ವಿಜಯಪುರ 07: ವಿಜಯಪುರ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ ಹಾಗೂ ಇಂಜೀನೀಯರ ತಾಂತ್ರಿಕ ಮಹಾವಿದ್ಯಾಲಯಗಳನ್ನು ಈ ಬಜೆಟ್‌ನಲ್ಲಿ ಘೋಷಣೆ ಮಾಡದಿರುವುದು ಈ ವಿಜಯಪುರ ಜಿಲ್ಲೆಯ ಜನತೆಗೆ ಅನ್ಯಾಯ ಮಾಡಿದಂತಾಗಿದೆ. ವಿಜಯಪುರ ಜಿಲ್ಲೆಗೆ ವಿಶೇಷ ಒತ್ತು ನೀಡದಿರುವುದು ದುರಂತ. ವಿಮಾನ ನಿಲ್ದಾಣ ಕಾಮರ್ಗಾರಿ ಪೂರ್ಣಗೊಂಡ ಅಚಿತಿಮ ಹಂತದಲ್ಲಿದ್ದು, ಇನ್ನೇನು ವಿಮಾನ ಹಾರಾಟ ಪ್ರಾರಂಭಗೊಳ್ಳುತ್ತದೆ ಎಂದು ಹೇಳುತ್ತಲೇ ಬಂದರೂ, ಇನ್ನು ವಿಮಾನ ಹಾರಾಟ ಆರಂಭಗೊಂಡಿಲ್ಲ. ಸೈಕ್ಲಿಂಗ್ ವೆಲೋಡ್ರೋಮ್ ಕಾಮಗಾರಿ ಕೂಡ ಪ್ರಗತಿಯಲ್ಲಿದ್ದು ಈ ಕಾಮಗಾರಿ ಪರಿಸ್ಥಿತಿ ವಿಮಾನ ನಿಲ್ದಾಣದಂತಾಗಿದೆ ವಿಜಯಪುರ ಜಿಲ್ಲೆಯ ಜನರ ಮೂಗಿಗೆ ತುಪ್ಪ ಸವರುವ ಬಜೆಟ್ ಇದಾಗಿದೆ.
ಶ್ರೀಶೈಲ ಮುಳಜಿ ನ್ಯಾಯವಾದಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ