ಬೆಂಗಳೂರು, ಮಾ. 26, ಜನಜಂಗುಳಿಯ ಕಾರಣದಿಂದ ಎರಡು ದಿನಗಳ ಹಿಂದೆ ಸ್ಥಗಿತಗೊಳಿಸಿದದ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್ ಅನ್ನು ಸರ್ಕಾರ ಪುನರಾಂಭಿಸಿದೆ.ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಇಂದಿರಾ ಕ್ಯಾಂಟೀನ್'ನಲ್ಲಿ ಉಚಿತ ಊಟ ತಿಂಡಿಗೆ ಸರ್ಕಾರ ವ್ಯವಸ್ಥೆ ಆರಂಭಿಸಿದೆ.
ಶೆಪ್ ಟಾಕ್ ಫುಡ್ ಎಂಡ್ ಹಾಸ್ಪಿಟಾಲಿಟಿ ಸರ್ವಿಸ್ ಮುಖ್ಯಸ್ಥ ಗೋವಿಂದ ಪೂಜಾರಿ ಮಾತನಾಡಿ,ಕೋವಿಡ್-19 ಹಾವಳಿ ಹಿನ್ನೆಲೆ ಸ್ಥಗಿತವಾಗಿದ್ದ ಇಂದಿರಾ ಕ್ಯಾಂಟೀನ್ ಗುರುವಾರ ಬೆಳಿಗ್ಗೆ ಮತ್ತೆ ಆರಂಭವಾಗಿದೆ. ಸಾರ್ವಜನಿಕರಿಗೆ ಉಚಿತವಾಗಿ ಫುಡ್ ಸಪ್ಲೈ ಲಾಕ್ ಡೌನ್ ಆದೇಶ ಹಿನ್ನೆಲೆ ಜನರಿಗೆ ಊಟದ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದರು.
ಇಂದಿರಾ ಕ್ಯಾಂಟೀನ್ ಮೆನು ಬದಲಾವಣೆ:
ಪ್ರತಿದಿನ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ಸಂಜೆ ಊಟ ಪೂರೈಕೆ ಮಾಡಲಾಗುತ್ತಿತ್ತು.
ಪ್ರತೀ ಹೊತ್ತಿನಲ್ಲೂ ತಲಾ 70 ಸಾವಿರ ಮಂದಿಗೆ ಊಟ ತಿಂಡಿ ವಿತರಣೆ ಮಾಡಲಾಗುತ್ತಿತ್ತು. ಆದರೆ ಗುರುವಾರದಿಂದ ಮೂರೂ ಹೊತ್ತು ತಲಾ 11 ಸಾವಿರ ರೈಸ್ ಬಾತ್ ಹಾಗೂ ಪಲಾವ್ ಪೂರೈಕೆ, ರೈಸ್ ಬಾತ್ ಜೊತೆ ಚಟ್ನಿ ಹಾಗೂ ಪಲಾವ್ ಜೊತೆ ಗ್ರೇವಿ ನೀಡಲಾಗುತ್ತಿದೆ.ಬೆಂಗಳೂರಿನ 33 ವಾರ್ಡ್'ಗಳಲ್ಲಿ ತಲಾ 200 ಪ್ಯಾಕೆಟ್ ಆಹಾರ ವಿತರಿಸಲಾಗುತ್ತಿದ್ದು ಬೆಳಿಗ್ಗೆ 8 ಗಂಟೆ, ಮಧ್ಯಾಹ್ನ 12.30 ಹಾಗೂ ರಾತ್ರಿ 7.30ಕ್ಕೆ ಆಯ್ದ ಇಂದಿರಾ ಕ್ಯಾಂಟೀನ್'ಗಳಲ್ಲಿ ಈ ಆಹಾರ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.