ಲೋಕದರ್ಶನವರದಿ
ಗುಳೇದಗುಡ್ಡ14: ಮನೆಯಲ್ಲಿ ನಿತ್ಯ ಉತ್ಪನ್ನವಾಗುವ ಹಸಿಕಸವನ್ನು ರಸ್ತೆಗೆ, ಗಟಾರಕ್ಕೆ ಬೀಸಾಕದೇ ಅದನ್ನು ಪುನರ್ ಸಾವಯವ ಗೊಬ್ಬರವನ್ನಾಗಿ ತಯಾರಿಸಿ ಮನೆಯ ಹಿಂದೆ ಹಿತ್ತಲವಿರುವ ಅಥವಾ ಗಿಡಮರಗಳನ್ನು ನೆಡಲು ಮನೆಯ ಮುಂದೆ ಸ್ಥಳವಿರುವ ಮನೆಗಳಿಗೆ ಇದರ ವಿನೂತನ ಪ್ರಯೋಗ ಇಂದಿನಿಂದ ಆರಂಭವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ಹೇಳುತ್ತಾರೆ.
ಗೊಬ್ಬರ ತಯರಿಸುವ ಈ ವಿಧಾನ ಅತೀ ಸರಳವಾಗಿದ್ದೂ, 3 ಅಡಿಯಷ್ಷು ಎತ್ತರದ ಮತ್ತು ಸುಮಾರು 6 ಇಂಚು ಅಗಲಿನ ಪ್ಲಾಸ್ಟಿಕ್ ಪೈಪ್ ಪುರಸಭೆಯವರೇ ವಿತರಿಸುತ್ತಾರೆ. ಅದರ 1 ಅಡಿ ರಂದ್ರವುಳ್ಳ ಪೈಪಿನ ಭಾಗ ಮಣ್ಣಿನಲ್ಲಿ ಹೂಳಬೇಕು. ಹೊರಭಾಗದಲ್ಲಿ ಉಳಿದ 2 ಅಡಿ ಭಾಗದಲ್ಲಿ ಮನೆಯಲ್ಲಿರುವ ಹಸಿತ್ಯಾಜ್ಯ ಕಸವನ್ನು ದಿನವೂ ಹಾಕುತ್ತಿರಬೇಕು.
ಪುರಸಭೆಯವರು ಆ ಪೈಪಿನಲ್ಲಿ ಎರೆಹುಳುಗಳನ್ನು ಬಿಡುತ್ತಾರೆ. ಎರೆಹುಳುಗಳು ತ್ಯಾಜ್ಯವನ್ನು ಗೊಬ್ಬರವಾಗಿ ಪರಿವತರ್ಿಸುವಲ್ಲಿ ಸಹಾಯಮಾಡುತ್ತವೆ. ಅಲ್ಲದೇ ಅವು ರಂಧ್ರದ ಮೂಲಕ ಹೊರ ಬಂದು ಸಾವಯವ ಗೊಬ್ಬರ ತಯಾರಿಸುತ್ತವೆ.
ಮಂಗಳವಾರ ಆರಂಭಿಸಿದ ಈ ವಿನೂತನ ಪ್ರಯೋಗದಿಂದ ಪುರಸಭೆಗೆ ಕಸವಿಲೇವಾರಿಯ ಭಾರ ತಪ್ಪುತ್ತದೆ. ರಸ್ತೆ, ಅಕ್ಕಪಕ್ಕದ ಪರಿಸರ ಶುದ್ಧವಾಗಿರುತ್ತದೆ. ಕಸದಿಂದ ತಯಾರಿಸಿದ ಗೊಬ್ಬರದಿಂದ ಪ್ರತಿ ಮನೆಯ ಗಿಡಮರಗಳು ಬೆಳೆಯುತ್ತವೆ. ಇದನ್ನು ಜಾಗವಿರುವ ಪ್ರತಿಮನೆಯವರು ಅನುಸರಿಸಿ ಪುರಸಭೆಯ ಈ ಪೈಪ್ ಕಾಂಪೊಸ್ಟಿಂಗ್ ಯೋಜನೆಗೆ ಸಹಕರಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ರವೀಂದ್ರನಾಥ ಅಂಗಡಿ ವಿನಂತಿಸಿಕೊಂಡರು.
ಮಂಗಳವಾರ ಒಂದೇ ದಿನದಲ್ಲಿ ಸುಮಾರು 40 ಕುಟುಂಬಗಳ ಜಾಗೆಗಳಲ್ಲಿ ಪೈಪ್ಗಳನ್ನು ಅಳವಡಿಸಿ ಕುಟುಂಬದ ಸದಸ್ಯರಿಗೆ ಮಾಹಿತಿಯನ್ನು ಆರೋಗ್ಯ ಶಾಖೆಯ ರಮೇಶ ಪದಕಿ ಹಾಗೂ ಎಸ್.ಎಂ. ಗಣಾಚಾರಿ ಮನವರಿಕೆ ಆಗುವಂತೆ ವಿವರಿಸಿದರು.
ಯೋಜನೆ ಯಶಸ್ವಿಗೆ ತೊಡಕುಗಳು: ಈ ಯೋಜನೆ ಯಶಸ್ವಯಾಗುವಲ್ಲಿ ಸಾಕಷ್ಟು ತೋಡಕುಗಳಿವೆ ಎಂದು ಇಲ್ಲಿನ ರಿಸರವಾದಿಗಳು ಹೇಳುತ್ತಾರೆ. ಯಾಕೆಂದರೆ ಈ ಯೋಜನೆ ಕೇವಲ ಸ್ವಂತ ಮನೆ, ಸ್ವಂತ ಜಾಗೆ ಇರುವ ಶ್ರೀಮಂತವರ್ಗದವರಿಗೆ ಮಾತ್ರ ಸೀಮಿತವಾಗಿದೆ. ಅಲ್ಲದೇ ಯೋಜನೆಗೆ ಕೇವಲ 3 ಅಡಿ ಪೈಪ್ ಬಳಸುತ್ತಿರುವುದರಿಂದ ನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಹಸಿಕಸ ಉತ್ಪನ್ನವಾಗುವುದರಿಂದ ಮತ್ತೇ ಮನೆಯ ಹೆಚ್ಚಾದ ಕಸ ಮನೆಯಿಂದ ಹೊರಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಯೋಜನೆ ಫಲಪ್ರಧವಾಗುವಲ್ಲಿ ತೋಡಕುಗಳಿವೆ ಎಂಬ ಮಾತು ಕೇಳಿ ಬರುತ್ತಿದೆ.