ಇಂದಿರಾ ಗಾಂಧಿ 103ನೇ ಜನ್ಮದಿನ ; ಶಕ್ತಿ ಸ್ಥಳದಲ್ಲಿ ಪ್ರಣಬ್ , ಮನಮೋಹನ್ ಸಿಂಗ್ , ಸೋನಿಯಾ ಗಾಂಧಿ ಪುಷ್ಪನಮನ

ನವದೆಹಲಿ, ನ 19 :   ದೇಶದ ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 102ನೇ ಜನ್ಮದಿನೋತ್ಸವವಾದ ಇಂದು  ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ  ಡಾ. ಮನಮೋಹನ್ ಸಿಂಗ್  ಹಾಗೂ ಕಾಂಗ್ರೆಸ್  ಅಧ್ಯಕ್ಷೆ  ಸೋನಿಯಾ ಗಾಂಧಿ,   ಇಂದಿರಾ ಗಾಂಧಿ ಸಮಾಧಿ   "ಶಕ್ತಿ ಸ್ಥಳ" ಕ್ಕೆ  ತೆರಳಿ   ಪುಷ್ಪನಮನ ಸಲ್ಲಿಸಿದರು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಕಾಂಗ್ರೆಸ್  ಸಂಸದರು,  ಬಾರಿ ಸಂಖ್ಯೆಯ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು  ಸಹ ಶಕ್ತಿ ಸ್ಥಳಕ್ಕೆ  ತೆರಳಿ   ದೇಶದ  ಅತ್ಯಂತ ಪ್ರಮುಖ ಮಹಿಳಾ ನಾಯಕಿಗೆ  ಪುಷ್ಪನಮನ ಸಲ್ಲಿಸಿದರು.