ಕುಟುಂಬಕ್ಕೆ ವಿಮಾ ಪರಿಹಾರ ಹಸ್ತಾಂತರ
Insurance compensation handed over to family
ಬಳ್ಳಾರಿ 19: ಬಳ್ಳಾರಿ ಜಿಲ್ಲಾ ಪಂಚಾಯತ್ ಶಾಖೆಯ ಕೆನರಾ ಬ್ಯಾಂಕ್ ನಿಂದ ಮೃತ ಗ್ರಾಹಕ ಮನೋಜ್ ಕುಮಾರ್ ಅವರಿಗೆ ಕೆನರಾ ಹೆಚ್‌ಎಸ್‌ಬಿಸಿ ಸಂಸ್ಥೆಯು ರೂ.10,58,500 ಮೊತ್ತದ ವಿಮಾ ಪರಿಹಾರ ಚೆಕ್ ನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಿದೆ.
ಗ್ರಾಹಕ ಮನೋಜ್ ಕುಮಾರ್ ಅವರು ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ಶಿಕ್ಷಣ ಸಾಲವನ್ನು ಈ ಬ್ಯಾಂಕ್ ನಿಂದ ಕೆನರಾ ಹೆಚ್‌ಎಸ್‌ಬಿಸಿ ಕವಚ ವಿಮಾ ಪಾಲಿಸಿ ಅಡಿ ರೂ.1,35,021 ಏಕಕಾಲದ ಪ್ರೀಮಿಯಂ ಪಾವತಿಸಿ ವಿಮೆ ಮಾಡಲಾಗಿತ್ತು.
ಗ್ರಾಹಕ ಮನೋಜ್ ಕುಮಾರ್ ಅವರು ಪ್ರವಾಸಿ ಚಟುವಟಿಕೆಯ ಟ್ರೆಕ್ಕಿಂಗ್ ಗೆ ತೆರಳಿದ್ದ ಸಂದರ್ಭದಲ್ಲಿ ಅಕಾಲಿಕವಾಗಿ ನಿಧನರಾದರು. ಶಿಕ್ಷಣ ಸಾಲಕ್ಕೆ ವಿಮೆ ಹೊಂದಿದ್ದ ಕಾರಣದಿಂದ ಕುಟುಂಬಕ್ಕೆ ಆರ್ಥಿಕ ಸಹಾಯ ದೊರಕುವಂತಾಯಿತು.ಕೆನರಾ ಹೆಚ್‌ಎಸ್‌ಬಿಸಿ ಸಂಸ್ಥೆಯು ತಕ್ಷಣ ಪ್ರತಿಕ್ರಿಯಿಸಿ ರೂ.10,58,500 ಮೊತ್ತವನ್ನು ವಿಮಾ ಪರಿಹಾರವಾಗಿ ಮಂಜೂರು ಮಾಡಿದೆ. ಈ ಮೊತ್ತದ ಚೆಕ್ ನ್ನು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಬಳ್ಳಾರಿಯ ಪ್ರಾದೇಶಿಕ ವ್ಯವಸ್ಥಾಪಕ ಅರುಣ್ ಕುಮಾರ್ ಎ.ಜಿ., ಕೆನರಾ ಬ್ಯಾಂಕ್ ಆರ್‌ಎಹೆಚ್ ಬಳ್ಳಾರಿ ಮುಖ್ಯಸ್ಥ ಕಿಶೋರ್ ಕುಮಾರ್ ಅವರ ಸಮ್ಮುಖದಲ್ಲಿ ಕುಟುಂಬದವರಿಗೆ ಹಸ್ತಾಂತರಿಸಿದರು.ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವುದು ನಮ್ಮ ಬ್ಯಾಂಕ್ ನ ಧ್ಯೇಯವಾಗಿದ್ದು, ಶಿಕ್ಷಣ ಸಾಲ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗೂ ಭವಿಷ್ಯದ ಭದ್ರತೆ ಕಲ್ಪಿಸುವ ಉದ್ದೇಶದಿಂದ ವಿಮಾ ಯೋಜನೆಗಳನ್ನು ಅನುಸರಿಸುತ್ತಿದ್ದೇವೆ. ಇಂತಹ ಅಕಾಲಿಕ ದುರಂತ ಸಂದರ್ಭಗಳಲ್ಲಿ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವುದು ಬ್ಯಾಂಕ್ ಹಾಗೂ ವಿಮಾ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಕೆನರಾ ಬ್ಯಾಂಕ್ ನ ಪ್ರಾದೇಶಿಕ ವ್ಯವಸ್ಥಾಪಕ ಅರುಣ್ ಕುಮಾರ್ ಎ.ಜಿ ಅವರು ಹೇಳಿದರು.
ಇದೇ ವೇಳೆ ಕುಟುಂಬದವರು ಕೃತಜ್ಞತೆ ಸಲ್ಲಿಸಿದರು. ಕೆನರಾ ಬ್ಯಾಂಕ್ ಅಧಿಕಾರಿಗಳು ಹಾಗೂ ಕುಟುಂಬದ ಸದಸ್ಯರು ಇದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 