ಬ್ಯಾಡಗಿ24: ಹಸಿರು ಶಾಲನ್ನು ಹಾಕಿಕೊಂಡು ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಯ ಸಚಿವ ಸಂಪುಟದ ಕಾನೂನು ಸಚಿವ ಮಾಧುಸ್ವಾಮಿ ಅವರು ರೈತ ಮಹಿಳೆಯನ್ನು ನಿಂಧಿಸಿರುವುದು ರೈತ ಸಮುದಾಯಕ್ಕೆ ಅವಮಾನ ತೋರಿದಂತಾಗಿದ್ದು, ತಕ್ಷಣವೇ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಘಟಕದ ಕಾರ್ಯಕರ್ತರು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಸ್ಥಳೀಯ ತಾಲೂಕಾ ಕಚೇರಿಯಲ್ಲಿ ತಹಶೀಲ್ದಾರ ಅವರ ಮೂಲಕ ರಾಜ್ಯ ಸಕರ್ಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ತಾಲೂಕಾ ಅಧ್ಯಕ್ಷ ರುದ್ರನಗೌಡ ಕಾಡನಗೌಡ್ರ, ಕೋಲಾರದ ರೈತ ಮಹಿಳೆ ನಳಿನಿ ಅವರು ಕೆರೆ ಒತ್ತುವರಿಯಾದ ವಿಷಯದ ಕುರಿತು ಸಚಿವರೊಂದಿಗೆ ಚಚರ್ಿಸಲು ಮುಂದಾದಾಗ ಸಚಿವ ಮಾದುಸ್ವಾಮಿಯವರು ನಳಿನಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯವಾಗಿದೆ.
ರೈತರ ಹಿತ ಚಿಂತಕರು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ರೈತ ಮಹಿಳೆಯನ್ನು ನಿಂದಿಸಿ ಅಗೌರವ ತೋರಿರುವ ಮಾದುಸ್ವಾಮಿಯವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ರಾಜ್ಯದಲ್ಲಿ ರೈತರ ಸಮಸ್ಯೆಗಳನ್ನು ನಿವಾರಿಸಲು ರಾಜ್ಯ ಸಕರ್ಾರ ಸಂಪೂರ್ಣ ವಿಫಲವಾಗಿದೆ. ಮೆಕ್ಕೆ ಜೋಳ ಬೆಳೆದ ರೈತರು ತಮ್ಮ ಬೆಳೆಗೆ ಸೂಕ್ತ ಬೆಲೆ ಸಿಗದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ರಾಜ್ಯ ಸಕರ್ಾರವು ಗಮನ ಹರಿಸಿ ರೈತರ ರಕ್ಷಣೆಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಘಟಕದ ಉಪಾಧ್ಯಕ್ಷ ಕಿರಣ ಗಡಿಗೋಳ, ಡಾ. ಕೆ.ವಿ. ದೊಡ್ಡಗೌಡ್ರ, ಮೌನೇಶ ಬಡಿಗೇರ, ಮಲ್ಲೇಶಪ್ಪ ಡಂಬಳ, ಎಸ್.ಬಿ. ಪಾಟೀಲ, ಪ್ರಕಾಶ ಕೋಡಿಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು