ಬೆಳಗಾವಿ: 05 :ಸುತ್ತಮುತ್ತಲಿನ ಪರಿಸರ, ಒತ್ತಡದಿಂದಾಗಿ ಮಕ್ಕಳು ಕೆಲವೊಮ್ಮೆ ಖಿನ್ನತೆಗೆ ಒಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ಪಾಲಕರು, ಶಿಕ್ಷಕರು, ವಸತಿ ನಿಲಯದ ಪ್ರಾಂಶುಪಾಲರು ಹಾಗೂ ನಿಲಯ ಪಾಲಕರು ಮಕ್ಕಳ ಮನಸ್ಥಿತಿಯನ್ನು ಅರಿತುಕೊಂಡು ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವುದರ ಜತೆಗೆ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಜಿಲ್ಲೆಯ ವಸತಿ ಶಾಲೆ/ನಿಲಯಗಳ ಸಮಗ್ರ ಮತ್ತು ಸುಸೂತ್ರ ನಿರ್ವಹಣೆಗಾಗಿ ಪ್ರಾಂಶುಪಾಲರು, ನಿಲಯ ಪಾಲಕರಿಗೆ ಜಿಪಂ ಸಭಾಂಗಣದಲ್ಲಿ ಶನಿವಾರ(ಜ.5) ಏರ್ಪಡಿಸಲಾಗಿದ್ದ ಒಂದು ದಿನದ ಕಾಯರ್ಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಮುದಾಯದಲ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಬಣ್ಣ, ಎತ್ತರ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ತಮ್ಮಲ್ಲೇ ಕೀಳರಿಮೆ ಬೆಳೆಸಿಕೊಂಡು ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ.
ಬಡತನದ ಬೇಗೆಯ ನಡುವೆಯೂ ಕ್ರೀಡೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗೈದ ಮಹನೀಯರ ಬದುಕು ಯುವ ಸಮುದಾಯಕ್ಕೆ ಆದರ್ಶವಾಗಬೇಕು ಎಂದು ಆಶಾ ಐಹೊಳೆ
ಹೇಳಿದರು.
ನಂತರ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಾಮಚಂದ್ರನ್ ಆರ್. ಅವರು, ಪ್ರತಿ ತಾಯಿಯೂ ತನ್ನ ಮಗುವನ್ನು ಗಮನಿಸಿದ ತಕ್ಷಣವೇ ಆ ಮಗುವಿನ ನೋವು-ನಲಿವು ಅರ್ಥ ಮಾಡಿಕೊಳ್ಳುತ್ತಾಳೆ. ಅದೇ ರೀತಿ ವಸತಿನಿಲಯದ ನಿಲಯ ಪಾಲಕರು ಹಾಗೂ ಇತರೆ ಸಿಬ್ಬಂದಿ ಕೂಡ ತಮ್ಮ ವಸತಿ ನಿಲಯದ ಪ್ರತಿ ಮಗುವಿನ ಬಗ್ಗೆ ಅಥರ್ೈಸಿಕೊಳ್ಳಬೇಕು ಎಂದು ಹೇಳಿದರು.
ತಂದೆ-ತಾಯಂದಿರು ನೂರಾರು ಕನಸು ಕಟ್ಟಿಕೊಂಡು ತಮ್ಮ ಮಕ್ಕಳನ್ನು ವಸತಿ ಶಾಲೆಗಳಿಗೆ ಕಳುಹಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಯಾವುದೋ ಮಗು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ತಾಯಿಗೆ ಎಷ್ಟು ಸಂಕಟವಾಗುತ್ತದೆ ಎಂಬುದನ್ನು ಅರಿತುಕೊಂಡು ನಾವು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ವಸತಿ ನಿಲಯದ ಪ್ರಾಂಶುಪಾಲರು ಮತ್ತು ನಿಲಯ ಪಾಲಕರಿಗೆ ಕರೆ ನೀಡಿದರು
ಇವತ್ತಿನ ಕೌಟುಂಬಿಕ ಸಾಮಾಜಿಕ ಬೆಳವಣಿಗೆಯನ್ನು ಕಂಡರೆ ಪ್ರತಿಯೊಂದು ಮಗುವಿನಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವದರ ಜೊತೆಗೆ ಆತ್ಮ ವಿಶ್ವಾಸ ನಾಯಕತ್ವದ ಬಾವನೆಗಳನ್ನು ಬೆಳೆಸಬೇಕು. ಅವರ ಆತ್ಮಸ್ತೈರ್ಯವನ್ನು ಹೆಚ್ಚಿಸುವ ಕಾರ್ಯವನ್ನು ತಂದೆ-ತಾಯಿ, ಶಿಕ್ಷಕರು, ವಸತಿ ನಿಲಯದ ನಿಲಯ ಪಾಲಕರು ಮಾಡಬೇಕು. ಮಕ್ಕಳು ವಸತಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾದ್ದಾರೆಂದರೆ ಅವರಲ್ಲಿ ಕಿಳರಿಮೆ,ಅಸೂಹೆ, ಅಥವಾ ಗಾಡವಾದ ಸಮಸ್ಯೆಯಾಗುತ್ತಿದೆ ಹಾಗಾಗಿ ಅವರ ಅಶಾಬ್ಧಿಕ ಸಂವಹನದ ಕಡೆಗೆ ಹೆಚ್ಚು ಗಮನವಿಡಬೇಕು ಎಂದು ಸಂಪನ್ಮೂಲ ವ್ಯೆಕ್ತಿಗಳಾಗಿ ಸಾಧನಾ ಪೊಟೆ ಅವರು ಮಾತನಾಡಿದರು.
ವಸತಿ ನಿಲಯದಲ್ಲಿ ಆತ್ಮ ಹತ್ಯೆ ಮಾಡಿಕೊಂಡಿರುವ ವಿದ್ಯಾಥರ್ಿಗೆ ಒಂದು ನಿಮಿಷ ಮೌನಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮನೋತಜ್ಞರಾದ ಡಾ. ಭೀಮಸೇನ ಟಕ್ಕಳಕಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿದರ್ೆಶಕರಾದ ಶ್ರೀಮತಿ ಉಮಾ ಸಾಲಿಗೌಡರ, ಅಲ್ಪಸಂಖ್ಯಾತರ ಇಲಾಖೆ ಉಪನಿದರ್ೆಶಕರಾದ ಪುಂಡಲೀಕ ಅನವಾಲ, ಡಿ.ಎಂ.ಹೆಚ್.ಓ.ಪಿ ಚಾಂದನಿ ದೇವಡಿ, ಡಿ.ಎಂ.ಹೆಚ್.ಪಿ ಮನೋತಜ್ಞ ಡಾ|| ಪರಮೇಶ್ವರ, ಡಾ|| ವೈಜುಷಾ ಆಡಕೆ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರಾಮಗೌಡ ಕುನ್ನೊಳ್ಳಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಸಧಾಶಿವ ಬಡಿಗೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.