ಸ್ಯಾನ್ ಫ್ರಾನ್ಸಿಸ್ಕೊ, ಬಹರೇನ್‌ನಿಂದ ಆಗಮಿಸಿದ ಭಾರತೀಯರು

ಬೆಂಗಳೂರು, ಜೂ 14,ವಂದೇ ಭಾರತ್ ಅಭಿಯಾನದಡಿ ವಿದೇಶಗಳಿಂದ ಭಾರತೀಯರನ್ನು ಕರೆ ತರುವ ಕಾರ್ಯ ಮುಂದುವರೆದಿದ್ದು,  ಸ್ಯಾನ್ ಫ್ರಾನ್ಸಿಸ್ಕೊ, ಬಹರೇನ್‌ನಿಂದ ಎರಡು ವಿಮಾನಗಳು ಶನಿವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ.ಬಹರೇನ್‌ನಿಂದ ಇಬ್ಬರು ಮಕ್ಕಳು, 54 ಮಹಿಳೆಯರು, 113 ಪುರುಷರು ಸ್ವದೇಶಕ್ಕೆ ಮರಳಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊದಿಂದ ಒಂದು ಮಗು, 37 ಮಹಿಳೆಯರು ಮತ್ತು 50 ಪುರುಷರು ಆಗಮಿಸಿದ್ದಾರೆ. ವಿದೇಶದಿಂದ ಬಂದ ಪ್ರತಿಯೊಬ್ಬರನ್ನೂ ಕ್ವಾರೆಂಟೀನ್ ಮಾಡಲಾಗಿದೆ.  ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಈ ಕುರಿತು ಮಾಹಿತಿ ನೀಡಿದ್ದು, ಇದುವರೆಗೆ ೩೬ ವಿಮಾನಗಳು ವಂದೇ ಭಾರತ್ ಅಭಿಯಾನದಡಿ ಬೆಂಗಳೂರಿಗೆ ಆಗಮಿಸಿವೆ. ಶನಿವಾರ ಬಂದ ವಿಮಾನದ ಯಾವುದೇ ಪ್ರಯಾಣಿಕರಿಗೆ ಕೋವಿಡ್-೧೯ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದರು.