ನವದೆಹಲಿ, ಫೆ 10, ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆದಿದ್ದ 19 ವಯೋಮಿತಿ ವಿಶ್ವಕಪ್ ಟೂರ್ನಿಯು ಬಾಂಗ್ಲಾದೇಶ ಚಾಂಪಿಯನ್ ಆಗುವ ಮೂಲಕ ಭಾನುವಾರ ಸಮಾಪ್ತಿಯಾಯಿತು. ಆದರೆ, ಪಂದ್ಯದ ಬಳಿಕ ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ಆಟಗಾರರು ದೈಹಿಕ ವಾಗ್ವಾದಕ್ಕಿಳಿದ ಘಟನೆ ನಡೆಯಿತು. ಪಂದ್ಯದ ಆರಂಭದಿಂದಲೇ ಬಾಂಗ್ಲಾದೇಶ ತಂಡದ ಆಟಗಾರರು ಭಾರತದ ಬ್ಯಾಟ್ಸ್‌ಮನ್‌ಗಳನ್ನು ಹೋಗು ಎಂದು ಆಕ್ರಮಣಶೀಲತೆಯಿಂದ ಕರೆದಿದ್ದು, ಎರಡೂ ತಂಡಗಳ ನಡುವೆ ಸಂಘರ್ಷ ಮನೋಭಾವವನ್ನು ಹುಟ್ಟು ಹಾಕಿತ್ತು. ಪಂದ್ಯವೀಡಿ ಉಭಯ ತಂಡಗಳ ಆಟಗಾರರು ಹಲ್ಲು ಮಸೆಯುತ್ತಾ ಕಣದಲ್ಲಿ ಕಂಡು ಬಂದಿದ್ದರು.
ಡಿಎಲ್ಎಸ್ ಮಾದರಿ ಅನ್ವಯ 170 ರನ್ ಗುರಿ ಹಿಂಬಾಲಿಸಿದ್ದ ಬಾಂಗ್ಲಾದೇಶ ತಂಡದ ಪರ ಕೊನೆಯಲ್ಲಿ ರಕಿಬುಲ್ ಹಸನ್ ಸಿಂಗಲ್ ರನ್ ತೆಗೆಯುತ್ತಿದ್ದಂತೆ ಪೆವಿಲಿಯನ್‌ನಿಂದ ಬಾಂಗ್ಲಾ ಉತರೆ ಆಟಗಾರರ ಪಿಚ್ ಸಮೀಪ ಶರವೇಗದಲ್ಲಿ ದಾವಿಸಿ ಐತಿಹಾಸಿಕ ಜಯವನ್ನು ಸಂಭ್ರಮಿಸಿದರು. ಈ ವೇಳೆ ಬಾಂಗ್ಲಾದೇಶದ ಕಾಯ್ದಿರಿಸಿದ ಆಟಗಾರರೊಬ್ಬರು ಭಾರತೀಯ ಆಟಗಾರರಿಗೆ ವಿಷಯವೊಂದು ಹೇಳಿದರು.ಇದನ್ನು ಭಾರತೀಯ ಆಟಗಾರರು ಹಗುರವಾಗಿ ಪರಿಗಣಿಸಿಲ್ಲ. ಇದು ಪರಸ್ಪರ ಆಟಗರಾರನನ್ನು ತಳ್ಳಲು ಎಡೆ ಮಾಡಿಕೊಟ್ಟಿತು. ಭಾವನೆಗಳನ್ನು ತಡೆಯಲಾಗದ ಉಭಯ ತಂಡಗಳ ಆಟಗಾರರು ಪರಸ್ಪರ ಕೈ ಮಿಲಾಯಿಸಲು ಮುಂದಾಗಿದ್ದರು. ಈ ವೇಳೆ ತೀರ್ಪುಗಾರರು ಪರಿಸ್ಥಿತಿ ನಿಯಂತ್ರಿಸಿದರು. ಪಂದ್ಯ ವಿಶ್ಲೇಷಣೆಯಲ್ಲಿ ತೊಡಗಿದ್ದ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಜೆ.ಪಿ.ಡುಮಿನಿ ಬಾಂಗ್ಲಾದೇಶ ತಂಡದ ಐತಿಹಾಸಿಕ ಜಯದ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಚಾಂಪಿಯನ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 178 ರನ್ ಗುರಿಯನ್ನು ಬಾಂಗ್ಲಾದೇಶಕ್ಕೆ ನೀಡಿತ್ತು. ಇದರ ನಡುವೆ ಮಳೆಯಾಗಿದ್ದರಿಂದ ಡಿಎಲ್‌ಎಸ್ ನಿಯಮದ ಪ್ರಕಾರ ಕೊನೆಯ 30 ಎಸೆತಗಳಲ್ಲಿ ಬಾಂಗ್ಲಾಗೆ 7 ರನ್ ಗುರಿ ನೀಡಲಾಗಿತ್ತು. ಅಂತಿಮವಾಗಿ ಬಾಂಗ್ಲಾ 3 ವಿಕೆಟ್‌ಗಳ ಜಯ ಸಾಧಿಸಿತು. ಒಂದು ಹಂತದಲ್ಲಿ ಬಾಂಗ್ಲಾದೇಶ 102 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬಾಂಗ್ಲಾ ನಾಯಕ ಅಕ್ಬರ್ ಅಲಿ ಗಮನಾರ್ಹ ಪ್ರದರ್ಶನ ತೋರಿ 43 ರನ್ ಗಳಿಸಿ ತಂಡಕ್ಕೆ ಐತಿಹಾಸಿಕ ಜಯ ತಂದಿತ್ತರು. ಇದಕ್ಕೂ ಮುನ್ನ ಭಾರತದ ಪರ ಏಕಾಂಗಿ ಹೋರಾಟ ನಡೆಸಿದ್ದ ಯಶಸ್ವಿ ಜೈಸ್ವಾಲ್ 88 ರನ್ ಗಳಿಸಿದ್ದರು. ಇನ್ನುಳಿದವರು ವಿಫಲರಾಗಿದ್ದರು. ಇದರ ಪರಿಣಾಮ ಭಾರತ ಕೇವಲ 21 ರನ್ ಅಂತರದಲ್ಲಿ ಏಳು ವಿಕೆಟ್ ಕಳೆದುಕೊಂಡಿತ್ತು. ಅಂತಿಮವಾಗಿ ಭಾರತ 177ಕ್ಕೆ ಆಲೌಟ್ ಆಗಿತ್ತು.