ನವದೆಹಲಿ, ಅ. 31: ಭಾರತ ಹಾಗೂ ಬಾಂಗ್ಲಾದೇಶ ನಡುವೆ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ
ಮೊದಲ ಟಿ -20 ಪಂದ್ಯ ನಿಗದಿತ ವೇಳೆಗೆ ನಡೆಯಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)
ಸೌರವ್ ಗಂಗೂಲಿ ಗುರುವಾರ ತಿಳಿಸಿದ್ದಾರೆ.
ದೆಹಲಿಯ ದೀಪಾವಳಿಯ ನಂತರ, ಮಾಲಿನ್ಯವು ಅಪಾಯಕಾರಿ ಮಟ್ಟ ತಲುಪಿದೆ, ಇದರಿಂದಾಗಿ ಜನರು ಉಸಿರಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಅದೇ ಸಮಯದಲ್ಲಿ ದೆಹಲಿ ಜನ ಸಹ ಕಣ್ಣಿನ ತೊಂದರೆ ಬಗ್ಗೆ ದೂರು ನೀಡುತ್ತಿದ್ದಾರೆ, ಈ ಕಾರಣದಿಂದಾಗಿ ವೈದ್ಯರು ಸಹ ಜನರು ಮುನ್ನೆಚ್ಚರಿಕೆ ವಹಿಸುವಂತೆ ಕೇಳಿಕೊಂಡಿದ್ದಾರೆ.
"ಖಂಡಿತವಾಗಿಯೂ ಮೊದಲ ಟಿ -20 ವೇಳಾಪಟ್ಟಿಯಂತೆ ಇರುತ್ತದೆ" ಎಂದು ಗಂಗೂಲಿ ಹೇಳಿದ್ದಾರೆ. ಕಳೆದ ವರ್ಷ, ಇದೇ ಋತುವಿನಲ್ಲಿ ದೆಹಲಿಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯವು ಶ್ರೀಲಂಕಾ ತಂಡದ ಆಟಗಾರರು ಮೈದಾನದಲ್ಲಿದ್ದಾಗ ಮಾಲಿನ್ಯದಿಂದಾಗಿ ಸುದ್ದಿಯಲ್ಲಿತ್ತು. ಅಲ್ಲದೆ ಪ್ರವಾಸಿ ತಂಡದ ಆಟಗಾರರು ಮಾಸ್ಕ್ ಧರಿಸಿ ಅಂಗಳಕ್ಕೆ ಇಳಿದಿದ್ದರು. ಈ ವರ್ಷವೂ ಅಷ್ಟೇ ಹೊಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಪಂದ್ಯವನ್ನು ಬೇರೆ ಸ್ಥಳಕ್ಕೆ ವರ್ಗಾಯಿಸುವಂತೆ ಮನವಿ ಮಾಡಿಕೊಂಡಿದ್ದರು.