ಜುಲೈ 19ರಂದು ರೋಟರಿ - ಇನ್ನರವೇಲ್ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ

ಜುಲೈ 19ರಂದು ರೋಟರಿ - ಇನ್ನರವೇಲ್ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ  Installation of new office bearers of Rotary and Inner Wheel on July 19

ಲೋಕದರ್ಶನ ವರದಿ, 

ಜಮಖಂಡಿ  17: ನಗರದ ಪಂಚಮಸಾಲಿ ಸಮುದಾಯ ಭವನದಲ್ಲಿ ಜುಲೈ 19 ರಂದು ರೋಟರಿ ಸಂಸ್ಥೆ ಹಾಗೂ ಇನ್ನರವೇಲ್ ಸಂಸ್ಥೆಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಶ್ರೀಧರ ಕಾಖಂಡಿ ತಿಳಿಸಿದರು. 

ನಗರದ ರೋಟರಿ ಸಂಸ್ಥೆಯ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಸಂಸ್ಥೆಯು ಜವಾಬ್ದಾರಿಯುತ ಕೆಲಸವನ್ನು ನೇಮಿಸಿದ್ದಾರೆ. ಸಂಸ್ಥೆಯಲ್ಲಿ ಬರುವ ದಿನಗಳಲ್ಲಿ ಸಾಮಾಜಿಕ ಸೇವೆಯನ್ನು ಸಲಿಸುತ್ತೆನೆ. ನಗರದಲ್ಲಿ ಪೋಲಿಸ್ ಚೌಕಿಗಳನ್ನು ನಿರ್ಮಿಸಲಾಗುತ್ತದೆ.

ಸಕ್ಕರೆ ಖಾಯಿಲೆ ನಿವಾರಣೆಗೆ (ಡಯಾಬೀಟಿಸ್ ಸೆಂಟರ್) ಕೇಂದ್ರವನ್ನು ತೆರೆಯುವ ಮೂಲಕ ರೋಗಿಗಳು ಕೇವಲ ಒಂದು ಸಾವಿರ ರೂ.ಗಳಿಂದ ಚಿಕಿತ್ಸೆ ಪಡೆದುಕೊಳ್ಳಬಹುದು. ಹಾಗೆ ರಕ್ತದಾನ ಶಿಬಿರಗಳು, ನೇತ್ರ ಚಿಕಿತ್ಸೆಗಳ ಶಿಬಿರಗಳು ಹೀಗೆ ಹಲವಾರು ಸಾಮಾಜಿಕ ಸೇವೆಯನ್ನು ಮಾಡುವ ಉದ್ದೇಶವನ್ನು ಹೊಂದಿದೆನೆ ಎಂದರು. 

ಇನ್ನರವ್ಹೀಲ್ ಸಂಸ್ಥೆಯ ನೂತನ ಅಧ್ಯಕ್ಷೆನಿ ಅರ್ಚನಾ ಕಾಖಂಡಿ ಮಾತನಾಡಿ, ನಮ್ಮ ಸಂಸ್ಥೆಯಿಂದ ಮಹಿಳೆಯರ ಸಬಲೀಕರಣಗಳ ಶಿಬಿರಗಳ ಮೂಲಕ ಸಾಮಜಿಕ ಸೇವೆ ಸಲಿಸುತ್ತೇನೆ. ಮಹಿಳೆ ಆರ್ಥಿಕವಾಗಿ ಹಾಗೂ ಸಕ್ಕರೆ ಖಾಯಿಲೆ ರೋಗಿಗಳನ್ನು ದತ್ತು ಪಡೆದು ಉಚಿತ ಚಿಕಿತ್ಸೆಯನ್ನು ನೀಡುವುದು. ಕ್ಯಾನ್ಸರ್ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುವ ಮೂಲಕ ಸಾಮಾಜಿಕ ಸೇವೆಯನ್ನು ಸಂಸ್ಥೆಯ ಮೂಲಕ ಸಲಿಸುತ್ತೇನೆ ಎಂದರು. 

ಇನ್ನರವ್ಹೀಲ್ ಕಾರ್ಯದರ್ಶಿ ಹರ್ಷಾ ಪ್ರಭು, ರೋಟರಿ ಸಂಸ್ಥೆಯ ಕ್ಲಬ್ ಟ್ರೇನರ್ ಆರ್‌.ಪಿ.ನ್ಯಾಮಗೌಡ ಮಾತನಾಡಿದರು, ರೋಟರಿ ಸಂಸ್ಥೆಯ ಖಜಾಂಚಿ ಮಾದೇವ ಕಂಕಾಳೆ, ಗೋಪಾಲಕೃಷ್ಣ ಪ್ರಭು, ಬಸವರಾಜ ಆಲಗೂರ, ಸುಭಾಸ ಕಾಶೀದ, ಎಸ್‌.ಐ.ಬಿರಾದರ ಸ್ವಾಗತಿಸಿದರು, ಬಸವರಾಜ ಬಳಗಾರ ನಿರೂಪಿಸಿದರು, ಸಂತೋಷ ಹಿರೇಮಠ ವಂದಿಸಿದರು.