ಹಾವೇರಿ: ಎ.30: ಬೇರೆ ಬೇರೆ ರಾಜ್ಯಗಳಿಂದ ಹಾವೇರಿ ಜಿಲ್ಲೆಗೆ ಆಗಮಿಸಿ ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೇ ಉಳಿದಿರುವ ಕಾಮರ್ಿಕರು, ವಿದ್ಯಾಥರ್ಿಗಳು, ಯಾತ್ರಾಥರ್ಿಗಳು, ಪ್ರವಾಸಿಗರು ಸೇರಿದಂತೆ ಯಾರೇ ಆಗಲಿ ಆಯಾ ತಾಲೂಕು ತಹಶೀಲ್ದಾರಗಳನ್ನು ಸಂಪಕರ್ಿಸಿ ಮಾಹಿತಿ ನೀಡಿದರೆ ಸಕರ್ಾರದ ಮಾರ್ಗಸೂಚಿ ಅನುಸಾರ ತಮ್ಮ ತಮ್ಮ ಊರಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರು ತಿಳಿಸಿದ್ದಾರೆ.
ಹೊರ ರಾಜ್ಯದವರನ್ನು ತಮ್ಮ ಸ್ವಂತ ರಾಜ್ಯಗಳಿಗೆ ಕಳುಹಿಸಿಕೊಡುವ ಕುರಿತಂತೆ ಗುರುವಾರ ತಾಲೂಕಾ ತಹಶೀಲ್ದಾರಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಎರಡು ದಿನದಲ್ಲಿ ಹೊರ ರಾಜ್ಯದವರ ಮಾಹಿತಿ ಕಲೆಹಾಕಿ ತಮ್ಮ ಊರಿಗೆ ತೆರಳಲು ಇಚ್ಛಿಸುವವರ ಪಟ್ಟಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.
ವ್ಯಾಸಂಗ, ಅಧ್ಯಯನ, ಸಂಶೋಧನೆ ಇತರ ಕಾರಣಗಳಿಗಾಗಿ ದೇಶದ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ ವಿದ್ಯಾಥರ್ಿಗಳು, ಸಂಶೋಧಕರು, ಪ್ರವಾಸಿಗರು, ಯಾತ್ರಾಥರ್ಿಗಳು ಹಾಗೂ ವಿವಿಧ ಉದ್ಯೋಗ ಅರಸಿ ಹಾವೇರಿ ಜಿಲ್ಲೆಯಲ್ಲಿ ಉಳಿದುಕೊಂಡವರು ತಮ್ಮ ತಮ್ಮ ಗ್ರಾಮಗಳಿಗೆ ಕಳುಹಿಸಿಕೊಡಲು ಸಕರ್ಾರ ಉದ್ದೇಶಿಸಿದೆ.
ಈ ಹಿನ್ನೆಲೆಯಲ್ಲಿ ತಮ್ಮ ರಾಜ್ಯಗಳಿಗೆ ತೆರಳುವ ಕಾಮರ್ಿಕರನ್ನು ಗುರುತಿಸಿ ಕಳುಹಿಸಿಕೊಡಲು ಎಲ್ಲ ತಹಶೀಲ್ದಾರಗಳು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಈಗಾಗಲೇ ರಾಜ್ಯ ಸಕರ್ಾರ ಬೇರೆ ರಾಜ್ಯದ ಜನರನ್ನು ಅವರವರ ರಾಜ್ಯಕ್ಕೆ ಕಳುಹಿಸಿಕೊಡಲು ರಾಜ್ಯ ಮಟ್ಟದದಲ್ಲಿ ಹಿರಿಯ ಐಎಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿದೆ.
ಹಾವೇರಿ ಜಿಲ್ಲೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀಕಾಂತ ನಾಲವಾರ (ಮೊ.99498 64027) ಹಾಗೂ ವಾಯವ್ಯ ಸಾರಿಗೆ ಸಂಸ್ಥೆಯ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್.ಜಗದೀಶ (7760991900)ಅವರನ್ನು ನೇಮಕ ಮಾಡಲಾಗಿದೆ. ಎಲ್ಲ ತಹಶೀಲ್ದಾರಗಳು ಇವರೊಂದಿಗೆ ಸಮನ್ವಯ ಮಾಡಿಕೊಂಡು ಹೊರ ರಾಜ್ಯದವರನ್ನು ತಮ್ಮ ತಮ್ಮ ರಾಜ್ಯಕ್ಕೆ ಕಳುಹಿಸಿಕೊಡಬೇಕು. ಸಕರ್ಾರದ ಮಾರ್ಗಸೂಚಿಯಂತೆ ಪ್ರವಾಸಿಗರ ಆರೋಗ್ಯ ಸ್ಥಿತಿ ಕುರಿತಂತೆ ತಾಲೂಕಾ ಆರೋಗ್ಯಾಧಿಕಾರಿಗಳ ಪ್ರಮಾಣಪತ್ರ, ಮಾಸ್ಕ್, ಸ್ಯಾನಿಟೈಜರ್, ಊಟದ ವ್ಯವಸ್ಥೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಬೇರೆ ರಾಜ್ಯದಿಂದ ನಮ್ಮ ಜಿಲ್ಲೆಗೆ ಮರಳಿ ಬರುವ ವಿದ್ಯಾಥರ್ಿಗಳು, ಕಾಮರ್ಿಕರು ಹಾಗೂ ಇತರರನ್ನು ಬರಮಾಡಿಕೊಳ್ಳುವ ಕುರಿತಂತೆ ಸಕರ್ಾರದ ಮಾರ್ಗಸೂಚಿಯಂತೆ ಕ್ರಮಕೈಗೊಳ್ಳಬೇಕು. ಆರೋಗ್ಯ ತಪಾಸಣೆ, ಸಾಂಸ್ಥಿಕ ಕ್ವಾರೆಂಟೈನ್ ಮೂಲಕ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಕೆಲವರು ಬಹಳ ದಿನಗಳಿಂದ ಸಣ್ಣ-ಪುಟ್ಟ ವ್ಯಾಪಾರಮಾಡಿಕೊಂಡು ಜಿಲ್ಲೆಯಲ್ಲೇ ಉಳಿದಿರುವ ಹೊರ ರಾಜ್ಯದವರು ಇದೇ ಜಿಲ್ಲೆಯಲ್ಲಿ ಉಳಿಯಲು ಯಾವುದೇ ಅಭ್ಯಂತರವಿಲ್ಲ. ಆದರೆ ಅವರವರ ರಾಜ್ಯಕ್ಕೆ ತೆರಳು ಇಚ್ಛಿಸಿದರೆ ಅವರ ಹೆಸರು, ರಾಜ್ಯ, ಊರು, ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸುವಂತೆ ಸೂಚನೆ ನೀಡಿದರು.
ವಿಡಿಯೋ ಸಂವಾದಲ್ಲಿ ಹಾವೇರಿ ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಕಾಮರ್ಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ, ತಹಶೀಲ್ದಾರ ಶಂಕರ ಇತರರು ಉಪಸ್ಥಿತರಿದ್ದರು.