ಬೆಂಗಳೂರು,
ಏ 5, ರಾಜ್ಯ ಸಕಾ೯ರ ಇಂದಿರಾ ಕ್ಯಾಂಟೀನಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ
ಬಡ ಜನರಿಗೆ ಉಚಿತ ಆಹಾರ ಪೂರೈಕೆ ನಿಲ್ಲಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ
(ಮಾಕ್ಸ೯ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಖಂಡಿಸಿದೆ. ಲಾಕ್‌ಡೌನ್
ಹಿನ್ನೆಲೆಯಲ್ಲಿ ಹಲವು ಜನ ತಮ್ಮ ಜೀವನಾಧಾರ ಕಳೆದುಕೊಂಡು ಆಹಾರಕ್ಕಾಗಿ
ಪರಿತಪಿಸುತ್ತಿರುವಾಗ ರಾಜ್ಯ ಬಿಜೆಪಿ ಸಕಾ೯ರವು ಸಮಗ್ರ ದೃಷ್ಟಿಕೋನವಿಲ್ಲದ
ದಿನಕ್ಕೊಂದು ಕ್ರಮವಹಿಸುತ್ತ ಜನತೆಯನ್ನು ವಂಚಿಸುತ್ತಿದೆ.ಲಾಕ್‌ಡೌನ್ ಆರಂಭವಾದಾಗ
ಪ್ರತಿ ದಿನ ಮೂರು ಹೊತ್ತು ಆಹಾರ ನೀಡುವುದನ್ನು ಆರಂಭಿಸಿ ಒಂದೆ ದಿನದಲ್ಲಿ ನಿಲ್ಲಿಸಿ
ತನ್ನ ಆಡಳಿತ ವೈಫಲ್ಯವನ್ನು ಪ್ರದಶಿ೯ಸಿದೆ. ಆನಂತರ ಟೀಕೆಗಳನ್ನು ಎದುರಿಸಲಾರದೆ ಮತ್ತೆ
ಇಂದಿರಾ ಕ್ಯಾಂಟೀನ್ ಗಳ ಬಳಿ ಬಂದವರಿಗೆ ಆಹಾರ ಪೊಟ್ಟಣ ಸರಬರಾಜಿಗೆ ಮುಂದಾಯಿತು. ಇದೀಗ
ಅದನ್ನು ನಿಲ್ಲಿಸಿ ಕಾಮಿ೯ಕ ಇಲಾಖೆಗೆ ಅದರ ಸಂಪೂರ್ಣ ಹೊಣೆ ಹೊರಿಸಲು ಮುಂದಾಗಿದೆ ಎಂದು
ಸಿಪಿಐಎಂ ರಾಜ್ಯ ಕಾರ್ಯದರ್ಶಿ ಉಮೇಶ್ ಆರೋಪಿಸಿದ್ದಾರೆ.ಸಕಾ೯ರದ ಈ ರೀತಿಯ ದಿನದಿನವು
ಬದಲಾಗುತ್ತಿರುವ ಧೋರಣೆಯಿಂದ ಬಡ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೆ ದಿನಕ್ಕೆ
ಮೂರು ಹೊತ್ತು ಇಂದಿರಾ ಕ್ಯಾಂಟೀನ್ ಆಹಾರವನ್ನು ಉಚಿತವಾಗಿ ಒದಗಿಸ ಬೇಕೆಂದು ಸಿಪಿಐ(ಎಂ)
ಒತ್ತಾಯಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.