ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು ಸಪ್ತಾಹದ ಉದ್ದೇಶವಾಗಿದೆ. ಈ ಕುರಿತು ಗ್ರಾಮೀಣ ಭಾಗಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರತಿಜ್ಞಾ ವಿಧಿ, ಸಹಿ ಕ್ಯಾಂಪೇನ್, ಪ್ರಭಾತ ಪೇರಿ, ಚಿತ್ರಕಲೆ, ಪೇಂಟಿಂಗ್, ಕರಕುಶಲ, ಸಿಹಿ ವಿತರಣೆ, ಶುಭಾಶಯ ಕೋರುವುದು, ಸುಕನ್ಯಾ ಸಮೃದ್ದಿ ಯೋಜನೆ, ಬೀದಿನಾಟಕ ಹಾಗೂ ಮಾಧ್ಯಮ ಮೂಲಕ ಆರೋಗ್ಯದ ನ್ಯೂನ್ಯತೆ ಕಂಡು ಹಿಡಿಯುವುದು ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಎಸ್.ಎಂ.ಗುಣಾರೆ, ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರಮಠ ಹಾಗೂ ವಿದ್ಯಾಥರ್ಿನಿ ಲಕ್ಷ್ಮೀ ವಾಲಕಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಗಣ್ಯರಿಂದ ಸಹಿ ಅಭಿಯಾನ ಹಾಗೂ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ ಜರುಗಿತು. ಜಿಲ್ಲಾ ಪಂಚಾಯತ್ ಸದಸ್ಯೆ ಶಾಂತಾಬಾಯಿ ನಾಗರಾಳ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಎಂ.ಎನ್.ಸಿಂಧೂರ, ಜಿಲ್ಲಾ ಪಂಚಾಯತ್ ಯೋಜನಾ ನಿದರ್ೇಶಕ ಎ.ಬಿ.ಅಲ್ಲಾಪುರ ಸೇರಿದಂತೆ ಆಶಾ-ಅಂಗನವಾಡಿ ಕಾರ್ಯಕತರ್ೆಯರು ಇತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಬೆಳಿಗ್ಗೆ ಹೆಣ್ಣು ಮಗುವಿನ ದಿನಾಚರಣೆ ಸಪ್ತಾಹದ ಅಂಗವಾಗಿ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಆಯೋಜಿಸಿದ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಪ್ರಭಾಕರ್ರಾವ್ ಅವರು ಜಂಟಿಯಾಗಿ ಚಾಲನೆ
ನೀಡಿದರು.