ನವದೆಹಲಿ, ಜ.9, ಶ್ರೀಲಂಕಾ ತಂಡದ ವೇಗಿ ಇಸುರು ಉದಾನ್ ಗಾಯದಿಂದ ಬಳಲುತ್ತಿದ್ದು, ಶುಕ್ರವಾರ ಭಾರತ ವಿರುದ್ಧ ನಡೆಯಲಿರುವ ಮೂರನೇ ಟಿ-20 ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇಂದೋರ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಏಳು ವಿಕೆಟ್ ಜಯ ಸಾಧಿಸಿ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಲಂಕಾ ನೀಡಿದ್ದ 143 ಗುರಿಯನ್ನು ನಿಯಂತ್ರಿಸುವಲ್ಲಿ ಎಡವಿತ್ತು. ಈ ಪಂದ್ಯದ ವೇಳೆ ಉದಾನ್ ಅವರು ಬೌಲಿಂಗ್ ಮಾಡಿರಲಿಲ್ಲ.
ಎರಡನೇ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್ ನಲ್ಲಿ ನೋವಿನಿಂದ ಬಳಲುತ್ತಿದ್ದರು. ಸದ್ಯ ಅವರ ಗಾಯದ ಬಗ್ಗೆ ಮಾಹಿತಿ ಇಲ್ಲ. ವಿಂಡೀಸ್ ಸರಣಿಯ ವೇಳೆಗೆ ಅವರು ತಂಡಕ್ಕೆ ಮರಳುವ ಸಾಧ್ಯತೆ ಇದೆ ಎಂದು ಶ್ರೀಲಂಕಾ ತಂಡದ ಕೋಚ್ ಮಿಕ್ಕಿ ಆರ್ಥರ್ ತಿಳಿಸಿದ್ದಾರೆ. “ಮುಂದಿನ ದಿನಗಳಲ್ಲಿ ಇನ್ನು ಸಾಕಷ್ಟು ಕ್ರಿಕೆಟ್ ಆಡುವುದಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇನೆ” ಎಂದಿದ್ದಾರೆ. “ಉದಾನ ತಂಡದ ಪ್ರಮುಖ ಬೌಲರ್ ಗಳಲ್ಲಿ ಒಬ್ಬರು. ತಂಡ ಬೌಲಿಂಗ್ ಮಾಡುವುದಕ್ಕೂ ಮುನ್ನ ಅವರು ಗಾಯಕ್ಕೆ ತುತ್ತಾದರು. ಯುವ ಆಟಗಾರರಿಗೆ ಅವಕಾಶ ಸಿಗಬೇಕು ಎಂಬುದೇ ನಮ್ಮ ಆಶಯ” ಎಂದು ಮಲಿಂಗ ತಿಳಿಸಿದ್ದಾರೆ.