ಲೋಕದರ್ಶನ ವರದಿ
ಬೆಳಗಾವಿ : ನಗರದಲ್ಲಿನ ರಸ್ತೆಗಳಲ್ಲಿ ತಗ್ಗು ಗುಂಡಿಗಳಿಂದ ಆಗುವ ಅನಾಹುತಗಳಿಂದ ಸಾರ್ವಜನಿಕರು ಮಹಾನಗರ ಪಾಲಿಕೆಯನ್ನು ದೋಸಿಸುವಂತೆ ಆಗಿದ್ದು, ಈ ಹಿನ್ನೆಲೆಯಲ್ಲಿ ಯಾವ ರಸ್ತೆ ಯಾವ ಇಲಾಖೆಗೆ ಬರುತ್ತದೆ ಎಂಬುವದರ ಬಗ್ಗೆ ಸ್ಪಷ್ಟತೆಯ ಫಲಕಗಳನ್ನು ಅಳವಡಿಸಬೇಕೆಂದು ಮಹಾನಗರಪಾಲಿಕೆ ಮಹಾಪೌರ ಬಸಪ್ಪಾ ಚಿಕ್ಕಲದಿನ್ನಿ ಅಧಿಕಾರಿಗಳಿಗೆ ಇಂದಿಲ್ಲಿ ಸೂಚಿಸಿದರು.
ಪಾಲಿಕೆ ಸಭಾಂಗಣದಲ್ಲಿ ಶನಿವಾರ ದಿನದಂದು ಮಳೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಸರಿದೊಗಿಸುವ ಸಲುವಾಗಿ ಕರೆಯಲಾದ ಸಭೆಯಲ್ಲಿ ಅಧಿಕಾರಿಗಳಿಗೆ ಈ ವಿವರಣೆ ನೀಡಿದರು. ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಹದಗೆಟ್ಟಿವೆ ಎಲ್ಲಂದರಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಲೋಕೋಪಯೋಗಿ, ಕ್ಯಾಟೋನ್ಮೇಂಟ್ ಇಲಾಖೆಯವರಿಗೆ ಬರುವ ರಸ್ತೆಗಳಲ್ಲಿ ಏನೇ ಅನಾಹುತವಾದರು ಅದಕ್ಕೆ ಸಾರ್ವಜನಿಕರು ಪಾಲಿಕೆಯನ್ಗನೇ ದೋಷಿಸುತ್ತಿದ್ದಾರೆ.
ಎಲ್ಲ ಇಲಾಖೆಗಳ ರಸ್ತೆಯ ತಗ್ಗು ಗುಂಡಿಗಳಿಂದ ಆಗುವ ಅನಾಹುತಗಳಿಗೆ ಮಹಾನಗರ ಪಾಲಿಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಆದ್ದರಿಂದ ಯಾವ ಇಲಾಖೆಗೆ ಯಾವ ರಸ್ತೆಗಳು ಬರಲಿವೆ ಎಲ್ಲಿಂದ ಪ್ರಾರಂಭ ಎಲ್ಲಿಯವರೆ ಪೂರ್ಣ ಗೊಳ್ಳಲಿದೆ ಎಂಬುವುದನ್ನು ನಾಮಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಇದರಿಂದ ಸಮಜಾಯಿಸಿದಂತಾಗುತ್ತದೆ ಎಂದು ಹೇಳಿದರು.
ನಗರದ ತುಂಬೆಲ್ಲಾ ಬಿದ್ದಿರುವ ಗುಂಡಿಗಳನ್ನು ತುಂಬಲು ವಿಶೇಷ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು. ಇಂದಿನ ಸಭೆಯಲ್ಲಿ ಉಪಮೇಯರ ಮದುಶ್ರೀ ಪುಜಾರಿ, ಪಾಲಿಕೆ ಆಯುಕ್ತ ಶಶೀಧರ ಕುರೇರ, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು, ಹೆಸ್ಕಾಂ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.