ಕೇರಳದಲ್ಲಿ ಸ್ಯಾನಿಟೈಸರ್ ಸೇವಿಸಿ ವಿಚಾರಣಾಧೀನ ಕೈದಿ ಸಾವು

ಪಾಲಕ್ಕಾಡ್, ಮಾರ್ಚ್ 26, ಇಲ್ಲಿನ ಜಿಲ್ಲಾ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ ಸ್ಯಾನಿಟೈಸರ್ ಸೇವಿಸಿ ಶುಕ್ರವಾರ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಮೂಲಗಳಂತೆ, ಮೃತ ರಾಮನ್‌ಕುಟ್ಟಿಯನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಆತ ಸ್ಯಾನಿಟೈಸರ್ ಸೇವಿಸಿ ಕುಸಿದು ಬಿದಿದ್ದ. ತಕ್ಷಣವೇ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸ್ಯಾನಿಟೈಸರ್ ಗೆ ಹೆಚ್ಚಿನ ಬೇಡಿಕೆಯ ಹಿನ್ನೆಲೆಯಲ್ಲಿ ಕೈದಿಗಳು ಕಾರಾಗೃಹದಲ್ಲಿ ಸ್ಯಾನಿಟೈಸರ್ ಉತ್ಪಾದನೆಯಲ್ಲಿ ತೊಡಗಿದ್ದರು.ಈ ವೇಳೆ, ಕಳೆದ ಫೆಬ್ರವರಿಯಿಂದ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದ ರಾಮನ್‌ಕುಟ್ಟಿ, ಸ್ಯಾನಿಟೈಸರ್‍ಗೆ ಬಳಸುವ ಕಚ್ಚಾ ವಸ್ತು ಸೇವಿಸಿದ್ದಾನೆ. ಕಚ್ಚಾ ವಸ್ತು ಸ್ಪಿರಿಟ್‍ ಒಳಗೊಂಡಿತ್ತದೆ. ಕಚ್ಚಾವಸ್ತುವನ್ನು ಸೇವಿಸಿದ ನಂತರ ಕೈದಿ ಅಸ್ವಸ್ತಗೊಂಡು ಕುಸಿದುಬಿದ್ದಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮಾರಕ ಕೊರೊನವೈರಸ್‍ ಸೋಂಕು ಭಾರತದಲ್ಲೂ ವ್ಯಾಪಿಸುತ್ತಿದ್ದು, ಹೆಚ್ಚು ಪ್ರಕರಣಗಳಲ್ಲಿ ಮಹಾರಾಷ್ಟ್ರ ನಂತರ ಕೇರಳ ನಿಂತಿದೆ. ದೇಶದಲ್ಲಿ ಮೊದಲ ಕೊರೊನವೈರಸ್ ಪ್ರಕರಣ ಕೇರಳದಲ್ಲಿ ದೃಢಪಟ್ಟಿತ್ತು. ಮಾರಕ ಸೋಂಕು ಹರಡುವಿಕೆ ತಡೆಗೆ ಕೇರಳ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ.