ಅನರ್ಹ ಕಾಂಗ್ರೆಸ್, ಜೆಡಿಎಸ್ ಶಾಸಕರು ಯಡಿಯೂರಪ್ಪ ಸಂಪುಟ ಸೇರಬೇಕು; ವಿ ಶ್ರೀನಿವಾಸ ಪ್ರಸಾದ್

ಮೈಸೂರು, ಆಗಸ್ಟ್ 23:  ಕಾಂಗ್ರೆಸ್,  ಜೆಡಿಎಸ್ ಪಕ್ಷಗಳ ಆನರ್ಹ ಶಾಸಕರನ್ನು   ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟದಲ್ಲಿ  ಸೇರ್ಪಡೆ ಮಾಡಿಕೊಳ್ಳಬೇಕು ಎಂದು  ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಲೋಕಸಭಾ ಸದಸ್ಯ ವಿ.ಶ್ರೀನಿವಾಸ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಶಕ್ರವಾರ ಸುದ್ಧಿಗಾರರೊಂದಿಗೆ ಮಾತನಾಡಿದ  ಅವರು,  ಈ ಶಾಸಕರು  ಸ್ವ ಇಚ್ಛೆಯಿಂದ  ತಮ್ಮ ಪಕ್ಷಗಳಿಂದ  ಹೊರಬಂದಿದ್ದು, ಈಗ  ಬಿಜೆಪಿಯ ಭಾಗವಾಗಲಿದ್ದಾರೆ.  ಪಕ್ಷದ ಚಿಹ್ನೆಯಡಿ ಉಪ ಚುನಾವಣೆ ಎದುರಿಸಬೇಕಾಗಿದೆ.  ಅವರನ್ನು  ಮೂಲ ಬಿಜೆಪಿ  ಅಥವಾ ವಲಸಿಗ ಎಂದು  ಯಾವುದೇ ತಾರತಮ್ಯ ಮಾಡಬಾರದು ಎಂದು ಸಲಹೆ ನೀಡಿದರು. 

ಅನರ್ಹ ಗೊಂಡಿರುವ  ಶಾಸಕರ ಸಂಬಂಧ    ಸುಪ್ರೀಂ ಕೋಟರ್್  ತೀಪು ಪ್ರಕಟಗೊಂಡ ಕೆಲವೇ ದಿನಗಳಲ್ಲಿ  ರಾಜ್ಯ ಬಿಜೆಪಿ  ಅವರಿಗೆ ಸೂಕ್ತ ಸ್ಥಾನ ಮಾನ ಕಲ್ಪಿಸಲಿದೆ. ಈಗ ಅರ್ಧ ಸಂಪುಟ  ರಚನೆಯಾಗಿದೆ.ಮುಂದಿನ ಹಂತದಲ್ಲಿ ಇನ್ನುಳಿದ ಸಚಿವ ಸ್ಥಾನಗಳಿಗೆ ನೇಮಕ ನಡೆಯಲಿದೆ.ಆ ಸಂದರ್ಭದಲ್ಲಿ ಅನರ್ಹ ಶಾಸಕರನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು. 

ರಾಜ್ಯ ಸಚಿವ ಸಂಪುಟದಲ್ಲಿ  ಸಾಮಾಜಿಕ ನ್ಯಾಯದ ಅಸಮತೋಲನವಿದೆ ಎಂಬ ಆರೋಪಗಳ ಬಗ್ಗೆ  ಅವರು ವಿಷಾದ ವ್ಯಕ್ತಪಡಿಸಿದ ಅವರು,  ಇದು ್ತೂಹ ಆದರೆ, ಮುಂದಿನ ಸಂಪುಟ ವಿಸ್ತರಣೆಯಲ್ಲಿ ಸರಿಪಡಿಸಲಿದ್ದಾರೆ. ಮೈಸೂರಿಗೂ ಯಾವುದೇ ಪ್ರಾಧಿನಿತ್ಯ ದೊರೆತಿಲ್ಲ ಎಂದರು. 

ಸಂಪುಟ ರಚನೆ ಸಂದರ್ಭದಲ್ಲಿ ಭಿನ್ನಮತ ಸಹಜ.ಯಡಿಯೂರಪ್ಪ ಅವರು ಸಂದಿಗ್ಧ ಪರಿಸ್ಥಿತಿಯಲ್ಲಿ ಇಲ್ಲಿದ್ದಾರೆ.  ಕಾನೂನು ಪ್ರಕಾರ ಸಂಪುಟ ರಚನೆಯಲ್ಲಿ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ಇದೆ. ಆದರೆ,  ಯಡಿಯೂರಪ್ಪ ಈಗಿನ ಪರಿಸ್ಥಿತಿಯಲ್ಲಿ  ವರಿಷ್ಠರ  ಜೊತೆ  ಚಚರ್ಿಸಿಯೇ ತೀಮರ್ಾನ ತೆಗೆದುಕೊಳ್ಳಬೇಕಿದೆಎಂದು ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ  ಬಂಧನ  ರಾಜಕೀಯ ಪ್ರೇರಿತವಲ್ಲ. ಅವರನ್ನು ಕಾನೂನಿನಂತೆ ಬಂಧಿಸಿ, ತನಿಖೆಗಾಗಿ  ಸಿಬಿಐಗೆ ಹಸ್ತಾಂತರಿಸಲಾಗಿದೆ.  ದೇಶದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಿಲ್ಲ ಪ್ರತಿಯೊಬ್ಬರೂ ಇದನ್ನು ಆರ್ಥಮಾಡಿಕೊಳ್ಳಬೇಕು ಎಂದರು.