ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟಕ್ಕೆ ಆರಂಭಿಕ ಮುನ್ನಡೆ

ಕೊಚ್ಚಿ, ಅ. 24:      ಕೇರಳದ 5 ವಿಧಾನಸಭೆ ಕ್ಷೇತ್ರಗಳಿಗೆ ಕಳೆದ  21 ರಂದು ನಡೆದ ಉಪ ಚುನಾವಣೆಯ ಮತಎಣಿಕೆ ಆರಂಭವಾಗಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 5 ಕ್ಷೇತ್ರಗಳ ಪೈಕಿ 4ರಲ್ಲಿ ಆರಂಭಿಕ ಮುನ್ನಡೆ ಸಾಧಿಸಿ ಗೆಲುವಿನ ಸನಿಹಕ್ಕೆ ನಡೆದರೆ, ಆಡಳಿತರೂಢ ಎಲ್ಡಿಎಫ್ ಮೈತ್ರಿಕೂಟ ಒಂದು ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇನ್ನೂ ಕೇರಳದಲ್ಲಿ ಖಾತೆ ತೆರೆಯುವ ಮಹತ್ವಾಕಾಂಕ್ಷೆಯಲ್ಲಿದ್ದ ಬಿಜೆಪಿ ಮಾತ್ರ ಮತ್ತೊಮ್ಮೆ ನಿರಾಸೆ ಅನುಭವಿಸುವಂತಾಗಿದೆ. 

ಕೇರಳದ ಮಂಜೇಶ್ವರ, ಎನರ್ಾಕುಲಂ, ಆರೂರ್, ಕೋನ್ನಿ ಮತ್ತು ವಟ್ಟಿಯಾರ್ಕ್ವು ಎಂಬ 5 ಕ್ಷೇತ್ರಗಳಿಗೆ ಕಳೆದ ಸೋಮವಾರ ಉಪ ಚುನಾವಣೆ ನಡೆದಿತ್ತು. ಮಂಜೇಶ್ವರ ಕ್ಷೇತ್ರದ ಶಾಸಕ ಮೃತಪಟ್ಟಿದ್ದ ಕಾರಣ ಈ ಕ್ಷೇತ್ರ ತೆರವಾಗಿದ್ದರೆ, ಉಳಿದ ನಾಲ್ಕು ಕ್ಷೇತ್ರಗಳ ಶಾಸಕರು ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಕಾರಣ ತೆರವಾಗಿತ್ತು. ಸೋಮವಾರ ಉಪ ಚುನಾವಣೆ ನಡೆದಿತ್ತು. 

ಈ ಐದು ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಎರಡು ವರ್ಷಗಳ ಬಳಿಕ  ನಡೆಯಲಿರುವ  ಮುಂದಿನ ವಿಧಾನಸಭಾ ಚುನಾವಣೆ ಮೇಲೆ  ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ.