ನವದೆಹಲಿ, ಅ 16: ನಾನಿಂದೂ ದೊಡ್ಡ ಕ್ರಿಕೆಟಿಗನಾಗಲು ಕ್ರಿಕೆಟ್ ದಂತಕತೆ ವಿವಿಯನ್ ರಿಚಡ್ರ್ಸ ಅವರೇ ಸ್ಪೂರ್ತಿ ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಬ್ರಿಯಾನ್ ಲಾರಾ ಹೇಳಿದ್ದಾರೆ.
ಅಂಟಿಗುವಾದಲ್ಲಿ ಸರ್ ವಿವಿಯನ್ ರಿಚಡ್ರ್ಸ ಅವರ ಪುತ್ಥಳಿ ಪಕ್ಕದಲ್ಲಿ ನಿಂತಿರುವ ಫೋಟೊ ಟ್ವಿಟರ್ ನಲ್ಲಿ ಹಾಕಿರುವ ಅವರು," ನನ್ನನ್ನು ನಂಬಿ, ಇವರೊಬ್ಬ ಅತ್ಯುತ್ತಮ ವ್ಯಕ್ತಿ. ಇಂದು ನಾನು ದೊಡ್ಡ ಕ್ರಿಕೆಟಿಗನಾಗಿ ಬೆಳೆಯಲು ಸರ್ ವಿವಿಯನ್ ರಿಚಡ್ರ್ಸ ಅವರೇ ಸ್ಪೂರ್ತಿ" ಎಂಬ ಶೀರ್ಷಿಕೆ ಬರೆದಿದ್ದಾರೆ.
67ರ ಪ್ರಾಯದ ವಿವಿಯನ್ ರಿಚಡ್ರ್ಸ ಅವರನ್ನು ಈಗಲೂ ಜಾಗತಿಕ ಕ್ರಿಕೆಟ್ನಲ್ಲಿ ನೆನಯಲಾಗುತ್ತಿದೆ. 1980ರ ದಶಕದಲ್ಲಿ ಸರ್ ವಿವಿಯನ್ ರಿಚಡ್ರ್ಸ ಅವರನ್ನು ಮೈದಾನದಲ್ಲಿ ನಿಯಂತ್ರಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. 121 ಟೆಸ್ಟ್ ಪಂದ್ಯಗಳಿಂದ 8,540 ರನ್ ಹಾಗೂ 47 ಏಕದಿನ ಪಂದ್ಯಗಳಿಂದ 6,721 ರನ್ ದಾಖಲಿಸಿದ್ದಾರೆ.
ಬ್ರಿಯನ್ ಲಾರಾ 2007ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 22, 358 ರನ್ ಹಾಗೂ 53 ತತಕಗಳನ್ನು ಸಿಡಿಸಿದ್ದಾರೆ. 2004ರಲ್ಲಿ ಇಂಗ್ಲೆಂಡ್ ವಿರುದ್ಧ 400 ರನ್ ಗಳಿಸಿದ್ದರು. ಇದು ವಿಶ್ವ ಟೆಸ್ಟ್ ಕ್ರಿಕೆಟ್ನಲ್ಲೇ ಗಳಿಸಿದ ಗರಿಷ್ಠ ಮೊತ್ತವಾಗಿದೆ.