ತಾಂಬಾ ಗ್ರಾಮದ ಅಭಿವೃದ್ಧಿಗೆ ಆದ್ಯತೆ: ಶಾಸಕ ಅಶೋಕ ಮನಗೂಳಿ

ತಾಂಬಾ ಗ್ರಾಮದ ಅಭಿವೃದ್ಧಿಗೆ ಆದ್ಯತೆ: ಶಾಸಕ ಅಶೋಕ ಮನಗೂಳಿ Priority for the development of Tamba village: MLA Ashok Managuli

  ಇಂಡಿ 17  : ತಾಂಬಾ ಗ್ರಾಮದ ಜನತೆ ತಮ್ಮ ರಾಜಕೀಯ ಜೀವನದಲ್ಲಿ ಸದಾ ಬೆಂಬಲವಾಗಿ ನಿಂತಿದ್ದು, ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ನಿರಂತರವಾಗಿ ಒದಗಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.  ಗ್ರಾಮದ ನಿಂಗರಾಯ ದೇವಸ್ಥಾನದ ಸಮುದಾಯ ಭವನಕ್ಕೆ 10 ಲಕ್ಷ ಅನುದಾನ ನೀಡಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, "ಗ್ರಾಮದ ಜನರ ಋಣವನ್ನು ಎಂದಿಗೂ ಮರೆಯುವುದಿಲ್ಲ. ಜನರ ಆಶಯದಂತೆ ಗ್ರಾಮದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಸಮಾಜದ ಅಭಿವೃದ್ಧಿ ಮತ್ತು ಧಾರ್ಮಿಕ ಕ್ಷೇತ್ರಗಳ ಬಲವರ್ಧನೆಗೆ ಸರ್ಕಾರದ ನೆರವು ನಿರಂತರವಾಗಿ ದೊರೆಯಲಿದೆ" ಎಂದರು.  ಗ್ರಾಮ ಪಂಚಾಯಿತಿ ಸದಸ್ಯ ಪರಸು ಬಿಸನಾಳ ಮಾತನಾಡಿ, ಶಾಸಕ ಅಶೋಕ ಮನಗೂಳಿ ಅವರ ಪ್ರಯತ್ನದಿಂದ ಗ್ರಾಮಕ್ಕೆ ಕೋಟ್ಯಂತರ ರೂಪಾಯಿ ಅಭಿವೃದ್ಧಿ ಕಾಮಗಾರಿಗಳು ಮಂಜೂರಾಗಿವೆ ಎಂದು ತಿಳಿಸಿದರು.  

ಅವರು ನೀಡಿದ ಮಾಹಿತಿಯಂತೆ, ಗವಿಸಿದ್ಧೇಶ್ವರ ದೇವಸ್ಥಾನಕ್ಕೆ 10 ಲಕ್ಷ, ನಿಂಗರಾಯ ದೇವಸ್ಥಾನದ ಸಮುದಾಯ ಭವನಕ್ಕೆ 10 ಲಕ್ಷ, ಹನುಮಾನ್ ದೇವಸ್ಥಾನಕ್ಕೆ 15 ಲಕ್ಷ, ಮಲ್ಲಿಕಾರ್ಜುನ ದೇವಸ್ಥಾನಕ್ಕೆ 10 ಲಕ್ಷ, ಮಹಾತ್ಮ ಜ್ಯೋತಿಬಾ ಫುಲೆ ಸಮುದಾಯ ಭವನಕ್ಕೆ 10 ಲಕ್ಷ, ತಾಂಬಾ ಎಲ್‌.ಟಿ. ತಾಂಡಾ ಸೇವಾಲಾಲ್ ಸಮುದಾಯ ಭವನಕ್ಕೆ 20 ಲಕ್ಷ, ಜೆ.ಜಿ.ಎಂ. ಕಾಮಗಾರಿಗಳಿಗೆ 3.71 ಕೋಟಿ, ಕಿತ್ತೂರು ರಾಣಿ ಚೆನ್ನಮ್ಮ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 50 ಲಕ್ಷ, ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ನಿರ್ಮಾಣಕ್ಕೆ 20 ಲಕ್ಷ, ಗಂಗನಳ್ಳಿ ರಸ್ತೆಗೆ 81 ಲಕ್ಷ, ವಿಶ್ವಕರ್ಮ ಸಮಾಜದ ಚಿತ್ತಾಗಾರಕ್ಕೆ 5 ಲಕ್ಷ ಹಾಗೂ ಮಹಿಳಾ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ಅನುದಾನ ಮಂಜೂರಾಗಿದೆ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಅಡೇಪ್ಪ ಬಿಸನಾಳ, ಮಾದೇವ ಪಾಟೀಲ, ಅರ್ಜುನ ಚಟ್ಟರಕಿ, ಯಲ್ಲಗೊಂಡ ಬಿಸನಾಳ, ಭೀಮರಾಯ ಬಿಸನಾಳ, ಸತೀಶ ಅಡವಿ, ಮಲ್ಲು ಬಿಸನಾಳ, ನಂದು ಬಿಸನಾಳ, ಪುಂಡು ಬಿಸನಾಳ, ಅಶೋಕ ಬಿಸನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.