ಶಿಗ್ಗಾವಿ12: ಕೊರೊನಾ ಸೋಂಕಿತ ದೃಢಪಟ್ಟಿದ್ದರಿಂದ ಸೀಲ್ಡೌನ ಮಾಡಿರುವ ತಾಲೂಕಿನ ಅಂದಲಗಿ ಗ್ರಾಮಕ್ಕೆ ಅಪರಜಿಲ್ಲಾಧಿಕಾರಿ ಟಿ ಯೋಗೇಶ್ವರ ಭೇಟಿ ನೀಡಿಕಟ್ಟು ನಿಟ್ಟಿನ ಕ್ರಮಗಳನ್ನು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಲಾಕ್ಡೌನ ಕಠಿಣವಾಗಿದ್ದಾಗ ಒಂದು ಕೊರೊನಾ ಪ್ರಕರಣ ಪತ್ತೆಯಾಗದೇ ಹಸಿರು ವಲಯದಲ್ಲಿದ್ದ ಹಾವೇರಿಜಿಲ್ಲೆಯಲ್ಲಿ ಲಾಕಡೌನ ಸಡಿಲಗೊಳ್ಳುತ್ತಿದ್ದಂತೆ ಒಂದು ವಾರದ ಅವಧಿಯಲ್ಲಿ ಮೂರು ಕೊರೊನಾ ಪ್ರಕರಣ ದೃಢಗೊಂಡಿದ್ದು ಸವಣೂರ ತಾಲೂಕಿನಲ್ಲಿ 2 ಹಾಗೂ ಶಿಗ್ಗಾವಿ ತಾಲೂಕಿನಲ್ಲಿ 1 ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಜನರಲ್ಲಿ ಆತಂಕ ಶುರುವಾಗಿದೆ.
ಶಿಗ್ಗಾವಿ ತಾಲೂಕಿನ ಅಂದಲಗಿ ಗ್ರಾಮದಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದ್ದು ತಾಲೂಕಿನಲ್ಲಿ ಜನಜೀವನ ಸಹಜ ಸ್ಥಿತಿಗೆ ಧಾವಿಸುತ್ತಿರುವ ಸಂದರ್ಭದಲ್ಲಿ ಕೊರೊನಾ ಸೋಂಕು ಕಾಣಿಸಿ ಕೊಳ್ಳುತ್ತಿದ್ದು ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.ಅಲ್ಲದೇ ಮಾವಿನ ಹಣ್ಣಿನ ವ್ಯಾಪಾರಿಗೆ ತಗಲಿರುವುದರಿಂದ ಆತ ಸೇರಿ ಓಡಾಡಿರುವ ಪ್ರದೇಶಗಳಲ್ಲಿ ಮತ್ತು ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.
ತಾಲೂಕಿನ ಅಂದಲಗಿ ಗ್ರಾಮದಲ್ಲಿ ಸೋಂಕಿತ ವ್ಯಕ್ತಿಯ ಮನೆಯ ಸುತ್ತಮುತ್ತಲಿನ 300 ಮೀಟರ ಪ್ರದೇಶವನ್ನು ಸೀಲ್ಡೌನ ಮಾಡಲಾಗಿದೆ ಹಾಗೂ ಸುತ್ತಮುತ್ತಲಿನ 7 ಕಿ.ಮೀ ಪ್ರದೇಶವನ್ನು ಬಫರ್ ಜೋನ ಎಂದು ಘೋಷಿಸಲಾಗಿದೆ. ಸವಣೂರ ಉಪವಿಬಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಕ ಮಾಡಲಾಗಿದೆ.
ಸೀಲ್ಡೌನ ಪ್ರದೇಶಕ್ಕೆ ಒಳಗೋಹಲು ಹಾಗೂ ಹೊರ ಹೋಗಲು ಒಂದೇ ಮಾರ್ಗ ನಿಗದಿ ಪಡಿಸಿಲಾಗಿದೆ. ಸೀಲ್ಡೌನ ಪ್ರದೇಶದಜನರಿಗೆ ಮನೆ ಮನೆಗೆ ದಿನಬಳಕೆ ವಸ್ತುಗಳನ್ನು ವಿತರಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂದಲಗಿ ಸರಕಾರಿಉದರ್ು ಪ್ರಾಥಮಿಕ ಶಾಲೆಯನ್ನುಕ್ವಾರಂಟೈನ್ ಹಾಗೂ ಪೀವರ ಕ್ಲಿನಿಕ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ಪೋಲಿಸ ಉಪ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಸವಣೂರಿನ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಾಲೂಕದಂಡಾಧಿಕಾರಿ ಪ್ರಕಾಶಕುದರಿ ,ಡಿವೈಎಸ್ಪಿ ಓ.ಬಿ.ಕಲ್ಲೇಶಪ್ಪ, ಸಿ.ಪಿ.ಐ ಬಸವರಾಜ ಹಳಬಣ್ಣವರ, ಪಿ.ಎಸ್ಐ ಸಂತೋಷ ಪಾಟೀಲ, ತಾಲೂಕ ಆರೋಗ್ಯಾಧಿಕಾರಿ ಡಾ|| ಹನುಮಂತಪ್ಪ ಕುಡಚಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.